For Quick Alerts
  ALLOW NOTIFICATIONS  
  For Daily Alerts

  'ಸಿಂಹಪ್ರಿಯ'ಗೆ ಮದುವೆ ಸಂಭ್ರಮ: ಸ್ಯಾಂಡಲ್‌ವುಡ್ ಜೋಡಿಗೆ ಅರಿಶಿನ ಶಾಸ್ತ್ರ!

  |

  ಸ್ಯಾಂಡಲ್‌ವುಡ್‌ಗೆ ಹಾಗೂ ತಮ್ಮ ಅಭಿಮಾನಿಗಳಿಗೆ ದಿಢೀರನೇ ಸರ್ಪ್ರೈಸ್ ಕೊಟ್ಟ ಜೋಡಿ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ. ಇಬ್ಬರೂ ತಮ್ಮ ಲವ್ ಸ್ಟೋರಿಯನ್ನು ಯಾರಿಗೂ ಗೊತ್ತಿರದ ಹಾಗೇ ಮೆಂಟೈನ್ ಮಾಡಿಕೊಂಡಿದ್ದರು. ಮೂಗುಬೊಟ್ಟಿನ ಸಂಭ್ರಮ ಇಬ್ಬರ ಪ್ರೇಮ್ ಕಹಾನಿಯನ್ನು ರಿವೀಲ್ ಮಾಡಿತ್ತು.

  ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಇಬ್ಬರ ಮದುವೆ ನಾಳೆ(ಜನವರಿ 26) ಮೈಸೂರಿನಲ್ಲಿ ನಡೆಯುತ್ತಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಬ್ಬರ ಕಲ್ಯಾಣ ನಡೆಯಲಿದೆ. ಮದುವೆ ಸಂಭ್ರಮದಲ್ಲಿರೋ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಅರಿಶಿಣ ಶಾಸ್ತ್ರದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

  "ನಾಯಿ ಮರಿ ಕೊಟ್ಟು ಹರಿಪ್ರಿಯಾರನ್ನು ಪಟಾಯಿಸಿಕೊಂಡಿಲ್ಲ.. ತುಂಬಾ ಕಷ್ಟಪಟ್ಟಿದ್ದೀನಿ" -ವಸಿಷ್ಠ ಸಿಂಹ

  ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ತಮ್ಮ ಎರಡು ವರ್ಷದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಲು ಸ್ಯಾಂಡಲ್‌ವುಡ್‌ನ ಈ ಜೋಡಿ ಸಿದ್ಧವಾಗಿದೆ. ಮೈಸೂರಿನಲ್ಲಿ ಜನವರಿ 26ರಂದು ಸಿಂಹಪ್ರಿಯ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ.

  ಸ್ಯಾಂಡಲ್‌ವುಡ್‌ನ ಮತ್ತೊಂದು ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. ಅದಕ್ಕೂ ಮುನ್ನ ಇಬ್ಬರ ಮನೆಯಲ್ಲೂ ವಿವಿಧ ಶಾಸ್ತ್ರಗಳು ನಡೆದಿವೆ. ಇದೇ ವೇಳೆ ಹರಿಪ್ರಿಯ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಅರಿಶಿಣ ಶಾಸ್ತ್ರದ ಮಧುರ ಕ್ಷಣಗಳ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.

  'ಸಿಂಹ ಪ್ರಿಯ' ಜೋಡಿ ಮದುವೆ ಕೇವಲ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿಯೇ ನಡೆಯಲಿದೆ. ವಸಿಷ್ಠ ಸಿಂಹ ಮೈಸೂರಿನವರಾಗಿದ್ದರಿಂದ ಅಲ್ಲಿಯೇ ಮದುವೆ ಆಗಬೇಕು ಎಂದು ನಿರ್ಧರಿಸಿದ್ದರು. ಹೀಗಾಗಿ ಆಶ್ರಮದಲ್ಲಿಯೇ ಮದುವೆ ನಡೆಯಲಿದೆ.

  Haripriya And Vasishta Simha Marriage And Arishina Shastra Photos Goes Viral

  ಚಿತ್ರರಂಗದ ಸೆಲೆಬ್ರೆಟಿಗಳಿಗಾಗಿ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಇಬ್ಬರೂ ಆರತಕ್ಷತೆಯನ್ನು ಹಮ್ಮಿಕೊಂಡಿದ್ದಾರೆ. ಇದೇ ಜನವರಿ 28ರಂದು ಶನಿವಾರ 7 ಗಂಟೆಯ ಬಳಿಕ ಆರತಕ್ಷತೆಯನ್ನು ಕಾರ್ಯಕ್ರಮ ಜರುಗಲಿದೆ.

  English summary
  Haripriya And Vasishta Simha Marriage And Arishina Shastra Photos Goes Viral, Know More.
  Wednesday, January 25, 2023, 23:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X