For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಗೆ ಮಾತ್ರವಲ್ಲ ಹರಿಪ್ರಿಯಾ, ಉಪೇಂದ್ರ ಚಿತ್ರಕ್ಕೂ ರಿಲೀಸ್ ಸಮಸ್ಯೆ

  |
  Lok Sabha Elections 2019 : ನಿಖಿಲ್ ಕುಮಾರಸ್ವಾಮಿ, ಹರಿಪ್ರಿಯಾ, ಉಪೇಂದ್ರ ಸಿನಿಮಾಗಳ ರಿಲೀಸ್ ಗೆ ತೊಂದರೆ

  ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ಚುನಾವಣೆ ನೀತಿ ಸಂಹಿತೆಯೂ ಜಾರಿಯಾಗಿದೆ. ಹೀಗಾಗಿ, ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟ ಮತ್ತು ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಸಿನಿಮಾಗಳ ಪ್ರಚಾರ ಮಾಡುವಂತಿಲ್ಲ.

  ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಾಗಿರುವ ನಿಖಿಲ್ ಕುಮಾರ್ ಮತ್ತು ಸುಮಲತಾ ಅಭಿನಯದ ಯಾವ ಚಿತ್ರಗಳು ಸದ್ಯಕ್ಕೆ ಬಿಡುಗಡೆಯಾಗುವುದಿಲ್ಲ.

  ನಿಖಿಲ್ ಅಭಿನಯದ ಕುರುಕ್ಷೇತ್ರ ಏಪ್ರಿಲ್ 5ಕ್ಕೆ ತೆರೆಗೆ ತರುವ ತಯಾರಿ ನಡೆಸಿದ್ದರು ನಿರ್ಮಾಪಕ ಮುನಿರತ್ನ. ಆದ್ರೆ, ನಿಖಿಲ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಕುರುಕ್ಷೇತ್ರ ಬಿಡುಗಡೆಗೆ ಬ್ರೇಕ್ ಬಿದ್ದಿದೆ.

  ಮಂಡ್ಯದ ಈ ನಾಲ್ಕು ವರ್ಗ ಸುಮಲತಾ ಬೆನ್ನಿಗೆ ನಿಂತರೆ ಗೆಲುವು ಖಚಿತ.!

  ಅದೇ ರೀತಿ ಸುಮಲತಾ ಮತ್ತು ನಟಿ ಹರಿಪ್ರಿಯಾ ಅಭಿನಯದ 'ಡಾಟರ್ ಅಫ್ ಪಾರ್ವತಮ್ಮ' ಸಿನಿಮಾ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದರಂತೆ. ಸುಮಲತಾ ಅವರು ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸೂಚನೆ ನೀಡಿರುವುದರಿಂದ ಸದ್ಯಕ್ಕೆ ಈ ಚಿತ್ರದ ರಿಲೀಸ್ ಕೂಡ ಮುಂದಕ್ಕೆ ಹೋಗಲಿದೆ.

  ಸುಮಲತಾ - ನಿಖಿಲ್ ಕುಮಾರ್ ಇಬ್ಬರಲ್ಲಿ ಚರಣ್ ರಾಜ್ ಯಾರ ಪರ?

  ಇನ್ನು ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ 'ಐ ಲವ್ ಯೂ' ಸಿನಿಮಾಗೂ ಎಲೆಕ್ಷನ್ ಬಿಸಿ ತಟ್ಟಲಿದೆ. ಪ್ರಜಾಕೀಯ ಪಕ್ಷದ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನ ನಿಲ್ಲಿಸುವ ತಯಾರಿ ನಡೆಸುತ್ತಿರುವ ಉಪೇಂದ್ರ ಅವರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದ್ರೆ, ತಮ್ಮ ಪಕ್ಷ ಎಲೆಕ್ಷನ್ ನಲ್ಲಿ ಭಾಗಿಯಾಗುತ್ತಿರುವ ಕಾರಣ ಉಪ್ಪಿಯ ಐ ಲವ್ ಯೂ ಚಿತ್ರವೂ ಸದ್ಯಕ್ಕೆ ರಿಲೀಸ್ ಆಗುವುದು ಅನುಮಾನ

  ಚುನಾವಣೆ ಮುಗಿದು, ಫಲಿತಾಂಶ ಹೊರಬೀಳುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತೆ. ಅಲ್ಲಿಯವರೆಗೂ ಈ ಚಿತ್ರಗಳು ತೆರೆಗೆ ಬರುವುದು ಕಷ್ಟ.

  English summary
  Lok sabha election effect: Nikhil kumar starrer Kurukshetra, sumalatha starrer d/o parvathamma, upendra starrer i love you movies are facing release problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X