For Quick Alerts
  ALLOW NOTIFICATIONS  
  For Daily Alerts

  ನಾಲ್ಕು ಭಾಷೆಗಳಿಗೆ ಡಬ್ ಆಗುತ್ತಿದೆ ಹರಿಪ್ರಿಯಾ ನಟನೆಯ 'ಕನ್ನಡ್ ಗೊತ್ತಿಲ್ಲ'

  |

  ಹರಿಪ್ರಿಯಾ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಕನ್ನಡ್ ಗೊತ್ತಿಲ್ಲ' ಚಿತ್ರತಂಡ ಶುಭಸುದ್ದಿಯೊಂದನ್ನು ಹಂಚಿಕೊಂಡಿದೆ. ಬೇರೆ ಭಾಷೆಯ ಚಿತ್ರಗಳೆಲ್ಲ ಕನ್ನಡಕ್ಕೆ ಡಬ್ ಆಗುತ್ತಿವೆ, ಆದರೆ ಕನ್ನಡದ ಚಿತ್ರಗಳು ಬೇರೆ ಭಾಷೆಗೆ ಹೋಗುತ್ತಿಲ್ಲ ಎಂಬ ಅನೇಕರ ಬೇಸರದ ನಡುವೆ, 'ಕನ್ನಡ್ ಗೊತ್ತಿಲ್ಲ' ನಾಲ್ಕು ಭಾಷೆಗಳಿಗೆ ಡಬ್ ಆಗುತ್ತಿದೆ.

  Kannad Gothilla :ರಚಿತಾ ರಾಮ್ ಚಾನ್ಸ್ ಮಿಸ್ ಮಾಡ್ಕೊಂಡ್ರು ಹರಿಪ್ರಿಯಾ ಕ್ಯಾಚ್ ಹಾಕೊಂಡ್ರು |Mayuraa Raghavendra

  ಆರ್‌ಜೆಯಾಗಿ ಕೆಲಸ ಮಾಡುತ್ತಿದ್ದ ಮಯೂರ ರಾಘವೇಂದ್ರ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಚಿತ್ರಮಂದಿರದಲ್ಲಿ ಪ್ರೇಕ್ಷಕರಿಂದ ಅಷ್ಟೇನೂ ಉತ್ತಮ ಪ್ರತಿಕ್ರಿತೆ ಸಿಗದೆ ಹೋದರೂ ಅಮೆಜಾನ್ ಪ್ರೈಮ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಬಳಿಕ ಅದಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಅದಕ್ಕೆ ಪರಭಾಷಿಕರಿಂದಲೂ ಮೆಚ್ಚುಗೆ ಬಂದಿರುವುದರಿಂದ ನಾಲ್ಕು ಭಾಷೆಗಳಿಗೆ ಡಬ್ ಮಾಡಲು ಮುಂದಾಗಿದ್ದಾರೆ.

  ಚಿರು ಯಾವತ್ತೂ ಚಿರಂಜೀವಿನೇ...: ಹರಿಪ್ರಿಯಾ ಭಾವುಕ ಮಾತುಚಿರು ಯಾವತ್ತೂ ಚಿರಂಜೀವಿನೇ...: ಹರಿಪ್ರಿಯಾ ಭಾವುಕ ಮಾತು

  ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಚೆನ್ನಾಗಿರುವುದರಿಂದ ಸಂಜಯ್ ಲಾಲ್ವಾನಿ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಗೆ ಡಬ್ ಮಾಡಲು ಮುಂದಾಗಿದ್ದಾರೆ.

  ಡಬ್ಬಿಂಗ್ ಧಾರಾವಾಹಿ ಒಪ್ಪಿಕೊಂಡ ವೀಕ್ಷಕರು: ಹೆಚ್ಚಿದ ಟೆಲಿವಿಷನ್ ರೇಟಿಂಗ್ ಡಬ್ಬಿಂಗ್ ಧಾರಾವಾಹಿ ಒಪ್ಪಿಕೊಂಡ ವೀಕ್ಷಕರು: ಹೆಚ್ಚಿದ ಟೆಲಿವಿಷನ್ ರೇಟಿಂಗ್

  ರಾಮರಥನ ನಿರ್ಮಾಣ ಸಂಸ್ಥೆಯ ಮೂಲಕ ಕುಮಾರ ಕಂಠೀರವ 'ಕನ್ನಡ್ ಗೊತ್ತಿಲ್ಲ' ಚಿತ್ರವನ್ನು ನಿರ್ಮಿಸಿದ್ದಾರೆ. ಹರಿಪ್ರಿಯಾ, ಸುಧಾರಾಣಿ, ಸಿಹಿ ಕಹಿ ಚಂದ್ರು, ಧರ್ಮಣ್ಣ ಮುಂತಾವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನೀಡಿದ್ದರೆ, ಗಿರಿಧರ್ ದಿವಾನ್ ಛಾಯಾಗ್ರಹಣವಿದೆ.

  ಪ್ರಭಾಸ್ ಸಿನಿಮಾ ಬಹಿಷ್ಕರಿಸಲು ಆಗ್ರಹ: ಕನ್ನಡಿಗರ ಅಸಮಾಧಾನಕ್ಕೆ ಕಾರಣವೇನು?ಪ್ರಭಾಸ್ ಸಿನಿಮಾ ಬಹಿಷ್ಕರಿಸಲು ಆಗ್ರಹ: ಕನ್ನಡಿಗರ ಅಸಮಾಧಾನಕ್ಕೆ ಕಾರಣವೇನು?

  ಈ ನಾಲ್ಕು ಭಾಷೆಗಳಿಗೆ ಡಬ್ ಆದ ಬಳಿಕ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಂತರ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿಯೂ ತೆರೆಕಾಣಲಿದೆ.

  English summary
  Haripriya starrer, Mayuraa Raghavendra directed Kannad Gottilla will be dubbed into four languages soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X