»   » ಕನ್ನಡದ ತ್ರಿವಳಿ 'ರತ್ನ'ಗಳ ಬಗ್ಗೆ ಹರಿಪ್ರಿಯಾ ಖುಷಿ ಆಗಿದ್ದೇಕೆ?

ಕನ್ನಡದ ತ್ರಿವಳಿ 'ರತ್ನ'ಗಳ ಬಗ್ಗೆ ಹರಿಪ್ರಿಯಾ ಖುಷಿ ಆಗಿದ್ದೇಕೆ?

Posted By:
Subscribe to Filmibeat Kannada
Hariprriya, Kannada Actress feels happy for Darshan, Puneeth Rajkumar

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಅತಿ ಹೆಚ್ಚು ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ ಹರಿಪ್ರಿಯಾ. ಹೊಸಬರು, ಸ್ಟಾರ್ ನಟರು, ಯಶಸ್ವಿ ನಿರ್ದೇಶಕರು... ಹೀಗೆ ಎಲ್ಲರ ಚಿತ್ರಗಳಲ್ಲಿಯೂ ಹರಿಪ್ರಿಯಾ ಇರಲೇಬೇಕು ಎನ್ನುವಂತಾಗಿದೆ.

ನಟಿ ಹರಿಪ್ರಿಯಾ ಇತ್ತೀಚೆಗಷ್ಟೇ ದರ್ಶನ್ 'ಕುರುಕ್ಷೇತ್ರ'ದಲ್ಲಿ ನಟಿಸಿ ಬಂದಿದ್ದಾರೆ. ಅದಕ್ಕೂ ಮುಂಚೆ ಪುನೀತ್ ಅವರ ಅಂಜನಿಪುತ್ರ ಚಿತ್ರದಲ್ಲಿ ಕುಣಿದಿದ್ದರು. ಇವರಿಬ್ಬರಿಗೂ ಮೊದಲು ಸುದೀಪ್ ಅವರ ಸಿನಿಮಾದಲ್ಲಿ ಹರಿಪ್ರಿಯಾ ಅಭಿನಯಿಸಿದ್ದರು. ಇದೀಗ, ಈ ಮೂವರು ಸ್ಟಾರ್ ನಟರ ಬಗ್ಗೆ ಹರಿಪ್ರಿಯಾ ಖುಷಿ ಆಗಿದ್ದಾರೆ.

ಕನ್ನಡದ ತ್ರಿವಳಿ 'ರತ್ನ'ಗಳ ಚಿತ್ರಗಳಲ್ಲಿ ನಟಿಸಿದ ಬಗ್ಗೆ 'ನೀರ್ ದೋಸೆ' ಹುಡುಗಿ ಏನಂದ್ರು? ಮುಂದೆ ಓದಿ....

ದರ್ಶನ್ ಜೊತೆ 'ಕುರುಕ್ಷೇತ್ರ'ದಲ್ಲಿ ಅಭಿನಯಿಸಿದ್ದು ಅದ್ಭುತ.!

''ಕುರುಕ್ಷೇತ್ರ' ರೆಗ್ಯೂಲರ್ ಸಿನಿಮಾ ಅಲ್ಲ. ಅದು ಪೌರಾಣಿಕ ಚಿತ್ರ. ನನಗೆ ಒಂದು ಕನಸು ಇತ್ತು, ಈ ರೀತಿಯ ಸಿನಿಮಾ ಮಾಡ್ಬೇಕು ಅಂತ. ಅದು ದರ್ಶನ್ ಸರ್ ಜೊತೆಯಲ್ಲಿ ಮಾಡುವ ಅವಕಾಶ ಸಿಕ್ಕಿದ್ದು, ತುಂಬ ಖುಷಿ ಕೊಟ್ಟಿದೆ. ಪೌರಾಣಿಕ ಪಾತ್ರಕ್ಕೆ ಬೇಕಾಗುವಂತಹ ಕಾಸ್ಟ್ಯೂಮ್ಸ್ ಹಾಕ್ಕೊಂಡು ಅಭಿನಯಿಸಿದ್ದು ಅದ್ಭುತವಾಗಿತ್ತು'' - ಹರಿಪ್ರಿಯಾ, ನಟಿ

'ಅಂಜನಿಪುತ್ರ'ದಲ್ಲಿ ಪುನೀತ್ ಜೊತೆ ನಟಿಸಿದ್ದು ಹೇಗಿತ್ತು?

'ಅಂಜನಿಪುತ್ರ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಇಂಟ್ರೊಡಕ್ಷನ್ ಸಾಂಗ್ ನಲ್ಲಿ ಡ್ಯಾನ್ಸ್ ಮಾಡಿದ್ದೀನಿ. ಪುನೀತ್ ಸರ್ ಜೊತೆ, ಅವರ ಡ್ಯಾನ್ಸ್ ಗೆ ಮ್ಯಾಚ್ ಮಾಡೋಕೆ ಹರ್ಷ ಸರ್ ಸಹಾಯ ಮಾಡಿದ್ರು. ಪುನೀತ್ ಸರ್ ಗೂ ತುಂಬ ಥ್ಯಾಂಕ್ಸ್'' - ಹರಿಪ್ರಿಯಾ, ನಟಿ

ಸುದೀಪ್ ಜೊತೆ ಮತ್ತೆ ಸಿನಿಮಾ ಮಾಡ್ತೀರಾ?

''ರನ್ನ' ಸಿನಿಮಾದಲ್ಲಿ ಸುದೀಪ್ ಅವರ ಜೊತೆ ಅಭಿನಯಿಸಿದ್ದೀನಿ. ಆದ್ರೆ, ಅದು ಸಾಕಾಗಿಲ್ಲ. ಇನ್ನೂ ಹೆಚ್ಚು ಚಿತ್ರಗಳನ್ನ ಅವರ ಜೊತೆ ಮಾಡ್ಬೇಕು'' ಹರಿಪ್ರಿಯಾ, ನಟಿ

ಹರಿಪ್ರಿಯಾ ಮುಂದಿನ ಪ್ರಾಜೆಕ್ಟ್

ಹರಿಪ್ರಿಯಾ ಅಭಿನಯದ 'ಭರ್ಜರಿ' ಈ ವಾರ ಬಿಡುಗಡೆಯಾಗುತ್ತಿದೆ. ಅದಾದ ನಂತರ 'ಸಂಹಾರ', 'ಸೂಜಿದಾರ', 'ಲೈಫ್ ಜೊತೆ ಸೆಲ್ಫಿ', 'ಕಥಾ ಸಂಗಮ', 'ಕನಕ' ಚಿತ್ರಗಳಲ್ಲಿ ಹರಿಪ್ರಿಯಾ ಅಭಿನಯಿಸಿದ್ದಾರೆ.

English summary
Kannada Actress Haripriya has taken her facebook account to express her acting experience With Darshan, Puneeth Rajkumar and Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada