»   » ಫೆಬ್ರವರಿಲಿ ರಿಲೀಸ್ ಇಲ್ಲದಿದ್ರೆ 6 ತಿಂಗಳು ಕಾಯ್ಬೇಕು!

ಫೆಬ್ರವರಿಲಿ ರಿಲೀಸ್ ಇಲ್ಲದಿದ್ರೆ 6 ತಿಂಗಳು ಕಾಯ್ಬೇಕು!

By: ಜೀವನರಸಿಕ
Subscribe to Filmibeat Kannada

ಈ ಫೆಬ್ರವರಿ ತಿಂಗಳಲ್ಲಿ ಒಂದಷ್ಟು ಸಿನಿಮಾಗಳು ಶತಾಯುಗತಾಯ ರಿಲೀಸ್ ಆಗ್ಲೇಬೇಕು ಅಂತಿವೆ. ಅದು ಒಂದೋ ಎರಡೋ ಸಿನಿಮಾಗಳಲ್ಲ ಹೆಚ್ಚೂ ಕಡಿಮೆ 20 ಸಿನಿಮಾಗಳು. ಈ ತಿಂಗಳಲ್ಲೇ ಸಿನಿಮಾ ರಿಲೀಸ್ ಆಗ್ಬೇಕು ಅನ್ನೋದಕ್ಕೆ ಕಾರಣವೂ ಇದೆ.

ಸಿನಿಮಾ ಅನ್ನೊದು ಬಿಸಿ ದೋಸೆ ಇದ್ದ ಹಾಗೆ. ಬಿಸಿ ಬಿಸಿಯಾಗೇ ಅದನ್ನ ಸೇಲ್ ಮಾಡಬೇಕು. ಇಲ್ಲದಿದ್ರೆ ನೋಡೋ ಪ್ರೇಕ್ಷಕರಿಗೆ ಸಿನಿಮಾ ರುಚಿಯಿದೆ ಅನ್ನಿಸೋದಿಲ್ಲ. ಸಿನಿಮಾವನ್ನ ಮಾಡಿದ ಕೂಡ್ಲೇ ರಿಲೀಸೂ ಮಾಡ್ಬೇಕು. ಆದರೆ ಇಲ್ಲಿ ಬಂದಿರೋದು ಬೇಗ ರಿಲೀಸ್ ಮಾಡಬೇಕಾದ ಅನಿವಾರ್ಯತೆ ಅಲ್ಲ.

ಆದ್ರೆ ಫೆಬ್ರವರಿ ಒಳಗೆ ರಿಲೀಸ್ ಆಗದಿದ್ರೆ ಸಿನಿಮಾವನ್ನ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಮಾಡೋದೆ ಒಳ್ಳೇದು. ಹಾಗಾದ್ರೆ ಸಿನಿಮಾವನ್ನ ವರಮಹಾಲಕ್ಷ್ಮಿ ಹಬ್ಬ ಅಂದ್ರೆ ಹೆಚ್ಚೂ ಕಡಿಮೆ ಜುಲೈ, ಆಗಸ್ಟ್ ಅಂದರೆ ಐದಾರು ತಿಂಗಳು ಬಿಟ್ಟು ರಿಲೀಸ್ ಮಾಡ್ಬೇಕು ಅಂತಿರೋದಕ್ಕೆ ಇಲ್ಲಿವೆ ನೀವು ತಿಳಿಯಲೇಬೇಕಾದ ಕಾರಣಗಳು.

ಮಳೆ, ಚುನಾವಣೆ, ಎಕ್ಸಾಂ, ಐಪಿಎಲ್ ಅಂತ ಹೀಗೆ ಒಂದು ಲಿಸ್ಟ್ ಕೊಡ್ತಾ ಹೋದರೆ ಸಿನಿಮಾ ಎಷ್ಟೇ ಚೆನ್ನಾಗಿದ್ರೂ ಥಿಯೇಟರ್ ಕಡೆ ಜನ ಬರೋದಿಲ್ಲ. ದೊಡ್ಡ ಸಿನಿಮಾಗಳು ಓಕೆ ಆದರೆ ಸಣ್ಣವರ ಕಥೆ ಯಾಕೆ ಅಂತಾರೆ ಗಾಂಧಿನಗರದ ಪಂಡಿತರು.

