For Quick Alerts
  ALLOW NOTIFICATIONS  
  For Daily Alerts

  'ಬೆಲ್ ಬಾಟಮ್' ಡಬ್ಬಿಂಗ್ ಮುಗಿಸಿದ ಹರಿಪ್ರಿಯಾ

  By Bharath Kumar
  |

  ಚಂದನವನದ ಮುದ್ದು ಚೆಲುವೆ ಹರಿಪ್ರಿಯಾ 25ನೇ ಚಿತ್ರದಲ್ಲಿ ಅಭಿನಯಿಸಲು ಸಜ್ಜಾಗಿದ್ದು, ಈ ಮಧ್ಯೆ ನಟಿಸುತ್ತಿರುವ ಸಿನಿಮಾಗಳನ್ನ ಮುಗಿಸುತ್ತಿದ್ದಾರೆ. ಸದ್ಯ, ರಿಷಬ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿರುವ 'ಬೆಲ್ ಬಾಟಮ್' ಚಿತ್ರದಲ್ಲಿ ಹರಿಪ್ರಿಯಾ ಬ್ಯುಸಿಯಾಗಿದ್ದಾರೆ.

  ಟಾಕಿ ಪೋಷನ್ ಶೂಟಿಂಗ್ ಮುಗಿಸಿರುವ ಹರಿಪ್ರಿಯಾ ಸದ್ಯ ಡಬ್ಬಿಂಗ್ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ತನ್ನ ಪಾತ್ರಕ್ಕೆ ಡಬ್ಬಿಂಗ್ ಕೂಡ ಮುಗಿಸಿರುವ ಹರಿಪ್ರಿಯಾ ಸಿನಿಮಾದ ಫಸ್ಟ್ ಕಾಪಿ ನೋಡಲು ಕಾತುರರಾಗಿದ್ದಾರೆ. ಸಿನಿಮಾ ಚಿತ್ರೀಕರಣ ಕೂಡ ಮುಕ್ತಾಯವಾಗಿದ್ದು, ಆದಷ್ಟೂ ಬೇಗ ಆಡಿಯೋ ಲಾಂಚ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ಹರಿಪ್ರಿಯಾಗೆ ಈಗ ಸಿಲ್ವರ್ ಜೂಬ್ಲಿ ಸಂಭ್ರಮಹರಿಪ್ರಿಯಾಗೆ ಈಗ ಸಿಲ್ವರ್ ಜೂಬ್ಲಿ ಸಂಭ್ರಮ

  ಈಗಾಗಲೇ 'ಬೆಲ್ ಬಾಟಮ್' ಚಿತ್ರದ ಪೋಸ್ಟರ್ ಹಾಗೂ ಫಸ್ಟ್ ಲುಕ್ ಗಳಿಂದ ಹೆಚ್ಚು ಗಮನ ಸೆಳೆಯುತ್ತಿದೆ. ಯಾಕಂದ್ರೆ, ಇದು 80ರ ದಶಕದಲ್ಲಿ ನಡೆಯುವ ಕಥೆಯಾಗಿದ್ದರಿಂದ ನಾಯಕ ರಿಷಬ್ ಶೆಟ್ಟಿ ರೆಟ್ರೋ ಸ್ಟೈಲ್ ನಲ್ಲಿ ಮಿಂಚಿದ್ದಾರೆ.

  ರಿಷಬ್ ಶೆಟ್ಟಿಯ ಹೊಸ ಅವತಾರವನ್ನ ಒಮ್ಮೆ ನೋಡಿರಿಷಬ್ ಶೆಟ್ಟಿಯ ಹೊಸ ಅವತಾರವನ್ನ ಒಮ್ಮೆ ನೋಡಿ

  'ಬ್ಯೂಟಿಫುಲ್ ಮನಸುಗಳು' ನಂತರ ನಿರ್ದೇಶಕ ಜಯತೀರ್ಥ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದಾಗಿದೆ. ಅಜನೀಶ್ ಲೋಕನಾಥ್ ಸಂಗೀತ ಒಳಗೊಂಡಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಜೂನ್ ಮೊದಲ ವಾರದಲ್ಲೇ ಸಿನಿಮಾ ತೆರೆಕಾಣಬಹುದು.

  English summary
  Kannada actress Haripriya has Finished Bell Bottom movie Dubbing. the movie directed by jayatheertha and also starrer director rishab shetty in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X