»   » ಲಕ್ಕಿ ನಾಯಕಿ ಹರಿಪ್ರಿಯಾಗೆ ದಿನಕರ್ ತಂಡದಿಂದ ಬುಲಾವ್

ಲಕ್ಕಿ ನಾಯಕಿ ಹರಿಪ್ರಿಯಾಗೆ ದಿನಕರ್ ತಂಡದಿಂದ ಬುಲಾವ್

Posted By:
Subscribe to Filmibeat Kannada

ಚಂದನವನದ ಲಕ್ಕಿ ಹೀರೋಯಿನ್ ಹರಿಪ್ರಿಯಾಗೆ ಮತ್ತೊಂದು ಬಿಗ್ ಪ್ರಾಜೆಕ್ಟ್ ನಲ್ಲಿ ನಟಿಲಸು ಅವಕಾಶ ಸಿಕ್ಕಿದೆ. ಈಗಾಗಲೇ ಸಾಲು ಸಾಲು ಸಿನಿಮಾಗಳನ್ನ ಕೈಯಲ್ಲಿಟ್ಟುಕೊಂಡಿರುವ ಹರಿಪ್ರಿಯಾ ಒಂದರ ಹಿಂದೆ ಒಂದರಂತೆ ಚಿತ್ರಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ.

ದಿನಕರ್ ತೂಗುದೀಪ ಅಡ್ಡದಿಂದ ಇದೀಗಷ್ಟೇ ಹೊರಬಂದ ಸುದ್ದಿಯಿದು...

ಹೀಗಿರುವಾಗ, ದಿನಕರ್ ತೂಗುದೀಪ್ ಡೈರೆಕ್ಷನ್ ನಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಹರಿಪ್ರಿಯಾ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೆ ದಿನಕರ್ ತೂಗುದೀಪ್ 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರವನ್ನ ಘೋಷಣೆ ಮಾಡಿದ್ದರು. ಈ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ನೆನಪಿರಲಿ ಪ್ರೇಮ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರಿಗೆ ಜೋಡಿಯಾಗಿ ಈಗ ಹರಿಪ್ರಿಯಾ ಆಯ್ಕೆಯಾಗಿದ್ದಾರೆ.

ಮೋಹಕ ಪ್ರಿಯೆಯ 'ಸಂಹಾರ' ನೋಟ

Haripriya Entry to Dinakar’s Life Jothe Ondh selfie

ಹರಿಪ್ರಿಯಾ ಅವರದ್ದು ಈ ಚಿತ್ರದಲ್ಲಿ ತುಂಬಾ ವಿಶೇಷವಾದ ಪಾತ್ರವಾಗಿದೆ ಎಂದು ದಿನಕರ್ ತೂಗುದೀಪ್ ಹೇಳಿದ್ದಾರೆ. 'ನಿರ್ದೋಸೆ' ಇಲ್ಲಿಯವರೆಗೂ ಹರಿಪ್ರಿಯಾ ಅವರ ಬೆಸ್ಟ್ ಪರ್ಫಾಮೆನ್ಸ್ ಅಂತಾನೆ ಹೇಳಬಹುದು. ಆದ್ರೆ, ಆ ರೀತಿಯ ಪಾತ್ರ ಇದಲ್ಲ. ಈ ಹಿಂದೆ ಮಾಡದ ಪಾತ್ರದಲ್ಲಿ ಹರಿಪ್ರಿಯಾ ಅಭಿನಯಿಸಲಿದ್ದಾರೆ ಎಂದು ನಿರ್ದೇಶಕರು ಹರಿಪ್ರಿಯಾ ಅವರ ಪಾತ್ರದ ಬಗ್ಗೆ ಬಹಿರಂಗಪಡಿಸಿದ್ದಾರೆ.

'ನೀರ್ ದೋಸೆ' ಹರಿಪ್ರಿಯಾ ಅವರ ಡೇಟಿಂಗ್ ವಿಷ್ಯ

CONFIRMED: Haripriya Replaces Ramya In 'Dil Ka Raja'!

ಇದೊಂದು ಸ್ನೇಹದ ಕುರಿತಾದ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ದಿನಕರ್ ತೂಗುದೀಪ್ ಅವರ ಪತ್ನಿ ಮಾನಸ ಅವರೇ ಸ್ಕ್ರಿಪ್ಟ್ ಬರೆದಿದ್ದಾರೆ. ಅಂದ್ಹಾಗೆ, ಈ ಚಿತ್ರವನ್ನ ಸಮೃದ್ಧಿ ಮಂಜುನಾಥ್ ಮತ್ತು ವಿರಾಟ್ ಸಾಯಿ ನಿರ್ಮಾಣ ಮಾಡುತ್ತಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತವಿದ್ದು, ನಿರಂಜನ್ ಬಾಬು ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸೆಪ್ಟಂಬರ್ ತಿಂಗಳಿನಲ್ಲಿ ಈ ಚಿತ್ರವ ಸೆಟ್ಟೇರಲಿದೆ.

English summary
Dinakar Thoogudeepa next directorial movie titled 'Life Jothe Ondh Selfie'. The director who had roped in Prem and Prajwal Devaraj for the film, has now brought Hariprriya on board.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada