»   » ನ್ಯಾಯಕ್ಕಾಗಿ ಅಭಿಯಾನ ಆರಂಭಿಸಿದ ಗುರು ರಾಜ್ ಕುಮಾರ್

ನ್ಯಾಯಕ್ಕಾಗಿ ಅಭಿಯಾನ ಆರಂಭಿಸಿದ ಗುರು ರಾಜ್ ಕುಮಾರ್

Posted By:
Subscribe to Filmibeat Kannada

ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ವಿದ್ವತ್ ಸಹಾಯಕ್ಕಾಗಿ ಡಾ ರಾಜ್ ಕುಮಾರ್ ಕುಟುಂಬಸ್ಥರು ಮುಂದಾಗಿದ್ದಾರೆ. ವಿದ್ವತ್ ಮೇಲೆ ಹಲ್ಲೆ ಆಗಿರುವುದನ್ನು ತಿಳಿದ ತಕ್ಷಣವೇ ಆಸ್ಪತ್ರೆಗೆ ದೌಡಾಯಿಸಿದ ಗುರು ರಾಜ್ ಕುಮಾರ್ ಮೇಲೆಯೂ ಹಲ್ಲೆ ಮಾಡಲು ಹಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಪ್ರಯತ್ನಿಸಿದ್ದರು ಎನ್ನುವ ವಿಚಾರಗಳು ಕೇಳಿಬಂದಿತ್ತು.

ನಿನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್ ಅವರ ಆರೋಗ್ಯವನ್ನ ವಿಚಾರಿಸಿ ಬಂದಿದ್ದರು. ನಂತ್ರ ಮಾತನಾಡಿದ ಪುನೀತ್ ವಿದ್ವತ್ ಫ್ಯಾಮಿಲಿಗೆ ಬೇಕಾದವರು ಕಾನೂನಿಗಿಂದ ದೊಡ್ಡವರಿಲ್ಲ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎನ್ನುವ ಮಾತಗಳನ್ನ ಹೇಳಿದ್ದರು.

ಹಲ್ಲೆಗೊಳಗಾಗಿರುವ ವಿದ್ವತ್ ಆರೋಗ್ಯ ವಿಚಾರಿಸಿದ ನಟ ಪುನೀತ್

ವಿದ್ವತ್ ಗಾಗಿ ಈಗ ಇಡೀ ರಾಜ್ ಕುಟುಂಬಸ್ಥರು ಮುಂದಾಗಿದ್ದಾರೆ. ನ್ಯಾಯಕ್ಕಾಗಿ ನಿನ್ನೆ ರಾತ್ರಿಯಿಂದಲೇ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಗುರು ರಾಜ್ ಕುಮಾರ್ ಫೇಸ್ ಬುಕ್ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದು ಸಾಕಷ್ಟು ಜನರು ಗುರು ಜೊತೆ ಕೈ ಜೋಡಿಸಿದ್ದಾರೆ. ಮುಂದೆ ಓದಿ

ಫೇಸ್ ಬುಕ್ ನಲ್ಲಿ ಶುರುವಾಯ್ತು ಅಭಿಯಾನ

ಗುರು ರಾಜ್ ಕುಮಾರ್ ಅವರ ಸ್ನೇಹಿತ ವಿದ್ವತ್ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾನೂನಿನ ಮೂಲಕ ವಿದ್ವತ್ ಗೆ ನ್ಯಾಯ ಸಿಗಬೇಕೆಂದು ಹ್ಯಾಷ್ ಟ್ಯಾಗ್ ಹಾಕಿ 'ಜಸ್ಟಿಸ್ ಫಾರ್ ವಿದ್ವತ್' ಎಂದು ಗುರು ರಾಜ್ ಕುಮಾರ್ ಫೇಸ್ ಬುಕ್ ಅಭಿಯಾನ ಪ್ರಾರಂಭ ಮಾಡಿದ್ದಾರೆ.

ಸ್ನೇಹಿತನ ಬಗ್ಗೆ ಸ್ಟೇಟಸ್ ಹಾಕಿದ ಗುರು

ವಿದ್ವತ್ ಹಾಗೂ ಗುರು ರಾಜ್ ಕುಮಾರ್ ಬಾಲ್ಯ ಸ್ನೇಹಿತರು , ಶಾಲೆಯಿಂದ ಕಾಲೇಜಿನವರೆಗೂ ಇಬ್ಬರೂ ಒಟ್ಟಿಗೆ ಬೆಳೆದು ಬಂದವರು. ಈ ಬಗ್ಗೆ ಗುರು ರಾಜ್ ಕುಮಾರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ವಿದ್ವತ್ ಜೊತೆ ಇರುವ ಎರಡು ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಬೇಗ ಹುಷಾರಾಗಿ ಬಾ ಸಹೋದರ

ಫೋಟೋ ಜೊತೆಯಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿರುವ ಗುರು ರಾಜ್ ಕುಮಾರ್. "ನನ್ನ ಸಹೋದರನಿಗೆ ನೋವಾದರೆ ನನಗೂ ನೋವಾಗುತ್ತದೆ. ಅವನ ನೋವು ನನ್ನ ನೋವಿದಂತೆ. ಬೇಗ ಹುಷಾರಾಗಿ ಬಾ" ಎಂದು ಬರೆದುಕೊಂಡಿದ್ದಾರೆ.

ಹೆಚ್ಚಾಗುತ್ತಿದೆ ಫೇಸ್ ಬುಕ್ ಅಭಿಯಾನ

ನಿನ್ನೆ ಪುನೀತ್ ರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ಕೊಟ್ಟ ನಂತರ ಗುರು ಫೇಸ್ ಬುಕ್ ನಲ್ಲಿ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಗುರು ರಾಜ್ ಕುಮಾರ್ ಜೊತೆಯಲ್ಲಿ ಅಭಿಮಾನಿಗಳು ಹಾಗೂ ಸಾಮಾನ್ಯ ಜನರು ಕೈ ಜೋಡಿಸಿದ್ದಾರೆ.

English summary
Rajkumar grand son Guru Raj Kumar begins campaign for Vidwat, who was attacked by Mohammed Nalapad, Justice has started campaigning in the name of Vidwat In the Facebook book, .Fans and ordinary people join hands to the campaign.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada