For Quick Alerts
  ALLOW NOTIFICATIONS  
  For Daily Alerts

  ಹರಿಪ್ರಿಯಾ ಮನೇಲಿ ನಡೀತಿದೆ ಕೊಡೋ ತಗೋಳೋ ಮಾತುಕತೆ: ಮದ್ವೆ ಆಗ್ತಾರಾ ಬೆಡಗಿ?

  |

  ನಿಗದಿಯಾಗಿದ್ದ ಮದುವೆಗಳೇ ಮುಂದಕ್ಕೆ ಹೋಗುತ್ತಿವೆ. ಛತ್ರ ಬುಕ್ ಮಾಡಿ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದವರು ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಇನ್ನು ಕೆಲವು ಕಡೆ ಮನೆಯ ಹತ್ತು ಹದಿನೈದು ಮಂದಿಯೇ ಸೇರಿ ಮದುವೆ ಶಾಸ್ತ್ರ ಮುಗಿಸಿಬಿಡುತ್ತಿದ್ದಾರೆ. ಸದ್ಯಕ್ಕೆ ಮದುವೆ ಮುಂಜಿಗಳಂತಹ ಸಂಭ್ರಮಗಳ ಬಗ್ಗೆ ಯೋಚಿಸುವಷ್ಟು ಶಕ್ತಿಯೂ ಇಲ್ಲದಂತಾಗಿದೆ.

  ಉಪೇಂದ್ರ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದಾರೆ ಹರಿಪ್ರಿಯ | Haripriya | Upendra

  ಈ ನಡುವೆ ನಟಿ ಹರಿಪ್ರಿಯಾ ಮನೆಯಲ್ಲಿ ಕೊಡೋ ತೆಗೊಳೋ ಮಾತುಕತೆ ನಡೀತಿದೆಯಂತೆ. ಅದನ್ನು ಸ್ವತಃ ಹರಿಪ್ರಿಯಾ ತಿಳಿಸಿದ್ದಾರೆ. ಮೂಗಿಗೆ ದೊಡ್ಡದೊಂದು ಮೂಗುತ್ತಿ ಹಾಕಿಕೊಂಡ ಚೆಂದದ ಫೋಟೊ ಹಂಚಿಕೊಂಡಿರುವ ಹರಿಪ್ರಿಯಾ, ತಮ್ಮ ಮನೆಯಲ್ಲಿ ಈ ರೀತಿಯದ್ದೊಂದು ಮಾತುಕತೆ ನಡೆಯುತ್ತಿದೆ ಎಂಬ ಸುಳಿವು ನೀಡಿದ್ದಾರೆ. ಅದನ್ನು ಓದಿ ಅಭಿಮಾನಿಗಳ ಹೃದಯ ಒಡೆದಿದೆ. ಹಾಗಾದರೆ ಹರಿಪ್ರಿಯಾ ಮದುವೆಯಾಗುತ್ತಿದ್ದಾರಾ? ಯಾವಾಗ ಮದುವೆ? ಮದುವೆಯಾಗುವ ಹುಡುಗ ಯಾರು? ಇತ್ಯಾದಿ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಅವುಗಳಿಗೆ ಹರಿ ಪ್ರಿಯಾ ಅವರೇ ಉತ್ತರ ನೀಡಿದ್ದಾರೆ. ಮುಂದೆ ಓದಿ...

  ನಮ್ಮನೇಲೇ ಮಾತುಕತೆ ನಡ್ದಿದೆ

  ನಮ್ಮನೇಲೇ ಮಾತುಕತೆ ನಡ್ದಿದೆ

  ಈಗ ಎಲ್ಲಿ ನೋಡಿದ್ರೂ ಕೊಡೋ ತಗೋಳೋ ಮಾತುಕತೆ. ಇಡೀ ದೇಶಾನೇ ಲಾಕ್‌ಡೌನ್ ಆಗಿದೆ, ಇರೋ ಮದ್ವೆಗಳೇ ಮುಂದಕ್ ಹೋಗಿವೆ, ಈಗ ಯಾರು ಕೊಡೋ ತಗೊಳೋ ವಿಷಯ ಮಾತಾಡ್ತಾರೆ ಅಂದ್ಕೋಬೇಡಿ. ಪರಿಸ್ಥಿತಿ ಹೇಗೇ ಇದ್ರೂ ಈಗ ಆ ಮಾತುಕತೆ ನಡೀತಿರೋದಂತೂ ಪಕ್ಕಾ. ನಮ್ಮನೇಲೇ ಅಂಥ ಮಾತುಕತೆ ನಡ್ದಿದೆ. ಹಹಹ... ಮದ್ವೆ ಅಂದ್ಕೊಂಡ್ರಾ? ಅಲ್ವೇ ಅಲ್ಲ. ಅದ್ಕೆ ಕಾರಣ, ಮತ್ತೆ ಅದೇ ಕೊರೊನಾ!! ಎಂದು ತಮ್ಮ ಬ್ಲಾಗ್‌ನಲ್ಲಿ ಮದುವೆ ವಿಚಾರದ ಸಸ್ಪೆನ್ಸ್ ಬಿಚ್ಚಿಟ್ಟಿದ್ದಾರೆ.

  ಮೊದಲ ಬಾರಿ ಉಪ್ಪಿಗೆ ಜೋಡಿಯಾಗ್ತಿದ್ದಾರೆ ಹರಿಪ್ರಿಯಾಮೊದಲ ಬಾರಿ ಉಪ್ಪಿಗೆ ಜೋಡಿಯಾಗ್ತಿದ್ದಾರೆ ಹರಿಪ್ರಿಯಾ

  ಎಕ್ಸ್‌ಚೇಂಜ್ ಇನ್ ದ ಟೈಮ್ ಆಫ್ ಕೊರೊನಾ

  ಎಕ್ಸ್‌ಚೇಂಜ್ ಇನ್ ದ ಟೈಮ್ ಆಫ್ ಕೊರೊನಾ

  ನೀವು ‘ಲವ್ ಇನ್ ದ ಟೈಮ್ ಆಫ್ ಕಾಲರಾ' ಅಂತ ನಾವೆಲ್ ಬಗ್ಗೆ ಕೇಳಿದ್ದೀರಲ್ವ? ಅದೇ ಥರ ಇದು ‘ಎಕ್ಸ್‌ಚೇಂಜ್ ಇನ್ ದ ಟೈಮ್ ಆಫ್ ಕೊರೊನಾ' ಅಂತ ಹೇಳ್ಬೋದು. ಯಾಕ್ ಗೊತ್ತಾ? ಈಗ ಎಲ್ಲ ಬಂದ್ ಆಗಿದೆ. ಎಷ್ಟ್ ದುಡ್ ಕೊಡ್ತೀವಿ ಅಂದ್ರೂ ಕೆಲವಂತೂ ಸಿಗ್ತಾನೇ ಇಲ್ಲ. ಕೆಲವು ಅಂಗಡಿಗಳು ಓಪನ್ ಇದ್ರೂ ಸ್ಟಾಕ್ ಇಲ್ಲ.

  ನಡೀತಿರೋದು ವಸ್ತು ಎಕ್ಸ್‌ಚೇಂಜ್!

  ನಡೀತಿರೋದು ವಸ್ತು ಎಕ್ಸ್‌ಚೇಂಜ್!

  ಹಿಂದಿನ ಕಾಲದಲ್ಲಿ ಬಾರ್ಟರ್ ಸಿಸ್ಟಮ್ ಅಂತ ಇತ್ತಂತಲ್ವಾ, ಆ ಥರ ನಮ್ ಮನೇಲೂ ಕೊಡೋ ತಗೊಳೋ‌ ಮಾತುಕತೆ ಈ ಕ್ವಾರಂಟೈನ್‌ ಟೈಮಲ್ಲಿ ನಡ್ದಿತ್ತು. ನನ್ ಫ್ರೆಂಡ್ ಮನೆ ನಾಯಿಗಳಿಗೆ ಡಾಗ್ ಫುಡ್ ಇರ್ಲಿಲ್ಲ. ಅವರು ನಮ್ ಮನೆ ಅಕ್ವೇರಿಯಮ್ಮಲ್ಲಿರೋ ಮೀನುಗಳಿಗೆ ಫಿಷ್ ಫುಡ್ ಕೊಟ್ಟು ಡಾಗ್ ಫುಡ್ ತಗೊಂಡ್ ಹೋದ್ರು. ಹಾಗೇ ತುಂಬಾ ಕಡೆ ತುಂಬಾ ವಸ್ತು ಎಕ್ಸ್‌ಚೇಂಜ್ ಮಾಡ್ಕೊಂಡಿದ್ ಕೇಳಿದ್ದೆ.

  ಇಂಡಿಯನ್ ವರ್ಲ್ಡ್ ಫಿಲಂ ಫೆಸ್ಟಿವಲ್‌ನಲ್ಲಿ ಹರಿಪ್ರಿಯಾಗೆ ಅತ್ಯುತ್ತಮ ನಟಿ ಪ್ರಶಸ್ತಿಇಂಡಿಯನ್ ವರ್ಲ್ಡ್ ಫಿಲಂ ಫೆಸ್ಟಿವಲ್‌ನಲ್ಲಿ ಹರಿಪ್ರಿಯಾಗೆ ಅತ್ಯುತ್ತಮ ನಟಿ ಪ್ರಶಸ್ತಿ

  ಸಾಟಿ ವಿನಿಮಯಕ್ಕೆ ಸರಿಸಾಟಿ ಇಲ್ಲ

  ಸಾಟಿ ವಿನಿಮಯಕ್ಕೆ ಸರಿಸಾಟಿ ಇಲ್ಲ

  ಇಷ್ಟೇ ಅಲ್ಲ.. ಇತ್ತೀಚೆಗೆ ನಮ್ಮ ರಿಲೇಟಿವ್ಸ್ ಮನೇಲಿ ತರಕಾರಿ ಖಾಲಿ ಆಗಿತ್ತು. ಅವರು ನಮ್ಮನೆಗೆ ಹಣ್ಣು ತಂದುಕೊಟ್ಟು ತರಕಾರಿ ತಗೊಂಡು ಹೋದ್ರು. ಹೀಗೆ ನಿಮ್ಮಲ್ಲೂ ತುಂಬಾ ಜನರ ಮನೇಲಿ ಆಗಿದೆ ಅಲ್ವಾ? ಈ ಥರ ಎಕ್ಸ್‌ಚೇಂಜ್‌ಗೆ ಹಳ್ಳಿ ಕಡೆ ಸಾಟಿ ವಿನಿಮಯ ಅಂತಾರಂತೆ. ನೋಡಿ.. ನಮ್ಮ ಹಳೇ ಪದ್ಧತಿಗೆ ಈಗ ಸರಿಸಾಟಿ ಯಾವುದೂ ಇಲ್ಲ.

  ಹಣಕ್ಕಿಂತ ಮುಖ್ಯವಾಗಿರುವುದು ಗೊತ್ತಾಗ್ತಿದೆ

  ಹಣಕ್ಕಿಂತ ಮುಖ್ಯವಾಗಿರುವುದು ಗೊತ್ತಾಗ್ತಿದೆ

  ಹಣ ಇದ್ರೆ ಸಾಕು, ಏನು ಬೇಕಾದ್ರೂ ತಗೋಬಹುದು ಅನ್ನೋದು ಸುಳ್ಳು. ಹಣಕ್ಕಿಂತ ಆ ದಿನದ ಅಗತ್ಯ ಪೂರೈಸಿಕೊಳ್ಳೋದೇ ಮುಖ್ಯ ಅಂತ ಇದರಿಂದ ಎಲ್ಲರಿಗೂ ಗೊತ್ತಾಗ್ತಿದೆ ಅನ್ನೋದೇ ದೊಡ್ಡ ಖುಷಿ ಎಂದು ಹರಿಪ್ರಿಯಾ ಕೊರೊನಾ ವೈರಸ್ ಕಾರಣದಿಂದಾಗಿ ಜನರು ಹಣಕ್ಕಿಂತ ಮೌಲ್ಯವಾದುದ್ದನ್ನು ಕಂಡುಕೊಂಡಿದ್ದಾರೆ ಎಂದು ಬರೆದಿದ್ದಾರೆ.

  ಹರಿಪ್ರಿಯಾ ಬರಹಗಾರ್ತಿಯೂ ಹೌದು

  ಹರಿಪ್ರಿಯಾ ಬರಹಗಾರ್ತಿಯೂ ಹೌದು

  ಚೆಂದುಳ್ಳಿ ಚೆಲುವೆ ಹರಿಪ್ರಿಯಾ ಉತ್ತಮ ನಟಿ, ಅರಳು ಹುರಿದಂತೆ ಮಾತನಾಡುವವರು ಮಾತ್ರವಲ್ಲ ಒಳ್ಳೆಯ ಬರಹಗಾರ್ತಿ ಕೂಡ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಬೇಬ್ ನೌಸ್ ಎಂಬ ಬ್ಲಾಗ್‌ ಮಾಡಿಕೊಂಡಿರುವ ಹರಿಪ್ರಿಯಾ ಅದರಲ್ಲಿ ತಮ್ಮ ಅನುಭವಗಳನ್ನು ಪುಟ್ಟ ಪುಟ್ಟದಾಗಿ ಬರೆದುಕೊಳ್ಳುತ್ತಿದ್ದಾರೆ.

  English summary
  Actress Haripriya has shared her thoughts on barter system which is trending on these days due to lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X