»   » 'ಎರಡನೇ ಸಲ' ಟ್ರೈಲರ್ ನೋಡಿದ್ರೆ, ಇನ್ಮುಂದೆ 'ಕಾಫಿ'ನೇ ಕುಡಿಯಲ್ಲಾ!

'ಎರಡನೇ ಸಲ' ಟ್ರೈಲರ್ ನೋಡಿದ್ರೆ, ಇನ್ಮುಂದೆ 'ಕಾಫಿ'ನೇ ಕುಡಿಯಲ್ಲಾ!

Written By:
Subscribe to Filmibeat Kannada

ಕನ್ನಡದ ಡಿಫರೆಂಟ್ ಡೈರೆಕ್ಟರ್ ಗುರುಪ್ರಸಾದ್ ನಿರ್ದೇಶನದ 'ಎರಡನೇ ಸಲ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಪಡ್ಡೆ ಹೈಕ್ಳ ಫೇವರೆಟ್ ಎನಿಸಿಕೊಂಡಿದೆ. ಇದಕ್ಕೆ ಕಾರಣ 'ಕಾಫಿ'.

ಕಾಫಿಗೂ, 'ಎರಡನೇ ಸಲ' ಚಿತ್ರಕ್ಕೂ ಏನ್ ಸಂಬಂಧ ಅಂತ ನಮ್ಮನ್ನ ಕಳ್ಬೇಡಿ. 'ಎರಡನೇ ಸಲ' ಚಿತ್ರದ ಟ್ರೈಲರ್ ನೋಡಿದ್ರೆ ನಿಮ್ಗೆ ಉತ್ತರ ಸಿಗುತ್ತೆ. ಯಾಕಂದ್ರೆ, ಇಷ್ಟು ದಿನ 'ಕಾಫಿ' ಅಂದ್ರೆ ಅದಕ್ಕೊಂದು ಅರ್ಥವಿತ್ತು. ಆದ್ರೆ, 'ಎರಡನೇ ಸಲ' ಟ್ರೈಲರ್ ನೋಡಿದ ಮೇಲೆ 'ಕಾಫಿ'ಗೆ ಹೊಸ ಅರ್ಥ ಸಿಕ್ಕಿದೆ.

Guruprasad's Eradane Sala Movie trailer released

'ಡೈರೆಕ್ಟರ್ ಸ್ಪೆಷಲ್', 'ಮಠ', 'ಎದ್ದೇಳು ಮಂಜುನಾಥ್' ಅಂತಹ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ಗುರು ಪ್ರಸಾದ್, ಎರಡನೇ ಸಲ ಚಿತ್ರವನ್ನ ಶುರು ಮಾಡಿ ಸುಮಾರು ಮೂರು ವರ್ಷಗಳಾಗಿತ್ತು. ಆದ್ರೆ, ಕೊನೆಗೂ ಸಿನಿಮಾ ಮುಗಿಸಿದ್ದು, ಈಗ ಚಿತ್ರದ ಆಡಿಯೋ ಜೊತೆಗೆ ಟ್ರೈಲರ್ ಬಿಡುಗಡೆಯಾಗಿದೆ.

Guruprasad's Eradane Sala Movie trailer released

ಸ್ಪೆಷಲ್ ಸ್ಟಾರ್ ಧನಂಜಯ್ ಈ ಚಿತ್ರದ ನಾಯಕನಾಗಿದ್ದು, ಸಂಗೀತಾ ಭಟ್ ಚಿತ್ರದ ನಾಯಕಿಯಾಗಿದ್ದಾರೆ. ಹಿರಿಯ ನಟಿ ಲಕ್ಷ್ಮಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಹಿಂದೆ 'ಮೊದಲ ಸಲ' ಸಿನಿಮಾ ಮಾಡಿದ್ದ ಯೋಗೇಶ್ ನಾರಾಯಣ್ 'ಎರಡನೇ ಸಲ' ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ.

ಗುರು ಪ್ರಸಾದ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು, ಅನೂಪ್ ಸೀಳಿನ್ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ಸದ್ಯ ಆಡಿಯೋ ಹಾಗೂ ಟ್ರೈಲರ್ ರಿಲೀಸ್ ಮಾಡಿದ್ದು, ಆದಷ್ಟೂ ಬೇಗ ಸಿನಿಮಾ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

English summary
Kannada Director Guruprasad Directed ''Eradane Sala'' Movie trailer released: Watch the video.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada