»   » ಡಾ.ರಾಜ್ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಏನಂದ್ರು ಗೊತ್ತಾ?

ಡಾ.ರಾಜ್ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಏನಂದ್ರು ಗೊತ್ತಾ?

Posted By:
Subscribe to Filmibeat Kannada

ಎಚ್.ಡಿ.ಕುಮಾರಸ್ವಾಮಿ ಈಗ ಖ್ಯಾತ ರಾಜಕಾರಣಿ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ, ರಾಜಕೀಯಕ್ಕೆ ಕಾಲಿಡುವ ಮೊದಲು, ದೇವೇಗೌಡರ ಈ ಸುಪುತ್ರ ಗುರುತಿಸಿಕೊಂಡಿದ್ದು ಕನ್ನಡ ಚಿತ್ರರಂಗದಲ್ಲಿ.

ಹಂಚಿಕೆದಾರರಾಗಿ, ನಿರ್ಮಾಪಕರಾಗಿ ಅನೇಕ ಯಶಸ್ವಿ ಸಿನಿಮಾಗಳನ್ನ ನೀಡಿರುವ ಎಚ್.ಡಿ.ಕುಮಾರಸ್ವಾಮಿ, ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವುದಕ್ಕೆ ಪ್ರೇರಣೆಯಾದವರು ಯಾರು ಗೊತ್ತಾ?

ನೀವು ನಂಬುತ್ತೀರೋ...ಬಿಡುತ್ತೀರೋ... ನಟ ಸಾರ್ವಭೌಮ ಡಾ.ರಾಜ್ ಕುಮಾರ್ ರಿಂದ ಮಾನವೀಯ ಮೌಲ್ಯಗಳನ್ನ ಎಚ್.ಡಿ.ಕೆ ಕಲಿತರಂತೆ..! ಮಗ ನಿಖಿಲ್ ಗೌಡ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ಶುಭ ವಿಚಾರವನ್ನ ಹಂಚಿಕೊಂಡ ಸಂದರ್ಭದಲ್ಲಿ, ಚಿತ್ರರಂಗದ ಜೊತೆಗೆ ತಮ್ಮ ಒಡನಾಟ ಹಾಗು ಅಣ್ಣಾವ್ರ ಬಗ್ಗೆ ಕುಮಾರಸ್ವಾಮಿ ಮನಬಿಚ್ಚಿ ಮಾತನಾಡಿದರು. ಮುಂದೆ ಓದಿ.....

''ರಾಜಕೀಯಕ್ಕಿಂತ ಚಿತ್ರರಂಗಕ್ಕೆ ಮೊದಲ ಆದ್ಯತೆ''

''ಬಹಳ ದಿನಗಳ ನಂತ್ರ ಚೆನ್ನಾಂಬಿಕ ಫಿಲ್ಮ್ಸ್ ಬ್ಯಾನರ್ ನಡಿ ಒಂದು ಒಳ್ಳೆ ಸಿನಿಮಾ ಮಾಡುತ್ತಿದ್ದೇನೆ. ನಾನು ಹಲವಾರು ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದೀನಿ. ವೈಯುಕ್ತಿಕವಾಗಿ ರಾಜಕಾರಣಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗವೇ ನನ್ನ ಮೊದಲ ಆದ್ಯತೆ ಅಂತ ಹಲವಾರು ಬಾರಿ ಹೇಳಿದ್ದೇನೆ. ಬಹುಶಃ ನಾನು ಚಿತ್ರನಟ ಆಗದೇ ಇದ್ದರೂ, ಕನ್ನಡ ಚಿತ್ರರಂಗದ ಮೇಲೆ ಅಭಿಮಾನ, ವ್ಯಾಮೋಹ ನನ್ನ ರಕ್ತದಲ್ಲೇ ಬಂದಿದೆ.'' - ಎಚ್.ಡಿ.ಕುಮಾರಸ್ವಾಮಿ [ಕೆಸಿಎನ್ ಮೋಹನ್ ಮಗಳಿಗೂ, ಎಚ್ಡಿಕೆ ಮಗನಿಗೂ ಡುಂಡುಂಡುಂ]

ಚಿತ್ರರಂಗದಿಂದ ದೂರ ಸರಿದಿದ್ದು ಯಾಕೆ?

''ರಾಜಕಾರಣದಲ್ಲಿ ನಾಡಿನ ಜನತೆ ನನ್ನನ್ನ ಗುರುತಿಸಿದಾಗ, ಅವರಿಗೆ ನಾವು ಮೋಸ ಮಾಡಬಾರದು ಅಂತ ಚಿತ್ರರಂಗದಿಂದ ದೂರ ಸರಿದು, ರಾಜಕಾರಣದಲ್ಲಿ ತೊಡಗಿಸಿಕೊಂಡೆ.'' - ಎಚ್.ಡಿ.ಕುಮಾರಸ್ವಾಮಿ [ಎಚ್.ಡಿ.ಕೆ ಪುತ್ರನಿಗೆ ಶಿವಣ್ಣನ ಪ್ರೀತಿಯ ಶುಭಾಶಯ]

ಬಡವರ ಬಗ್ಗೆ ಅನುಕಂಪ ಬರುವುದಕ್ಕೆ ಡಾ.ರಾಜ್ ಕಾರಣ..!

''ಸಮಾಜ ಪರಿವರ್ತನೆ ಮಾಡಬೇಕಾದ್ರೆ, ರಾಜಕೀಯಕ್ಕಿಂತ ಸಿನಿಮಾ ಕ್ಷೇತ್ರ ಬಹಳ ಪರಿಣಾಮಕಾರಿ. ನನ್ನಲ್ಲಿ ಮಾನವೀಯ ಮೌಲ್ಯಗಳನ್ನ, ನಾನು ಬಡವರ ಬಗ್ಗೆ ಅನುಕಂಪ ತೋರಿಸುವುದನ್ನ ಏನಾದರೂ ಬೆಳೆಸಿಕೊಂಡಿದ್ದರೆ, ಅದಕ್ಕೆ ಕಾರಣ ಕನ್ನಡ ಚಿತ್ರರಂಗ. ಅದ್ರಲ್ಲೂ ವಿಶೇಷವಾಗಿ ಡಾ.ರಾಜ್ ಕುಮಾರ್.'' - ಎಚ್.ಡಿ.ಕುಮಾರಸ್ವಾಮಿ [ಡಾ.ರಾಜ್ ಕುಮಾರ್ ನನಗೆ ಸ್ಪೂರ್ತಿ - ನಿಖಿಲ್ ಗೌಡ]

''ಚಿಕ್ಕವಯಸ್ಸಿಂದಲೂ ನಾನು ಡಾ.ರಾಜ್ ಅಭಿಮಾನಿ''

''ಚಿಕ್ಕವಯಸ್ಸಿಂದಲೂ ನಾನು ಡಾ.ರಾಜ್ ಕುಮಾರ್ ಅವರ ಹಲವಾರು ಸಿನಿಮಾಗಳನ್ನ ನೋಡಿಕೊಂಡು ಬಂದಿದ್ದೇನೆ. ಅವರ ಸಿನಿಮಾಗಳು ನನಗೆ ಪ್ರೇರಣೆ. ಇದನ್ನ ನಾನು ಹೆಮ್ಮೆಯಿಂದ ಹೇಳೋಕೆ ಬಯಸುತ್ತೇನೆ. ಇವತ್ತು ಒಬ್ಬರ ಕಷ್ಟಕ್ಕೆ ನಾನು ಸ್ಪಂದಿಸುತ್ತೇನೆ ಅಂದ್ರೆ, ಅದಕ್ಕೆ ಡಾ.ರಾಜ್ ಕುಮಾರ್ ಮತ್ತು ಅವರ ಸಿನಿಮಾಗಳು ಕಾರಣ'' - ಎಚ್.ಡಿ.ಕುಮಾರಸ್ವಾಮಿ ['ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ]

''ಮಗ ಹೀರೋ ಆಗ್ಬೇಕು ಅನ್ನೋದೇ ನನ್ನ ಆಸೆ''

''ನಾನು ನನ್ನ ಮಗನಿಗೆ ಏಳೆಂಟು ವರ್ಷದಿಂದ ಹೇಳುತ್ತಲೇ ಇದ್ದೆ - ''ನೋಡು ನನಗೆ ಎಲ್ಲೋ ಒಂದು ಕಡೆ ನೀನು ಚಿತ್ರನಟನಾಗಬೇಕೆನ್ನುವ ಆಸೆ ಇದೆ. ಆ ಕಡೆ ನೀನು ಗಮನ ಕೊಡು'' ಅಂತ ಹೇಳಿದ್ದೆ. ಆದ್ರೆ, ಒತ್ತಾಯ ಹಾಕಿರಲಿಲ್ಲ. ಅವನ ಜೀವನ ಅವನೇ ರೂಪಿಸಿಕೊಳ್ಳಲಿ ಅಂತ ಬಿಟ್ಟಿದ್ದೆ.'' - ಎಚ್.ಡಿ.ಕುಮಾರಸ್ವಾಮಿ

ನಿಖಿಲ್ ಆಸೆಯೂ ಹೀರೋ ಆಗ್ಬೇಕು ಅನ್ನೋದೇ..!

''ಕಳೆದ ಒಂದು ವರ್ಷದ ಹಿಂದೆ ನಿಖಿಲ್ ನನ್ನ ಜೊತೆ ಚರ್ಚೆ ಮಾಡಿದ. ಚಿತ್ರರಂಗದಲ್ಲಿ ಬೆಳೀಬೇಕು ಅಂತ ನಿರ್ಧಾರ ಮಾಡಿದ್ದೇನೆ ಅಂತ ಹೇಳಿದ್ದ. ನಂತ್ರ ಈ ಚಿತ್ರ ನಿರ್ಮಾಣ ಮಾಡಬೇಕು ಅಂತ ತೀರ್ಮಾನ ಮಾಡ್ದೆ. ಹಲವಾರು ನಿರ್ದೇಶಕರ ಜೊತೆ ಮಾತುಕತೆ ನಡೆಸಿದ್ವಿ.'' - ಎಚ್.ಡಿ.ಕುಮಾರಸ್ವಾಮಿ [ಪುರಿ ಜಗನ್ನಾಥ್ ಅಲ್ಲ..! ನಿಖಿಲ್ ಚಿತ್ರಕ್ಕೆ ಹೊಸಬರು ಬಂದ್ರಲ್ಲ!]

''ನನ್ನ ಮಗ ಮಚ್ಚು-ಲಾಂಗು ಹಿಡಿಯೋಲ್ಲ.!''

''ನನ್ನ ಮಗನಿಗೆ ನಾನು ಹೇಳಿದ್ದೇನೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಸಿನಿಮಾಗಳನ್ನ ಮಾಡ್ಬೇಕಂತ. ಮಚ್ಚು-ಲಾಂಗು ಹಿಡಿದುಕೊಂಡು ಹೀರೋಯಿಸಂ ಬೆಳೆಸಬೇಕಾಗಿಲ್ಲ.'' - ಎಚ್.ಡಿ.ಕುಮಾರಸ್ವಾಮಿ

ಆಗಸ್ಟ್ 2 ಕ್ಕೆ 'ಜಾಗ್ವಾರ್' ಮುಹೂರ್ತ

ನಿನ್ನೆಯಷ್ಟೇ ಪತ್ರಿಕಾಗೋಷ್ಠಿ ಕರೆದು, ಮಗ ನಿಖಿಲ್ ಗೌಡ ಚೊಚ್ಚಲ ಚಿತ್ರದ ಬಗ್ಗೆ ಅನೇಕ ವಿಚಾರಗಳನ್ನ ಪ್ರಸ್ಥಾಪಿಸಿದ ಎಚ್.ಡಿ.ಕುಮಾರಸ್ವಾಮಿ, ಆಗಸ್ಟ್ 2 ರಂದು 'ಜಾಗ್ವಾರ್' ಚಿತ್ರಕ್ಕೆ ಚಾಲನೆ ನೀಡುತ್ತಿದ್ದಾರೆ. 'ಜಾಗ್ವಾರ್' ಸಂಪೂರ್ಣ ಫ್ಯಾಮಿಲಿ ಸೆಂಟಿಮೆಂಟ್ ಚಿತ್ರವಾಗಿರಲಿದೆ.

English summary
Ex CM H.D.Kumaraswamy's son Nikhil Gowda is all set to make his Sandalwood debut with the movie 'Jaguar'. While announcing this project, H.D.Kumaraswamy spoke about his association with Kannada Cinemas and how Dr.Rajkumar inspired him to enter this industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada