»   » 'ಎರಡನೇ ಸಲ' ಚಿತ್ರದ 2ನೇ ಟ್ರೈಲರ್ ನಲ್ಲೂ ಕಾಫಿದ್ದೇ ಕಾರುಬಾರು

'ಎರಡನೇ ಸಲ' ಚಿತ್ರದ 2ನೇ ಟ್ರೈಲರ್ ನಲ್ಲೂ ಕಾಫಿದ್ದೇ ಕಾರುಬಾರು

Posted By:
Subscribe to Filmibeat Kannada
ಮಠ ಖ್ಯಾತಿಯ ಗುರುಪ್ರಸಾದ್ ಆಕ್ಷನ್ ಕಟ್ ಹೇಳಿರುವ 'ಎರಡನೇ ಸಲ' ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಕಾಫಿ ಗೆ ಹೊಸ ಅರ್ಥ ಕೊಟ್ಟ ಈ ಟ್ರೈಲರ್ ನೋಡಿ ಗುರು ಪ್ರಸಾದ್ ಅವರ ಸಂಭಾಷಣೆಗೆ ಪಡ್ಡೆ ಹೈಕ್ಳು ಫುಲ್ ಫಿದಾ ಆಗಿದ್ರು. ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಚಿತ್ರತಂಡ ಈಗ ಸಿನಿಮಾದ ಎರಡನೇ ಟ್ರೈಲರ್ ರಿಲೀಸ್ ಮಾಡಿದೆ.['ಎರಡನೇ ಸಲ' ಟ್ರೈಲರ್ ನೋಡಿದ್ರೆ, ಇನ್ಮುಂದೆ 'ಕಾಫಿ'ನೇ ಕುಡಿಯಲ್ಲಾ!]

ಸಿನಿ ರಸಿಕರು ಒಂದ್ ವಿಷ್ಯಾ ಮಾತ್ರ ನೆನಪಲ್ಲಿ ಇಟ್ಟುಕೊಳ್ಳಿ. ಗುರುಪ್ರಸಾದ್ ಅವರ 'ಎರಡನೇ ಸಲ' ಚಿತ್ರದ ಎರಡನೇ ಟ್ರೈಲರ್ ಅರ್ಥ ಆಗಬೇಕು ಅಂದ್ರೆ ನೀವು ''ಎರಡನೇ ಸಲ' ದ ಮೊದಲ ಟ್ರೈಲರ್ ನೋಡಲೇಬೇಕು. ಕಾಫಿಗೆ ಡಬಲ್ ಮೀನಿಂಗ್ ನಲ್ಲಿ ಹೊಸ ಅರ್ಥ ಕೊಟ್ಟ ಗುರುಪ್ರಸಾದ್, ಈ ಚಿತ್ರದ ಎರಡನೇ ಟ್ರೈಲರ್ ನಲ್ಲೂ ಕಾಫಿಯ ಕಾರುಬಾರನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. 'ಎರಡನೇ ಸಲ'ದ ಮೊದಲನೇ ಟ್ರೈಲರ್ ನೋಡದೇ ಎರಡನೇ ಟ್ರೈಲರ್ ನೋಡಿದ್ರೆ ಅಸಲಿ ಈ ಕಾಫಿ ಅಂದ್ರೆ ಏನು ಅನ್ನೋದು ಅರ್ಥವಾಗಲ್ಲ. ಹಾಗೆ ಫಿಲ್ಟರ್ ಕಾಫಿಗೂ, ಟೀಗೂ ಎಲ್ಲಿಂದೆಲ್ಲಿಯ ಸಂಬಂಧ ಅಂತಾನು ಗೊತ್ತಾಗಲ್ಲ.

Guruprasad's

ಇನ್ನೂ ಕಾಮಿಡಿ ಜೊತೆಗೆ ಸಾವು, ಪ್ರೀತಿಯಲ್ಲಿ ನೋವು, ಪ್ರೇಮ ಕುರುಡ ಅಥವಾ ಅಲ್ಲವಾ ಎಂಬುದನ್ನು ಸಂಭಾಷಣೆಯಲ್ಲಿ ಗುರುಪ್ರಸಾದ್ ಹಿಂದಿನ ಸಿನಿಮಾಗಳ ಶೈಲಿಯಲ್ಲಿ ಹೇಳಿದ್ದು, ಪ್ರೇಕ್ಷಕರಲ್ಲಿ ಕ್ರೇಜ್ ಹೆಚ್ಚಿಸಿದೆ.

Guruprasad's

'ಎರಡನೇ ಸಲ' ಚಿತ್ರದಲ್ಲಿ ನಟ ಧನಂಜಯ್ ಮತ್ತು ಸಂಗೀತಾ ಭಟ್ ನಾಯಕ-ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟಿ ಲಕ್ಷ್ಮಿ, ನಟ ಅವಿನಾಶ್, ಕಿರಿಕ್ ಕೀರ್ತಿ, ಗುರುಪ್ರಸಾದ್ ನಿರ್ದೇಶನದ ಜೊತೆಗೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಯೋಗೇಶ್ ನಾರಾಯಣ್ 'ಎರಡನೇ ಸಲ' ಚಿತ್ರ ನಿರ್ಮಾಣ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಚಿತ್ರತಂಡ ಸದ್ಯದಲ್ಲೇ ಸಿನಿಮಾ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಚಿತ್ರದ ಎರಡನೇ ಟ್ರೈಲರ್ ಇಲ್ಲಿದೆ ನೋಡಿ.

English summary
Kannada Director Guruprasad Direcrorial ''Eradane Sala'' Movie's Second trailer released

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada