»   » ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಜನ್ಮದಿನ ಸಂಭ್ರಮ

ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಜನ್ಮದಿನ ಸಂಭ್ರಮ

Posted By:
Subscribe to Filmibeat Kannada

ವೃತ್ತಿ ಬದುಕಿನಲ್ಲಿ ಸೆಂಚುರಿ ಭಾರಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಾಳ ಪಯಣದಲ್ಲಿ ಅರ್ಧ ಸೆಂಚುರಿ ಪೂರೈಸಿದ್ದಾರೆ. ಶಿವಣ್ಣ ಅವರಿಗೆ ಹ್ಯಾಪಿ ಬರ್ತ್ ಡೇ ಹೇಳುತ್ತಾ ಅವರ ಮುಂದಿನ ಹೆಜ್ಜೆ ಬಗ್ಗೆ ಕಣ್ಣಾಯಿಸೋಣ ಬನ್ನಿ.

ಈ ಬಾರಿ ಶಿವಣ್ಣ ಹುಟ್ಟುಹಬ್ಬವನ್ನು ಇನ್ನಷ್ಟು ಅರ್ಥವತ್ತಾಗಿ ಆಚರಿಸಲಾಗುತ್ತಿದೆ. ಉತ್ತರಖಾಂಡದ ಪ್ರವಾಹ ಸಂತ್ರಸ್ತರ ನೆರವಿಗಾಗಿ ಶಿವಣ್ಣ ಅಭಿಮಾನಿಗಳು ಸಂತ್ರಸ್ತರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ.


ಶಿವಣ್ಣ ಸಾಕಷ್ಟು ರೀತಿಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕ್ಯಾಮೆರಾ ಮುಂದೆ ಬಣ್ಣಹಚ್ಚಿ ನಿಂತರೆ ಅದು ಯಾವುದೇ ಪಾತ್ರವಾಗಿರಲಿ ಪರಕಾಯ ಪ್ರವೇಶ ಖಚಿತ. ಈಗ ಅವರು 'ಭಜರಂಗಿ' ಚಿತ್ರದಲ್ಲೂ ಅದೇ ರೀತಿಯ ಆವೇಶವನ್ನು ಆವಾಹಿಸಿಕೊಂಡಿದ್ದಾರೆ.

ಈ ಚಿತ್ರಕ್ಕಾಗಿ ಶಿವಣ್ಣ ಈ ವಯಸ್ಸಿನಲ್ಲೂ ಸಿಕ್ಸ್ ಪ್ಯಾಕ್ ಖದರ್ ತೋರಿಸಿದ್ದಾರೆ. ಈಗಾಗಲೆ ಅವರ ಸಿಕ್ಸ್ ಪ್ಯಾಕ್ ಪೋಸ್ಟರ್ ಗಳು ಗೋಡೆ ಗೋಡೆಗಳನ್ನು ಅಲಂಕರಿಸಿವೆ. ಒಂದು ಕಡೆ ಶಿವಣ್ಣ ಹುಟ್ಟುಹಬ್ಬ. ಇನ್ನೊಂದು ಕಡೆ ಸಿಕ್ಸ್ ಪ್ಯಾಕ್ ನೋಟ. ಅಭಿಮಾನಿಗಳಿಗೆ ಎರಡು ಕಣ್ಣುಗಳಿಗೂ ಹಬ್ಬ. ಇದಕ್ಕಿಂತಲೂ ಇನ್ನೇನು ಬೇಕು.

ಅಭಿಮಾನಿಗಳ ಪಾಲಿಗೆ, ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಶಿವಣ್ಣ ಇನ್ನೂ 'ಯುವರಾಜ'. ಗುರುವಾರ (ಜು.12) ಮಧ್ಯರಾತ್ರಿಯಿಂದಲೇ ಶಿವಣ್ಣ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಲಿದೆ. ವರನಟ ಡಾ.ರಾಜ್ ಕುಮಾರ್ ಅವರ ಯಾವ ಚಿತ್ರವನ್ನು ರೀಮೇಕ್ ಮಾಡುತ್ತೀರಿ ಎಂದರೆ ಶಿವಣ್ಣ ಥಟ್ ಎಂದು ಹೇಳುತ್ತಾರೆ ಎರಡು ಕನಸು ಎಂದು.

ಶಿವರಾಜ್ ಕುಮಾರ್ ಅವರಿಗೆ 51ನೇ ಹುಟ್ಟುಹಬ್ಬದ ಶುಭಾಶಯಗಳು. ಅವರು ಇನ್ನಷ್ಟು ಮತ್ತಷ್ಟು ವಿಭಿನ್ನ ಪಾತ್ರಗಳನ್ನು ಮಾಡಲಿ. ಅಂದಹಾಗೆ ಇನ್ನು ಮುಂದೆ ಲಾಂಗು ಮಚ್ಚು ಚಿತ್ರಗಳನ್ನು ಮಾಡಲ್ಲ ಎಂದು ಶಿವಣ್ಣ ಹೇಳಿದ್ದಾರೆ.

ತಮ್ಮ ಸಿನಿಮಾ ಪಯಣದ ಬಗ್ಗೆ ಸ್ವತಃ ಶಿವಣ್ಣ ಹೇಳುವುದೇನೆಂದರೆ, ತಾನು ಸಾಕಷ್ಟು ಒಳ್ಳೆಯ ಹಾಗೂ ಕೆಟ್ಟ ಚಿತ್ರಗಳನ್ನು ಮಾಡಿದ್ದೇನೆ. ರೌಡಿಯಿಸಂ ಚಿತ್ರಗಳನ್ನು ಸ್ಟಾಫ್ ಮಾಡಬೇಕೆಂದಿದ್ದೇನೆ. ಸದ್ಯಕ್ಕೆ ತಮ್ಮ ಗಮನ ಔಟ್ ಅಂಡ್ ಔಟ್ ಕಾಮಿಡಿ ಚಿತ್ರಗಳ ಕಡೆಗಿದೆ ಎಂದಿದ್ದಾರೆ. ಹ್ಯಾಪಿ ಬರ್ತ್ ಡೇ ಶಿವಣ್ಣ. (ಒನ್ಇಂಡಿಯಾ ಕನ್ನಡ)

English summary
Karunada Chakravarthy Shivrajkumar fans geting ready for celebrate his 51th birthday on 12th July 2013. Shivarajkumar celebrating his 51st birthday more meaningfully for donate funds for Uttarakhand flood victims.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada