»   » ಮಹಿಳಾ ಪ್ರಧಾನ ಥ್ರಿಲ್ಲರ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ನಟಿ ಹರಿಪ್ರಿಯಾ

ಮಹಿಳಾ ಪ್ರಧಾನ ಥ್ರಿಲ್ಲರ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ನಟಿ ಹರಿಪ್ರಿಯಾ

Posted By:
Subscribe to Filmibeat Kannada

'ನೀರ್ ದೋಸೆ' ಸಿನಿಮಾದಲ್ಲಿ ಸೆಕ್ಸ್ ವರ್ಕರ್.. 'ಕುರುಕ್ಷೇತ್ರ'ದಲ್ಲಿ ನೃತ್ಯಗಾರ್ತಿ.. 'ಸಂಹಾರ' ಚಿತ್ರದಲ್ಲಿ ವಿಲನ್.. ಹೀಗೆ ಒಂದೊಂದು ಸಿನಿಮಾದಲ್ಲೂ ಭಿನ್ನ-ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ನಟಿ ಹರಿಪ್ರಿಯಾ ಇದೀಗ ಮಹಿಳಾ ಪ್ರಧಾನ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ದಿಶಾ ಎಂಟರ್ ಟೇನ್ಮೆಂಟ್ಸ್ ಬ್ಯಾನರ್ ಅಡಿ ನಿರ್ಮಾಣ ಆಗುವ ಥ್ರಿಲ್ಲರ್ ಚಿತ್ರದಲ್ಲಿ ನಟಿಸಲು ಹರಿಪ್ರಿಯಾ ಒಪ್ಪಿಗೆ ನೀಡಿದ್ದಾರೆ. ಜೆ.ಶಂಕರ್ ನಿರ್ದೇಶನ ಮಾಡುವ ಈ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ.

ಹಾಗ್ನೋಡಿದ್ರೆ, 'ಎಂ.ಟಿ.ವಿ ಸುಬ್ಬುಲಕ್ಷ್ಮಿ' ಚಿತ್ರಕ್ಕೆ ಜೆ.ಶಂಕರ್ ಆಕ್ಷನ್ ಕಟ್ ಹೇಳಬೇಕಿತ್ತು. ಆದ್ರೆ, ಕಾರಣಾಂತರಗಳಿಂದ 'ಎಂ.ಟಿ.ವಿ ಸುಬ್ಬುಲಕ್ಷ್ಮಿ' ಚಿತ್ರ ಮುಂದಕ್ಕೆ ಹೋಗಿದೆ. ಹೀಗಾಗಿ, ಮಹಿಳಾ ಪ್ರಧಾನ ಥ್ರಿಲ್ಲರ್ ಸಬ್ಜೆಕ್ಟ್ ಮೇಲೆ ವರ್ಕ್ ಮಾಡಿ ಹರಿಪ್ರಿಯಾರನ್ನ ಒಪ್ಪಿಸುವಲ್ಲಿ ಜೆ.ಶಂಕರ್ ಯಶಸ್ವಿ ಆಗಿದ್ದಾರೆ.

Haripriya signs women oriented film directed by J Shankar

ಮದುವೆ ಆಗ್ತಾರಂತೆ ನೀರ್ ದೋಸೆ ಬೆಡಗಿ ಹರಿಪ್ರಿಯಾ!

ಚಿತ್ರದ ಕಥೆಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ನಟಿ ಹರಿಪ್ರಿಯಾ, ಜೆ.ಶಂಕರ್ ಹೇಳಿದ ಕಥೆಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದ್ದು, ಅದಾದ ಬಳಿಕ ಶೂಟಿಂಗ್ ಶುರುವಾಗಲಿದೆ.

ಹರಿಪ್ರಿಯಾ ಇನ್ನು ಮುಂದೆ ಕುಸುಮ ಬಾಲೆ

ಅಂದ್ಹಾಗೆ, ಹರಿಪ್ರಿಯಾ ಕೈಯಲ್ಲಿ 'ಸೂಜಿದಾರ', 'ಕಥಾ ಸಂಗಮ', 'ಲೈಫ್ ಜೊತೆ ಒಂದು ಸೆಲ್ಫಿ', 'ಬೆಲ್ ಬಾಟಂ' ಚಿತ್ರಗಳಿವೆ.

English summary
Kannada Actress Haripriya signs women oriented film directed by J Shankar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X