For Quick Alerts
  ALLOW NOTIFICATIONS  
  For Daily Alerts

  ಒಂದೇ ತಿಂಗಳಿನಲ್ಲಿ 'ಸ್ಮೈಲ್ ಪ್ಲೀಸ್' ಚಿತ್ರೀಕರಣ ಫಿನಿಶ್.!

  By Harshitha
  |

  ಕಳೆದ ತಿಂಗಳಷ್ಟೇ ಮುಹೂರ್ತ ಮುಗಿಸಿದ 'ಕೆ.ಮಂಜು ಸಿನಿಮಾಸ್' ಲಾಂಛನದಡಿಯಲ್ಲಿ ನಿರ್ಮಾಪಕ ಕೆ.ಮಂಜು ನಿರ್ಮಿಸುತ್ತಿರುವ 'ಸ್ಮೈಲ್ ಪ್ಲೀಸ್' ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.

  35 ದಿನಗಳ ಕಾಲ ಕನಕಪುರ, ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಮೂರು ಹಾಡುಗಳು ಸೇರಿದಂತೆ 'ಸ್ಮೈಲ್ ಪ್ಲೀಸ್' ಚಿತ್ರದ ಚಿತ್ರೀಕರಣ ನಡೆದಿದೆ. [ನಿರ್ಮಾಪಕ ಕೆ.ಮಂಜುಗೆ ಬೆಂಗಳೂರು ಹುಡುಗಿಯರೇ ಬೇಕಂತೆ!]

  ಇನ್ನೂ ಎರಡು ಹಾಡುಗಳು ಬಾಕಿ ಉಳಿದದ್ದು, ಸದ್ಯದಲ್ಲೇ ಚಿತ್ರೀಕರಣ ನಡೆಯಲಿದೆ ಅಂತ ಕೆ.ಮಂಜು ತಿಳಿಸಿದ್ದಾರೆ. 'ಸ್ಮೈಲ್ ಪ್ಲೀಸ್' ಚಿತ್ರಕ್ಕೆ ಜೆ.ಎಸ್.ವಾಲಿ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ಕವಿರಾಜ್ ಸಾಹಿತ್ಯ, ಅನೂಪ್ ಸೀಳಿನ್ ಸಂಗೀತ ಇದೆ. [ನಿರ್ಮಾಪಕ ಕೆ.ಮಂಜುಗೆ ಸಿಕ್ಕ ಕೇರಳ ಕುಟ್ಟಿ ಯಾರು?]

  ಟಿ.ಎನ್.ಸೀತಾರಾಮ್ ಬಳಿ ಸಹ ನಿರ್ದೇಶಕರಾಗಿ ಹಾಗೂ ಹಲವು ಧಾರಾವಾಹಿಗಳಿಗೆ ಸಂಭಾಷಣೆಯನ್ನು ಬರೆದಿದ್ದ ರಘು ಸಮರ್ಥ್ 'ಸ್ಮೈಲ್ ಪ್ಲೀಸ್' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

  'ಸ್ಮೈಲ್ ಪ್ಲೀಸ್' ಚಿತ್ರದ ತಾರಾಗಣದಲ್ಲಿ 'ಫಸ್ಟ್ ರ್ಯಾಂಕ್ ರಾಜು' ಖ್ಯಾತಿಯ ಗುರುನಂದನ್, ಕಾವ್ಯಶೆಟ್ಟಿ, ನೇಹಾ ಪಾಟೀಲ್, ರಂಗಾಯಣ ರಘು, ಶ್ರೀನಿವಾಸ್ ಪ್ರಭು ಮುಂತಾದವರಿದ್ದಾರೆ.

  English summary
  Kannada Actor Gurunandan of 'First Rank Raju' fame starrer Kannada Movie 'Smile Please' has completed shooting in 35 days. The movie is directed by Raghu Samarth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X