»   » 'ಕನಕ' ಚಿತ್ರದಲ್ಲಿಯ ರಚಿತಾ ರಾಮ್ ಜಾಗಕ್ಕೆ ಹರಿಪ್ರಿಯ ಎಂಟ್ರಿ

'ಕನಕ' ಚಿತ್ರದಲ್ಲಿಯ ರಚಿತಾ ರಾಮ್ ಜಾಗಕ್ಕೆ ಹರಿಪ್ರಿಯ ಎಂಟ್ರಿ

Posted By:
Subscribe to Filmibeat Kannada

ಆರ್‌.ಚಂದ್ರು ನಿರ್ದೇಶನದ ದುನಿಯಾ ವಿಜಯ್ ಅಭಿನಯದ 'ಕನಕ' ಚಿತ್ರ ಹಲವು ವಿಷಯಗಳಿಂದ ಸಖತ್ ಸದ್ದು ಮಾಡುತ್ತಿದೆ. ವಿಜಯ್ ಚಿತ್ರದಲ್ಲಿ ಡಾ.ರಾಜ್ ಅಪ್ಪಟ ಅಭಿಮಾನಿಯಾಗಿ ಬಣ್ಣ ಹಚ್ಚಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

'ಕನಕ' ವಿಜಯ್ ಗೆ ವಿಲನ್ ಆದ್ರು ಕೆ.ಪಿ.ನಂಜುಂಡಿ

'ಕನಕ' ಚಿತ್ರದಲ್ಲಿ ವಿಜಯ್ ಗೆ ಇಬ್ಬರು ನಾಯಕಿಯರು ಎಂಬುದನ್ನು ಈಗಾಗಲೇ ಫಿಲ್ಮಿಬೀಟ್ ನಲ್ಲಿ ಹೇಳಿದ್ವಿ. ಆದರೆ ಚಿತ್ರದ ಬಹುತೇಕ ಭಾಗ ಶೂಟಿಂಗ್ ಕಂಪ್ಲೀಟ್ ಆದರೂ ಸಹ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಮತ್ತೊಬ್ಬ ನಟಿಮಣಿ ಯಾರು ಎಂದು ಫೈನಲೈಸ್ ಆಗಿರಲಿಲ್ಲ. ಈಗ ಕೊನೆಗೂ ಚಿತ್ರಕ್ಕೆ ಎರಡನೇ ನಾಯಕಿಯಾಗಿ ನಟಿ ಹರಿಪ್ರಿಯ ಚಿತ್ರತಂಡ ಸೇರಿದ್ದಾರೆ.

Haripriya is Duniya Vijay's heroine in 'Kanaka' film

ಚಿತ್ರದಲ್ಲಿ ಮಾನ್ವಿತಾ ಹರೀಶ್ ರವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿರುವುದು ಮೊದಲೇ ತಿಳಿದಿತ್ತು. ಆದರೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಎರಡನೇ ನಾಯಕಿ ಯಾರು ಎಂಬ ಪ್ರಶ್ನೆಗೆ ಇದುವರೆಗೆ ಉತ್ತರ ಸಿಕ್ಕಿರಲಿಲ್ಲ. ಕಾರಣ ಚಿತ್ರದ ನಾಯಕಿಯಾಗಿ ಈ ಹಿಂದೆ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗಿರಲಿಲ್ಲ. ಈಗ ಅವರು ನಿರ್ವಹಿಸಬೇಕಿದ್ದ ಪಾತ್ರಕ್ಕೆ ನಟಿ ಹರಿಪ್ರಿಯ ಆಯ್ಕೆ ಆಗಿದ್ದು ಶೀಘ್ರದಲ್ಲಿ ಚಿತ್ರತಂಡ ಸೇರಲಿದ್ದಾರೆ ಎಂದು ತಿಳಿದಿದೆ.

ದುನಿಯಾ ವಿಜಯ್ ಚಿತ್ರದಿಂದ ರಚಿತಾ ರಾಮ್ ಹೊರ ಬಂದಿದ್ದೇಕೆ?

ಜನವರಿಯಲ್ಲಿ ಶೂಟಿಂಗ್ ಆರಂಭಿಸಿರುವ ಚಿತ್ರತಂಡ ಈಗಾಗಲೇ ಬಹುತೇಕ ಭಾಗ ಸಿನಿಮಾ ಶೂಟಿಂಗ್ ಮುಗಿಸಿದ್ದು, ಉತ್ತರ ಕರ್ನಾಟಕ ಭಾಗದಲ್ಲಿಯ ಚಿತ್ರೀಕರಣವಷ್ಟೇ ಬಾಕಿ ಇದೆಯಂತೆ. ಆ.ಚಂದ್ರು ರವರೇ ನಿರ್ದೇಶನ ಜೊತೆಗೆ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ, ಸತ್ಯ ಹೆಗಡೆ ಛಾಯಾಗ್ರಹಣ, ನವೀನ್ ಸಜ್ಜು ಸಂಗೀತ ನಿರ್ದೇಶನ ಇದೆ.

English summary
Actress Haripriya has been roped in as the heroine for 'Duniya' Vijay starrer 'Kanaka'. Haripriya will be joining the sets of the film soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada