»   » ಮಿ. ಲಂಕೇಶ್ ಲೋಕೇಶ್ರಿಂದ ಯಾಮಾರಿದ್ರಾ ಮಿ. ಚಂದನ್?

ಮಿ. ಲಂಕೇಶ್ ಲೋಕೇಶ್ರಿಂದ ಯಾಮಾರಿದ್ರಾ ಮಿ. ಚಂದನ್?

By: ಜೀವನರಸಿಕ
Subscribe to Filmibeat Kannada

ಲವ್ ಯೂ ಆಲಿಯಾ ಚಿತ್ರದಲ್ಲಿ ರವಿಮಾಮ ಮತ್ತು ಭೂಮಿಕಾರಷ್ಟೇ ಮುಖ್ಯಪಾತ್ರದಲ್ಲಿರೋದು ಲಕ್ಷ್ಮಿ ಬಾರಮ್ಮ ಹೈದ ಚಂದನ್. ಚಂದನ್ ಚಂದ ಅಂತಾನೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಪಾತ್ರಕ್ಕೆ ಅವರನ್ನ ಆಯ್ಕೆ ಮಾಡಿದ್ರು.

ಚಂದನ್ ಕೂಡ ಒಳ್ಳೆಯ ನಿರ್ದೇಶಕರ ಚಿತ್ರ, ಕ್ರೇಜಿ ಸ್ಟಾರ್ ಜೊತೆ ನಟಿಸೋಕೆ ಅವಕಾಶ ಸಿಕ್ತಲ್ಲ ಅಂತ ಖುಷಿಯಿಂದ ಒಪ್ಪಿಕೊಂಡಿದ್ರು. ಶೂಟಿಂಗ್ಗಾಗಿ ಚಂದನ್ ತಮ್ಮ ದೇಹವನ್ನ ಸಾಕಷ್ಟು ಹುರಿಗೊಳಿಸಿದ್ದಾರೆ. ಅದು ಹಾಡಿನ ಝಲಕ್ನಲ್ಲೂ ಕಾಣಿಸ್ತಿದೆ.

Handsome actor Chandan duped handsomely

ಇದ್ರ ನಡುವೆ ಸನ್ನಿ ಲಿಯೋನ್ರನ್ನ ಸಾಂಗ್ ಒಂದಕ್ಕೆ ಮತ್ತೊಂದು ಸಣ್ಣ ಪಾತ್ರಕ್ಕೂ ಕರೆಸೋಕೆ ಹೊರಟ ನಿರ್ದೇಶಕ ಇಂದ್ರಜಿತ್ ಲಂಕೇಶ್, ಚಂದನ್ರಿಗೆ ದೇಹವನ್ನ ಮತ್ತಷ್ಟು ಹುರಿಗೊಳಿಸಿ ಸಿಕ್ಸ್ ಪ್ಯಾಕ್ ಜೊತೆ ಪಕ್ಕಾ ಮಾಡೋಕೆ ಹೇಳಿದ್ದಾರೆ. ಸನ್ನಿ ಲಿಯೋನ್ ಜೊತೆ ಫುಲ್ ಸಾಂಗಲ್ಲಿ ಮಿಂಚೋದು ಅಂದ್ರೆ ಹೆಂಗಿರಬೇಕು ಅಂತ ಚಂದನ್ರನ್ನ ಡಯಟ್ ಮಾಡಿ ಜಿಮ್ನಲ್ಲಿ ಸಖತ್ ವರ್ಕೌಟ್ ಮಾಡುವಂತೆ ಹುರಿದುಂಬಿಸಿದ್ದಾರೆ.[ಸನ್ನಿ ಜೊತೆ ಸೃಜಾ 'ಹಾಟ್' ಫೋಟೋ ಶೂಟ್]

ಸನ್ನಿ ಲಿಯೋನ್ ಜೊತೆ ಮಿಂಚೋದು ಅಂತ ಫುಲ್ ಥ್ರಿಲ್ಲಾಗಿ ಚಂದನ್ ಕೂಡ ದೇಹವನ್ನ ಕಟ್ಟುಮಸ್ತಾಗಿ ರೆಡಿ ಮಾಡಿಕೊಂಡಿದ್ದಾರೆ. ಆದ್ರೆ ಅಷ್ಟರಲ್ಲೇ ಮಜಾಟಾಕೀಸ್ನಲ್ಲಿ ಮಿಸ್ಟರ್ ಲೋಕೇಶ್ (ಸೃಜನ್) ಗೆಳೆತನ ಗಟ್ಟಿಯಾದ ಮೇಲೆ ಅವ್ರನ್ನೂ ಸನ್ನಿ ಜೊತೆ ಹೆಜ್ಜೆ ಹಾಕಿಸೋ ಪ್ಲಾನ್ ಹಾಕಿದ್ದಾರೆ ನಿರ್ದೇಶಕರು.

ಪಾಪ ಕಷ್ಟಪಟ್ಟು ರೆಡಿಯಾಗಿದ್ದ ಚಂದನ್ ದೊಡ್ಡೋರು ಹೇಳ್ದಂಗೆ ಕೇಳಿದ್ರಾಯ್ತು ಅಂತ ಸುಮ್ನಾಗಿದ್ದಾರೆ. ಅಂದಹಾಗೆ ನೀವು ಸನ್ನಿ ಲಿಯೋನ್ರನ್ನ ಮತ್ತೊಮ್ಮೆ ಡಿ ಕೆ ನಂತ್ರ ಕನ್ನಡದಲ್ಲಿ ನೋಡೋಕೆ ರೆಡಿಯಾಗಿ ಇದೇ ಗಣೇಶ ಹಬ್ಬದ ದಿನ.

English summary
Handsome actor Chandan has been duped by Indrajit Lankesh handsomely in Love U Alia Kannada movie. He was supposed to have appeared with Sunny Leone for an item song. For that he had worked his body for six pack too. But, the chance went to Srujan Lokesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada