For Quick Alerts
  ALLOW NOTIFICATIONS  
  For Daily Alerts

  ಗೌರಿ-ಗಣೇಶ ಹಬ್ಬಕ್ಕೆ ಶುಭಕೋರಿದ ಡಿ-ಬಾಸ್ ಮತ್ತು ರಾಕಿ ಭಾಯ್

  |

  ಕೊರೊನಾ ವೈರಸ್ ನಡುವೆಯೂ ದೇಶಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಶುರುವಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿಕೊಂಡರೆ ಈ ವರ್ಷ ಅದ್ಧೂರಿ, ಕಲರ್ ಫುಲ್, ಸಡಗರ ಕಮ್ಮಿಯಾಗಿದ್ದರೂ ಸಂಪ್ರದಾಯದಂತೆ ಹಬ್ಬ ಆಚರಿಸಲಾಗುತ್ತಿದೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  ಸಿನಿಮಾ ಇಂಡಸ್ಟ್ರಿಯಲ್ಲೂ ಈ ಬಾರಿ ಗೌರಿ ಗಣೇಶ ಹಬ್ಬದ ಕಳೆ ಸಹಜವಾಗಿದೆ. ಇಷ್ಟು ದಿನ ಶೂಟಿಂಗ್ ಇಲ್ಲದೇ ಸುಮ್ಮನಿದ್ದ ಮಂದಿ ಗಣೇಶನಿಗೆ ಪ್ರಾರ್ಥಿಸಿ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಇನ್ನು ಕೆಲವು ಪೋಸ್ಟರ್, ಟೀಸರ್ ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ. ಈ ಮಧ್ಯೆ ಕನ್ನಡದ ಸ್ಟಾರ್ ನಟರಾದ ದರ್ಶನ್ ಮತ್ತು ಯಶ್ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಮುಂದೆ ಓದಿ....

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಗಣೇಶ ಸಂಭ್ರಮ

  ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಸಿ

  ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಸಿ

  'ಶ್ರೀ ಗೌರಿ ಸುತನಾದ ಶ್ರೀ ಸಿದ್ದಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!! ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಿ' ಎಂದು ಡಿ ಬಾಸ್ ಮನವಿ ಮಾಡಿದ್ದಾರೆ.

  ಎಲ್ಲರಿಗೂ ಸಂತೋಷ ತರಲಿ

  ಎಲ್ಲರಿಗೂ ಸಂತೋಷ ತರಲಿ

  'ಈ ವರ್ಷ ನಮ್ಮ ಆಚರಣೆಗಳು ಪ್ರತಿವರ್ಷ ಇದ್ದಷ್ಟು ಭವ್ಯವಾಗಿರದೆ ಇರಬಹುದು ಆದರೆ ಅದೇನೇ ಇದ್ದರೂ ನಮ್ಮ ಉತ್ಸಾಹಕ್ಕೆ ಅಡ್ಡಿಯಾಗಲ್ಲ. ಈ ಹಬ್ಬ ಎಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ತರಲಿ. ಸಂತೋಷವಾಗಿ, ಖುಷಿಯಿಂದ ಗಣೇಶ ಹಬ್ಬವನ್ನು ಆಚರಿಸಿ'' ಎಂದು ನಟ ಯಶ್ ಶುಭಕೋರಿದ್ದಾರೆ.

  ಪರಿಸರ ಸ್ನೇಹಿ ಗಣೇಶ ಬಳಸಿ

  ಪರಿಸರ ಸ್ನೇಹಿ ಗಣೇಶ ಬಳಸಿ

  'ಗೌರಿ ಗಣೇಶ ಹಬ್ಬಕ್ಕೆ ಶುಭಕೋರಿರುವ ನಟಿ ಸಂಯುಕ್ತ ಹೊರನಾಡು 'ಪರಿಸರ ಸ್ನೇಹಿ ಗಣೇಶ ಮೂರ್ತಿ ನನಗೆ ಹೆಚ್ಚು ಇಷ್ಟ. ನೀವು ಸಹ ಪರಿಸರ ಸ್ನೇಹಿ ಗಣೇಶ ಬಳಸಿ ಹಬ್ಬವನ್ನು ಆಚರಿಸಿ' ಎಂದು ಶುಭ ಕೋರಿದ್ದಾರೆ.

  ನಿರ್ಮಾಪಕಿ ಶೈಲಜಾ ನಾಗ್

  ನಿರ್ಮಾಪಕಿ ಶೈಲಜಾ ನಾಗ್

  ಯಜಮಾನ ಸಿನಿಮಾದ ನಿರ್ಮಾಪಕಿ ಶೈಲಜಾ ನಾಗ್ ಅವರು ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಯಶ ತಿಳಿಸಿದ್ದಾರೆ. 'ಎಲ್ಲ ತಲ್ಲಣಗಳೂ ನದಿಯ ನೀರಿನ ಹಾಗೆ ಹರಿದು ಹೋಗಿ ಹೊಸದು ಮನತುಂಬಲಿ. ಗೌರಿ, ಗಣೇಶ ಹಬ್ಬದ ಶುಭಾಶಯಗಳು' ಎಂದು ಟ್ವೀಟ್ ಮಾಡಿದ್ದಾರೆ.

  English summary
  Happy Ganesh Chaturthi 2020: Kannada actor Darshan and Rocking star Yash wish to his Fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X