For Quick Alerts
  ALLOW NOTIFICATIONS  
  For Daily Alerts

  'ಕನ್ನಡ ಚಿತ್ರರಂಗದ ಅವಸ್ಥೆ' ವಿರುದ್ದ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ

  By Bharath Kumar
  |

  ಮಾಜಿ ಮುಖ್ಯಮಂತ್ರಿ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ಹೆಚ್.ಡಿ.ಕುಮಾರಸ್ವಾಮಿ ಕನ್ನಡ ಚಿತ್ರರಂಗದ ಅವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳಿಗೆ ಮನ್ನಣೆ ಸಿಗುತ್ತಿಲ್ಲ. ದುಡ್ಡು ಇದ್ದವರ ಚಿತ್ರಗಳಿಗೆ ಮಾತ್ರ ಇಲ್ಲಿ ಉಳಿಗಾಲ. ಸಣ್ಣ ನಿರ್ಮಾಪಕರ ಪಾಡು ಕೇಳುವವರೇ ಇಲ್ಲ ಅಂತ ಆಕ್ರೋಶಗೊಂಡಿದ್ದಾರೆ.

  'ಚಂದ್ರ ಚಕೋರಿ', 'ಸೂರ್ಯವಂಶ', 'ಪ್ರೇಮೋತ್ಸವ', 'ಗಲಾಟೆ ಅಳಿಯಂದಿರು' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ಮಾಡಿದ್ದ ಕುಮಾರಸ್ವಾಮಿ, ಈಗ ತಮ್ಮ ಮಗ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗುವ ನಿರ್ಧಾರ ಮಾಡಿದ್ದಾರೆ. ಆದರೆ, ಸುಮಾರು 12 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ವಾಪಾಸ್ಸಾಗಿರುವ ಹೆಚ್.ಡಿ.ಕೆ, ಸ್ಯಾಂಡಲ್ ವುಡ್ ನಲ್ಲಿರುವ ಪ್ರಸ್ತುತ ಸಮಸ್ಯೆಗಳಿಂದ ಬೇಜಾರಾಗಿದ್ದಾರೆ.['ಜಾಗ್ವಾರ್' ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ ಗಳಿವು..]

  ಹೌದು, 'ಜಾಗ್ವಾರ್' ಚಿತ್ರದ ಸಕ್ಸಸ್ ಮೀಟ್ ಏರ್ಪಡಿಸಿದ್ದ ಹೆಚ್.ಡಿ.ಕೆ ಚಲನಚಿತ್ರ ನಿರ್ಮಾಪಕರ ಸಂಘ ಹಾಗೂ ವಾಣಿಜ್ಯ ಮಂಡಳಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

  ಅಷ್ಟಕ್ಕೂ, ಕುಮಾರಸ್ವಾಮಿ ಅವರ ಕೋಪಕ್ಕೆ ಕಾರಣವೇನು ? ಜಾಗ್ವಾರ್ ಚಿತ್ರದ ನಿರ್ಮಾಣದಿಂದ ಹೆಚ್ ಡಿ ಕೆ ಗೆ ಎದುರಾದ ಸಮಸ್ಯೆಗಳೇನು ಅಂತ ಇಲ್ಲಿದೆ ನೋಡಿ.

  'ಜಾಗ್ವಾರ್' ಸಕ್ಸಸ್ ಮೀಟ್ ನಲ್ಲಿ 'ಹೆಚ್ ಡಿ ಕೆ ಗರಂ'

  'ಜಾಗ್ವಾರ್' ಸಕ್ಸಸ್ ಮೀಟ್ ನಲ್ಲಿ 'ಹೆಚ್ ಡಿ ಕೆ ಗರಂ'

  ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ 'ಜಾಗ್ವಾರ್' ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆ ಇತ್ತೀಚೆಗೆ 'ಜಾಗ್ವಾರ್' ಚಿತ್ರದ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿನಿಮಾ ಗೆದ್ದ ಸಂತಸವನ್ನ ಹಂಚಿಕೊಳ್ಳಲು ಮಾಜಿ ಮುಖ್ಯಮಂತ್ರಿ ಹಾಗೂ ನಿರ್ಮಾಪಕ ಹೆಚ್.ಡಿ ಕುಮಾರಸ್ವಾಮಿ, ಚಿತ್ರದ ನಾಯಕ ನಿಖಿಲ್ ಕುಮಾರ್, ನಟ ಸಂಪತ್ ಕುಮಾರ್, ಲಹರಿ ವೇಲು ಸೇರಿದಂತೆ ಹಲವರು ಭಾಗವಹಿಸಿದ್ದರು.[ವಿಮರ್ಶೆ : ಮಿಂಚಿನ ವೇಗದ 'ಜಾಗ್ವಾರ್' ಚಿಂದಿ ಚಿತ್ರಾನ್ನ ]

  ಸಂತಸಕ್ಕಿಂತ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ

  ಸಂತಸಕ್ಕಿಂತ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ

  ಸಿನಿಮಾ ಗೆದ್ದ ಸಂತಸಕ್ಕಿಂತ ತಮಗೆ ಎದುರಾದ ಸಮಸ್ಯೆಗಳನ್ನ ಹೆಚ್.ಡಿ ಕುಮಾರಸ್ವಾಮಿ ಪ್ರಸ್ಥಾಪಿಸಿದರು. 'ಜಾಗ್ವಾರ್' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರು, ಈ ವಾರ ಹಲವು ಚಿತ್ರಮಂದಿರಗಳಿಂದ ಸಿನಿಮಾವನ್ನ ತೆಗೆಯುವ ನಿರ್ಧಾರ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.[ಟ್ವಿಟ್ಟರ್ ವಿಮರ್ಶೆ: 'ಜಾಗ್ವಾರ್' ಝಗಮಗ ಬಲು ಜೋರು ಗುರು.! ]

  ಕಲೆಕ್ಷನ್ ಉತ್ತಮವಾಗಿದ್ದರು ಗೇಟ್ ಪಾಸ್ ಯಾಕೆ,?

  ಕಲೆಕ್ಷನ್ ಉತ್ತಮವಾಗಿದ್ದರು ಗೇಟ್ ಪಾಸ್ ಯಾಕೆ,?

  ಈ ವಾರ ಉಪೇಂದ್ರ ಹಾಗೂ ಸುದೀಪ್ ಅಭಿನಯದ 'ಮುಕುಂದ ಮುರಾರಿ' ಹಾಗೂ ಯಶ್ ಅಭಿನಯದ 'ಸಂತು Straight Forward' ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಆದ್ದರಿಂದ ಈ ಚಿತ್ರಗಳಿಗೆ ಚಿತ್ರಮಂದಿರಗಳನ್ನ ನೀಡಲು 'ಜಾಗ್ವಾರ್' ಸಿನಿಮಾವನ್ನ ತೆಗೆಯಲಾಗುತ್ತಿದೆಯಂತೆ.

  ಕುಮಾರಸ್ವಾಮಿ ಸವಾಲ್

  ಕುಮಾರಸ್ವಾಮಿ ಸವಾಲ್

  ''ಹಲವು ಚಿತ್ರಮಂದಿರಗಳಲ್ಲಿ 'ಜಾಗ್ವಾರ್' ಸಿನಿಮಾ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ಹಲವು ಥಿಯೇಟರ್ ಗಳಲ್ಲಿ 1.5 ಲಕ್ಷ ಕ್ಕಿಂತ ಹೆಚ್ಚು ಶೇರ್ ಇದೆ. ಆದರೂ, ಸಿನಿಮಾ ತೆಗೆಯಲು ನಿರ್ಧಾರ ಮಾಡಿದ್ದಾರೆ. ಇದು ಯಾರು ಮಾಡಿಸುತ್ತಿದ್ದಾರೆ ಅಂತ ನನಗೆ ಗೊತ್ತು. ಧೈರ್ಯವಿದ್ದರೆ 'ಜಾಗ್ವಾರ್' ಸಿನಿಮಾವನ್ನ ಚಿತ್ರಮಂದಿರದಿಂದ ತೆಗೆಯಲಿ. ನನಗೂ ಜನ ಇದ್ದಾರೆ, ನನಗೂ ಗೊತ್ತು ಏನೂ ಮಾಡಬೇಕು''. ಅಂತ ಹೆಚ್ ಡಿ ಕೆ ಸವಾಲ್ ಹಾಕಿದ್ದಾರೆ.

  ಇದು ನನ್ನೊಬ್ಬನ ಸಮಸ್ಯೆಯಲ್ಲ

  ಇದು ನನ್ನೊಬ್ಬನ ಸಮಸ್ಯೆಯಲ್ಲ

  ''ದುಡ್ಡು ಇದ್ದವರು ಥಿಯೇಟರ್ ಗೆ ಬಾಡಿಗೆ ಕೊಟ್ಟು ಸಿನಿಮಾ ಓಡಿಸುತ್ತಾರೆ. ಇಲ್ಲದವರು ಏನು ಮಾಡುತ್ತಾರೆ. ಜಮೀನು ಮಾರಿ, ಆಸ್ತಿ ಮಾರಿ ಸಿನಿಮಾ ಮಾಡುತ್ತಾರೆ. ಅವರ ಪಾಡು ಏನು. ಎಲ್ಲ ರೀತಿಯ ಬ್ಯಾಕ್ರೌಂಡ್ ಇರುವ ನನಗೆ ಹೀಗೆ ಆದರೆ, ಹೊಸ ನಿರ್ಮಾಪಕರ ಗತಿಯೇನು'' ಅಂತ ಪ್ರಶ್ನಿಸಿದರು.

  'ಗಾಂಧಿನಗರದ ರಾಜಕೀಯ' ಕಷ್ಟ

  'ಗಾಂಧಿನಗರದ ರಾಜಕೀಯ' ಕಷ್ಟ

  ''ಕರ್ನಾಟಕ ರಾಜಕೀಯ ಮಾಡಬಹುದು. ಆದರೆ, ಈ ಗಾಂಧಿನಗರದ ರಾಜಕೀಯ ಮಾಡುವುದು ಕಷ್ಟ. ದುಡ್ಡು ಇದ್ದರಿಗೆ ಮಾತ್ರ ಕನ್ನಡ ಚಿತ್ರರಂಗ ಎನ್ನುವಂತೆ ಆಗಿದೆ. ಕೆಲವು ವಿತರಕರು ರಾಜ್ಯದ ಥಿಯೇಟರ್ ಗಳನ್ನ ಹತೋಟಿಯಲ್ಲಿಟ್ಟುಕೊಂಡು ದುಡ್ಡು ಮಾಡುತ್ತಿದ್ದಾರೆ. ಹೀಗಾಗಿ ಇದು ನಮ್ಮ ಕನ್ನಡ ಇಂಡಸ್ಟ್ರಿಗೆ ಮಾರಕವಾಗ್ತಿದೆ''

  ಏನು ಮಾಡುತ್ತಿದೆ 'ನಿರ್ಮಾಪಕರ ಸಂಘ' ಹಾಗೂ 'ವಾಣಿಜ್ಯ ಮಂಡಳಿ'

  ಏನು ಮಾಡುತ್ತಿದೆ 'ನಿರ್ಮಾಪಕರ ಸಂಘ' ಹಾಗೂ 'ವಾಣಿಜ್ಯ ಮಂಡಳಿ'

  ''ಸಿನಿಮಾ ಮಾಡಬೇಕಾದರೆ ನಿರ್ಮಾಪಕರ ಸಂಘಕ್ಕೆ ಹಾಗೂ ವಾಣಿಜ್ಯ ಮಂಡಳಿಗೆ 50 ಸಾವಿರ ಕೊಟ್ಟು ಸದಸ್ಯನಾಗಬೇಕು. ಆದರೆ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕರಿಗಾಗಿ ಏನು ಮಾಡುತ್ತಿದೆ. ಎಲ್ಲಿದ್ದಾರೆ ನಿರ್ಮಾಪಕರ ಸಂಘದವರು''

  ಪರಭಾಷೆಗಳಿಗೆ ಥಿಯೇಟರ್ ಕೊಡ್ತಾರೆ

  ಪರಭಾಷೆಗಳಿಗೆ ಥಿಯೇಟರ್ ಕೊಡ್ತಾರೆ

  ''ವಿಪರ್ಯಾಸ ಅಂದ್ರೆ, ಪರಭಾಷೆ ಚಿತ್ರಗಳಿಗೆ ಕರ್ನಾಟಕದಲ್ಲಿ 150 ಸೆಂಟರ್ ಕೊಡ್ತಾರೆ. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಅವರ ಸಮಯದಲ್ಲಿ ಎರಡು ವಾರದ ನಂತರವಷ್ಟೆ ಇಲ್ಲಿ ಪರಭಾಷೆ ಚಿತ್ರಗಳು ಬಿಡುಗಡೆಯಾಗುತ್ತಿತ್ತು. ಆದರೆ, ಈಗ ಏಕಕಾಲದಲ್ಲಿ ನಮ್ಮ ಕನ್ನಡ ಸಿನಿಮಾಗಳಂತೆ ಇಲ್ಲಿಯೂ ಪರಭಾಷೆ ಚಿತ್ರಗಳನ್ನ ಬಿಡುಗಡೆ ಮಾಡ್ತಾರೆ''.

  ಮಲ್ಟಿಫ್ಲೆಕ್ಸ್ ಗಳಿಂದಲೂ ಅನ್ಯಾಯ

  ಮಲ್ಟಿಫ್ಲೆಕ್ಸ್ ಗಳಿಂದಲೂ ಅನ್ಯಾಯ

  ''ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಿಂದಲೂ ಕನ್ನಡ ಸಿನಿಮಾಗಳಿಗೆ ಅನ್ಯಾವಾಗ್ತಿದೆ. ತಮಿಳು, ತೆಲುಗು, ಹಿಂದಿ ನಂತರ ಕನ್ನಡ ಸಿನಿಮಾಗಳಿಗೆ ಅಧ್ಯತೆ ಕೊಡ್ತಿವೆ. ಇದರ ವಿರುದ್ದ ದನಿ ಎತ್ತುವವರು ಯಾರು''

  ನನ್ನಿಂದನೇ ಹೋರಾಟ ಶುರುವಾಗಲಿ

  ನನ್ನಿಂದನೇ ಹೋರಾಟ ಶುರುವಾಗಲಿ

  ಇಷ್ಟೆಲ್ಲ ಸಮಸ್ಯೆಗಳು ಕನ್ನಡ ಚಿತ್ರರಂಗದಲ್ಲಿದೆ. ಈಗ 'ಜಾಗ್ವಾರ್' ಸಿನಿಮಾ ಮೂಲಕ ಮತ್ತೆ ನಿರ್ಮಾಪಕನಾಗಿ ವಾಪಾಸ್ಸಾಗಿದ್ದೇನೆ. ಈ ಸಮಸ್ಯೆಗಳನ್ನ ಬಗೆಹರಿಸುವ ಬಿಟ್ಟಿನಲ್ಲಿ 'ನನ್ನಿಂದನೇ ಹೋರಾಟ ಶುರುವಾಗಲಿ'. ಸಣ್ಣ ನಿರ್ಮಾಪಕರ ಪರವಾಗಿ ನಾನು ದನಿಯಾಗುತ್ತೇನೆ. ನೋಡೋಣ ಏನಾಗುತ್ತೆ ಎಂದು ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

  ತೆಲುಗಿನಲ್ಲಿ 'ಜಾಗ್ವಾರ್' ಸಿನಿಮಾ ಮಾಡಿದ್ದು ಯಾಕೆ,?

  ತೆಲುಗಿನಲ್ಲಿ 'ಜಾಗ್ವಾರ್' ಸಿನಿಮಾ ಮಾಡಿದ್ದು ಯಾಕೆ,?

  'ದೊಡ್ಡ ಮೊತ್ತದಲ್ಲಿ ಬಂಡವಾಳ ಹಾಕಿದಾಗ, ನಮ್ಮ ಕನ್ನಡದಲ್ಲಿ ಮಾತ್ರ ಅಷ್ಟು ಬಂಡವಾಳವನ್ನ ಹಿಂದೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ, ತೆಲುಗಿನಲ್ಲು ಸಿನಿಮಾ ಮಾಡಿದ್ದೇವೆ. ಮುಂದಿನ ಸಿನಿಮಾಗಳು ಕನ್ನಡದ ನಿರ್ದೇಶಕರೆ ಮಾಡಲಿದ್ದಾರೆ' ಎಂದರು.

  English summary
  Former Chief Minister and 'Jaguar' movie producer H D Kumaraswamy says he is very much upset about the plight of Kannada Kannada film industry and has urged the Karnataka Film Chamber of Commerce, and Kannada Film Producers Association to take appropriate action to solve the problems of the producers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X