For Quick Alerts
  ALLOW NOTIFICATIONS  
  For Daily Alerts

  ಕನ್ನಡ ಮೀಡಿಯಂ ರಾಜು ಈಗ ಜೇಮ್ಸ್ ಬಾಂಡ್

  By Pavithra
  |

  'ಫಸ್ಟ್ ರ್ಯಾಂಕ್ ರಾಜು' ಹಾಗೂ 'ರಾಜು ಕನ್ನಡ ಮೀಡಿಯಂ' ಸಿನಿಮಾ ಮೂಲಕ ರಾಜು ಸೀರಿಸ್ ನಲ್ಲಿ ಕಾಣಿಸಿಕೊಂಡ ನಟ ಗುರುನಂದನ್ ಈಗ ಕಂಪ್ಲೀಟ್ ಬದಲಾಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. 'ಮಿಸ್ಸಿಂಗ್ ಬಾಯ್' ಸಿನಿಮಾ ಚಿತ್ರೀಕರಣ ಮುಗಿಸಿರುವ ಗುರು ಹೊಸ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಹೌದು ಈಗಾಗಲೇ ತಿಳಿದಿರುವಂತೆ ಗುರುನಂದನ್ 'ರಾಜು ಜೇಮ್ಸ್ ಬಾಂಡ್' ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

  'ಭಾಗ್ಯರಾಜ್' ಹಾಗೂ 'ಕಳ್ಬೇಟ್ಟದ ದರೋದೆಕೋರರು' ಚಿತ್ರವನ್ನು ನಿರ್ದೇಶನ ಮಾಡಿದ್ದ ದೀಪಕ್ ಮದುವನಹಳ್ಳಿ 'ರಾಜು ಜೇಮ್ಸ್ ಬಾಂಡ್'' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪಂಜಾಬ್ ನಲ್ಲಿ ನಡೆದ ನೈಜ ಘಟನೆಯ ಪ್ರೇರಣೆಯೇ 'ರಾಜು ಜೇಮ್ಸ್ ಬಾಂಡ್' ಸಿನಿಮಾ ಕಥೆಯಂತೆ.

  ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ರಚಿತಾ ರಾಮ್ ! ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ರಚಿತಾ ರಾಮ್ !

  ಥ್ರಿಲ್ಲರ್ ಮತ್ತು ರೊಮ್ಯಾಂಟಿಕ್ ಕಾಮಿಡಿ ಸ್ಟೋರಿ ಇರುವ 'ರಾಜು ಜೇಮ್ಸ್ ಬಾಂಡ್' ಚಿತ್ರವನ್ನು ಮಂಜುನಾಥ್ ವಿಶ್ವಕರ್ಮ ನಿರ್ಮಿಸುತ್ತಿದ್ದಾರೆ. ಇದೊಂದು ಬ್ಯಾಂಕ್ ರಾಬರಿ ಕಥೆಯಾಗಿದ್ದು ಕನ್ನಡದ ನೆಟಿವಿಟಿಗೆ ಸರಿಯಾಗಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ.

  Gurunandan is acting as a hero in the Raju James Bond film

  ಸಂಡೂರಿನಲ್ಲಿ ಸಿನಿಮಾದ ಬಹತೇಕ ಚಿತ್ರೀಕರಣ ನಡೆಯಲಿದ್ದು ಕೆಲ ದೃಶ್ಯಗಳನ್ನು ಮಾತ್ರ ಲಂಡನ್ ನಲ್ಲಿ ಚಿತ್ರೀಕರಿಸಲಿದೆ ಸಿನಿಮಾತಂಡ. ಚಿತ್ರಕ್ಕೆ ಮನೋಹರ್ ಜೋಶಿ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಆಗಸ್ಟ್ 17 ರಂದು ಚಿತ್ರದ ಮುಹೂರ್ತ ನಡೆಯಲಿದ್ದು ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಶುರು ಆಗಲಿದೆ.

  English summary
  Kannada actor Gurunandan is acting as a hero in the Raju James Bond film. The film is being directed by Deepak Madavanavanalli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X