»   » 'ಕಾಲೇಜ್ ಕುಮಾರ್' ಡೈರೆಕ್ಟರ್ ಮುಂದಿನ ಚಿತ್ರದ ನಾಯಕ ಇವರೇ ನೋಡಿ

'ಕಾಲೇಜ್ ಕುಮಾರ್' ಡೈರೆಕ್ಟರ್ ಮುಂದಿನ ಚಿತ್ರದ ನಾಯಕ ಇವರೇ ನೋಡಿ

Posted By:
Subscribe to Filmibeat Kannada

'ಕಾಲೇಜ್ ಕುಮಾರ್' ಸಿನಿಮಾ ಹಿಟ್ ಆಗಿದೆ. ಈ ಚಿತ್ರದ ಸಂತಸದಲ್ಲಿರುವ ನಿರ್ದೇಶಕ ಹರಿ ಸಂತೋಷ್ ಅದೇ ಉತ್ಸಾಹದಲ್ಲಿ ತಮ್ಮ ಮುಂದಿನ ಸಿನಿಮಾದ ತಯಾರಿಯನ್ನು ಶುರು ಮಾಡಿದ್ದಾರೆ.

ಹರಿ ಸಂತೋಷ್ ಅವರ ಮುಂದಿನ ಚಿತ್ರದಲ್ಲಿ ನಟ ಶರಣ್ ಅಭಿನಯಿಸುತ್ತಿದ್ದಾರೆ. ಶರಣ್ ಜೊತೆ ಇದೇ ಮೊದಲ ಬಾರಿಗೆ ನಿರ್ದೇಶಕ ಸಂತು ಸಿನಿಮಾ ಮಾಡುತ್ತಿದ್ದಾರೆ. 'ಕಾಲೇಜ್ ಕುಮಾರ್' ಚಿತ್ರದ ಮೂಲಕ ಫ್ಯಾಮಿಲಿ ಡ್ರಾಮಾ ಹೇಳಿದ್ದ ಸಂತು ತಮ್ಮ ಮುಂದಿನ ಚಿತ್ರದಲ್ಲಿಯೂ ಕುಟುಂಬದ ಕಥೆ ಹೇಳಲಿದ್ದಾರಂತೆ. ಶರಣ್ 'ಸತ್ಯ ಹರಿಶ್ಚಂದ್ರ' ಚಿತ್ರದ ಬಳಿಕ ಯೋಗನಾಥ್ ಮುದ್ದಾನ್ ಮತ್ತು ಅನಿಲ್ ಕುಮಾರ್ ಅವರ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಸದ್ಯ ನಡೆಯುತ್ತಿದ್ದು, ಅದರ ನಂತರ ಹೊಸ ಸಿನಿಮಾ ಶುರು ಆಗಲಿದೆ.

Hari Santhosh will be directing a movie to actor Sharan.

ಇನ್ನು ವಿಶೇಷ ಅಂದರೆ ಈ ಸಿನಿಮಾಗೆ 'ಚೌಕ' ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. 'ಮಾಸ್ ಲೀಡರ್' ಚಿತ್ರ ನಿರ್ಮಾಣ ಮಾಡಿದ್ದ ನಿರ್ಮಾಪಕ ತರುಣ್ ಶಿವಣ್ಣ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ಜನವರಿಯಲ್ಲಿ ಶುರುವಾಗಲಿರುವ ಈ ಹೊಸ ಚಿತ್ರಕ್ಕೆ ಇನ್ನು ಟೈಟಲ್ ಇಟ್ಟಿಲ್ಲ.

English summary
'College Kumar' director Hari Santhosh will be directing a movie to actor Sharan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada