Don't Miss!
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫಿಕ್ಸ್ ಆಯ್ತು ಹರಿಪ್ರಿಯಾ–ವಸಿಷ್ಠ ಸಿಂಹ ಮದುವೆ: ಎಲ್ಲಿ? ಯಾವಾಗ?
ಹೊಸ ವರ್ಷದ ಹೊಸ್ತಿಲಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಈ ಜೋಡಿ ಪ್ರೀತಿಯಲ್ಲಿ ಬಿದ್ದಿರೋ ವಿಷಯ ಗೊತ್ತಾಗಿತ್ತು. ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ಚಿತಾರ್ಥ ಬಳಿಕ ಯಾವಾಗ ಮದುವೆ ಆಗುತ್ತಾರೆಂದು ಅಭಿಮಾನಿಗಳು ಎದುರು ನೋಡುತ್ತಿದ್ದರು. ಅಲ್ಲದೆ ಎಂಗೇಜ್ಮೆಂಟ್ ಆದ ಬಳಿಕವೇ ಮುಂದಿನ ವರ್ಷ ಮದುವೆ ಅನ್ನೋ ಸುಳಿವನ್ನೂ ನೀಡಿದ್ದರು. ಅದರಂತೆ ಈಗ ಕೌಟುಂಬಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ವಿಷಯನ್ನು ಮೈಸೂರಿನ ಸಂಸದ ಪ್ರತಾಪ್ ಸಿಂಹ ರಿವೀಲ್ ಮಾಡಿದ್ದಾರೆ.
ಖ್ಯಾತ ಚಲನ ಚಿತ್ರನಟರಾದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರ ವಿವಾಹ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ತಿಂಗಳು 26ರಂದು ನಡೆಯಲಿದೆ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

ಹರಿಪ್ರಿಯಾ–ವಸಿಷ್ಠ ಸಿಂಹ ಮದುವೆ
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆಗೆ ಡೇಟ್ ಫಿಕ್ಸ್ ಆಗಿದೆ. ಹೊಸ ವರ್ಷದ ಹೊಸ್ತಿಲಲ್ಲಿಯೇ ಹೊಸ ಜೀವನಕ್ಕೆ ಕಾಲಿಡುವುದಕ್ಕೆ ಜೋಡಿ ಹಕ್ಕಿಗಳು ಸಜ್ಜಾಗಿದ್ದಾರೆ. ಈ ಸ್ಯಾಂಡಲ್‌ವುಡ್ ಜೋಡಿ ನಿಶ್ವತಾರ್ಥ ಮಾಡಿಕೊಂಡಾಗಲೇ ಮದುವೆ ಕೂಡ ಅದ್ಧೂರಿಯಾಗಿಯೇ ಇರುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸರಳವಾಗಿ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ನಿರ್ಧರಿಸಿದ್ದಾರೆ. 2023, ಜನವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಆದರೆ, ಈ ಜೋಡಿ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಮೂಗು ಚುಚ್ಚಿಸಿಕೊಂಡಾಗಲೇ ವಿಷಯ ಬಹಿರಂಗ
ಕಳೆದ ವರ್ಷ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದರು. ಈ ವಿಡಿಯೋವನ್ನು ಹರಿಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಬಳಿಕ ವಸಿಷ್ಠ ಸಿಂಹ ಅವರೇ ನಟಿ ಹರಿಪ್ರಿಯಾ ಮೂಗು ಚುಚ್ಚಿಸಿದ್ದರು ಎಂದು ತಿಳಿದಿತ್ತು. ಇಲ್ಲಿಂದ ಇಬ್ಬರ ಲವ್ ಸ್ಟೋರಿ ಜಗತ್‌ಜಾಹೀರಾಗಿತ್ತು. ವಿಷಯ ರಿವೀಲ್ ಆದ ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು.

ಮುಂದಿನ ವರ್ಷ ಮದುವೆ ಎಂದಿದ್ದ ಜೋಡಿ
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಎಂಗೇಜ್ ಆದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಆದರೆ ನಿಶ್ಚಿತಾರ್ಥ ಆಗುತ್ತಿದ್ದಂತೆ ತಮ್ಮ ಅಭಿಮಾನಿಗಳಿಗೆ ಮುಂದಿನ ವರ್ಷ ಮದುವೆ ಎಂಬ ಸುಳಿವನ್ನೂ ನೀಡಿದ್ದರು. ಇದು ಇಬ್ಬರ ಫ್ಯಾನ್ಸ್ ಅನ್ನೂ ಸಂಭ್ರಮದಲ್ಲಿ ಮುಳುಗಿಸಿತ್ತು. ಹೇಳಿದಂತೆಯೇ ಸಿಂಹ ಜೋಡಿ ಹೊಸ ಜೀವನಕ್ಕೆ ಕಾಲಿಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

'ಲವ್ ಲಿ' ಸೆಟ್ಟಿನಲ್ಲಿ ಹರಿಪ್ರಿಯ–ವಸಿಷ್ಠ
ನಿಶ್ಚಿತಾರ್ಥದ ಬಳಿಕ ವಸಿಷ್ಠ ಸಿಂಹ ತಮ್ಮದೇ ಸಿನಿಮಾ 'ಲವ್ ಲಿ' ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಹರಿಪ್ರಿಯಾ ಅಲ್ಲಿಗೆ ಹೋಗಿ ಬಾವಿ ಪತಿಯನ್ನು ಭೇಟಿಯಾಗಿದ್ದರು. ಈ ವಿಡಿಯೋದಲ್ಲಿ ಜೋಡಿ ಕಾಣಿಸಿಕೊಂಡಿತ್ತು. ಇದೀಗ ಮದುವೆ ಸಂಬಂಧ ಈ ಜೋಡಿ ಮತ್ತೆ ಸುದ್ದಿಯಲ್ಲಿದೆ. ಅಂದ್ಹಾಗೆ ಈ ಜೋಡಿಯ ಮದುವೆ ಹೊಸ ವರ್ಷದ ಮೊದಲ ಸ್ಯಾಂಡಲ್‌ವುಡ್ ಸೆಲೆಬ್ರೆಟಿ ಮದುವೆ ಪಟ್ಟಿ ಸೇರಲಿದೆ.