ಸದ್ಯದಲ್ಲೇ ಶುರುವಾಗಲಿರೋ ಚುನಾವಣೆ

ರಾಜಕೀಯ ಪಕ್ಷಗಳ ಭರಾಟೆ ಸದ್ಯದಲ್ಲೇ ಶುರುವಾಗುತ್ತೆ. ಚುನಾವಣೆ ಹತ್ತಿರವಾಗ್ತಿದ್ದ ಹಾಗೆ ಸುಮ್ಮನೆ ಸಿನಿಮಾ ನೋಡೋ ಮಂದಿ ಸಿಕ್ಕೋದೇ ಇಲ್ಲ. ಐನೂರು ಸಾವಿರ ಅಂತ ರಾಜಕಾರಿಣಿಗಳಿಂದ ಕಲೆಕ್ಷನ್ ಮಾಡ್ಕೋತಾರೆ.

ಫುಲ್ ಬಾಡೂಟ ಬೀಡಿ ಬೆಂಕಿಪಟ್ಣ

ಪ್ರತೀದಿನ ಬೆಳಿಗ್ಗೆಯಿಂದ ಪ್ರಚಾರ ಅಂತ ಹೊರಟ್ರೆ ಜೈಕಾರ ಹಾಕಿ ಓಟು ಕೇಳೋರ ಜೊತೆ ಸುತ್ತಾಡಿ ಸಂಜೆ ಟೈಮ್ ಗೆ ಫುಲ್ ಬಾಡೂಟ ಬಿಡಿ ಬೆಂಕಿಪಟ್ಣ ಜೊತೆಗೆ ಎಣ್ಣೆ ತೊಗೊಂಡು ಐಪಿಲ್ ಮ್ಯಾಚ್ ನೋಡ್ಕೋಂಡ್ ಟೈಂ ಪಾಸ್ ಮಾಡ್ತಾರೆ.

ಐಪಿಎಲ್ ಬಂದ್ರೆ ಬಿರುಗಾಳಿ

ಕ್ರಿಕೆಟ್ ಗೆ ದೊಡ್ಡ ಅಭಿಮಾನಿಗಳಿರೋ ಭಾರತದಲ್ಲಿ ಐಪಿಎಲ್ ಸೀಸನ್ ಅಂದ್ರೆ ಸಿನಿಮಾ ಸೈಡಿಗಿಡು ಅಂತಾರೆ ಯಂಗ್ ಸ್ಟಾರ್ಸ್. ಸಿನಿಮಾ ನೋಡೋ ಯಂಗ್ ಸ್ಟಾರ್ಸ್ ಸೈಲೆಂಟಾದ್ರೆ ಥಿಯೇಟರ್ಗಳು ಖಾಲಿ ಖಾಲಿ. ಹಾಗಾಗಿ ಎರಡು ತಿಂಗಳು ಐಪಿಎಲ್ ಬಂದ್ರೆ ಸಿನಿಮಾಗೆ ಬಿರುಗಾಳಿ ಏಟು.

ಎಸ್ಎಸ್ಎಲ್ಸಿ, ಪಿಯುಸಿ ಎಕ್ಸಾಂ ಸಿನಿಮಾ ಖತಂ

ಫೆಬ್ರವರಿ ಬಂತು ಅಂದ್ರೆ ಹೈಸ್ಕೂಲು ಪಿಯು ಕಾಲೇಜಿನ ವಿದ್ಯಾರ್ಥಿಗಳ ಮನೆಯಲ್ಲಿ ಟಿವಿ ಆಫ್. ಇನ್ನು ಥಿಯೇಟರ್ ನೋ ಚಾನ್ಸ್. ಸೋ ಮಕ್ಕಳಿಲ್ಲದೆ ನೋ ಫ್ಯಾಮಿಲಿ ಆಡಿಯನ್ಸ್. ಇಲ್ಲೂ ಎರಡು ತಿಂಗಳು ಸಿನಿಮಾಗೆ ಲಾಸು.

ಮೇ ಕಳೀತು ಮಳೆ ಮಳೆ ಮಳೆ

ಮೇ ಕೊನೇಗಾಗ್ಲೇ ಬೆಂಗಳೂರಲ್ಲಿ ಮಳೆ ಸಣ್ಣಗೆ ಸುರಿಯೋಕೆ ಶುರು. ತಣ್ಣಗಿನ ವಾತಾವರಣ ಸುಮ್ನೆ ಬಿಸಿ ಬಿಸಿ ಕಾಫಿ ಕುಡೀತಾ ಮನೇಲಿ ಕಾಲ ಕಳೆದ್ರೆ ಸಾಕು. ಯಾರು ಈ ಮಳೇಲಿ, ಟ್ರಾಫಿಕ್ ಜಾಮ್ ಜಾಸ್ತಿ ಸಿನಿಮಾ ಥಿಯೇಟರ್ ವರೆಗೂ ಹೋಗೋರು ಅಂತಾರೆ ಜನ.

English summary
Around 20 Kannada movies are ready for release in February. Suppose these movies not releasing in February hard time is awaiting. Loksabha Election 2014, Exam season, rainy season definitely affects the box office business.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada