ಸೂಜಿದಾರ ಚಿತ್ರದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ನಟಿ ಹರಿಪ್ರಿಯಾ

Recommended Video

ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು ಸೂಜಿದಾರ ಸಿನೆಮಾ | FILMIBEAT KANNADA

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತನಟಿ ಹರಿಪ್ರಿಯಾ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮಿಂಚುದ್ದಾರೆ. ಬಹುಭಾಷನಟಿಯ ಬಳಿ ಕೈತುಂಬಾ ಸಿನಿಮಾಗಳಿವೆ. ಅಲ್ಲದೆ ಕನ್ನಡದಲ್ಲಿ ಇದೇ ತಿಂಗಳು 'D/O ಪಾರ್ವತಮ್ಮ' ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

ಸದ್ಯ ಹರಿಪ್ರಿಯಾ ಅಭಿನಯದ 'ಬೆಲ್ ಬಾಟಂ' ಸಿನಿಮಾ ಸೆಂಚುರಿ ಭಾರಿಸುವತ್ತ ಮುನ್ನುಗ್ಗುತ್ತಿದೆ. ಇದೆ ಜೊತೆಗೆ ಮೊನ್ನೆಯಷ್ಟೆ ಹರಿಪ್ರಿಯಾ ಅಭಿನಯದ 'ಸೂಜಿದಾರ' ಸಿನಿಮಾ ತೆರೆಗೆ ಬಂದಿದೆ. ಹರಿಪ್ರಿಯಾ ವಿಭಿನ್ನ ಸಿನಿಮಾಗಳ ಮೂಲಕ ವಿನೂತನ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಾರೆ.

ವಿಭಿನ್ನ ಸಿನಿಮಾ ಅಂತಾನೆ ಒಪ್ಪಿಕೊಂಡ 'ಸೂಜಿದಾರ' ಸಿನಿಮಾ ಹರಿಪ್ರಿಯಾ ಅವರಿಗೆ ಬೇಸರ ಮೂಡಿಸಿದೆಯಂತೆ. ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ 'ಸೂಚಿದಾರ' ಪಾತ್ರದ ಬಗ್ಗೆ ಹರಿಪ್ರಿಯಾ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕು ಚಿತ್ರದಲ್ಲಿ ಅಂತಹದ್ದೇನಿದೆ? ಹರಿಪ್ರಿಯ ಅಸಮಧಾನಕ್ಕೆ ಕಾರಣವೇನು?ಮುಂದೆ ಓದಿ..

ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಹರಿಪ್ರಿಯಾ

ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಹರಿಪ್ರಿಯಾ

"ಅಭಿಮಾನಿಗಳೆ ಕ್ಷಮಿಸಿ.. ಕ್ಷಮಿಸಿ.. ಕ್ಷಮಿಸಿ.. ಎಂದಿನಂತೆ ಭಾನುವಾರ ಅಭಿಮಾನಿಗಳ ಜೊತೆ ಮಾತುಕತೆ ಮಾಡುತ್ತೇನೆ. ಆದ್ರೆ ಈ ಭಾರಿ ಸಂವಾದದ ಬದಲಾಗಿ ಒಂದು ಚಿಂತೆಯನ್ನು ಮೂಡಿಸಿದೆ. ಇವತ್ತು ಸಾಕಷ್ಟು ಅಭಿಮಾನಿಗಳು ಮನೆಗೆ ಬಂದಿದ್ದರು. ಮಾಮೂಲಿಯಂತೆ ಸೆಲ್ಫಿಗಳನ್ನು ಪಡಿದುಕೊಳ್ಳುತ್ತಾರೆ. ಆದ್ರೆ ಅವರು ನನ್ನ ಸೂಜಿದಾರ ಚಿತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಚಿತ್ರದಲ್ಲಿ ನನ್ನಿಂದ ಜಾಸ್ತಿ ನಿರೀಕ್ಷೆ ಮಾಡಿದ್ದಾರೆ. ಆದ್ರೆ ಆ ಚಿತ್ರದಲ್ಲಿ ನಾನು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇದರಿಂದ ಬೇಸರ ಮಾಡಿಕೊಂಡು ಚಿತ್ರಮಂದಿರದಿಂದ ಹೊರಬಂದಿದ್ದಾರೆ.

ಕಥೆ ಹೇಳಿದ್ದೆ ಒಂದು ಸಿನಿಮಾ ಮಾಡಿದ್ದೊಂದು

"ನಿಜವಾಗಿಯೂ ಹೇಳುತ್ತೇನೆ ಅವರು ಕತೆ ಹೇಳಿದ್ದೆ ಬೇರೆ. ಆದ್ರೆ ಚಿತ್ರದಲ್ಲಿ ಅನಾವಶ್ಯಕ ದೃಶ್ಯಗಳನ್ನು ಸೇರಿದ್ದಾರೆ. ಮೊದಲ ದಿನ ಸಿನಿಮಾ ನೋಡಿದಾಗಲೆ ನನಗೆ ಅನಿಸಿತು ಆದ್ರೆ ಈ ಬಗ್ಗೆ ನಾನು ಏನು ಮಾತನಾಡದೆ ಸುಮ್ಮನಿದ್ದೆ. ಪೂರ್ಣ ಪ್ರಮಾಣದ ಫೀಚರ್ ಚಿತ್ರ ಮಾಡುವ ಉದ್ದೇಶದಿಂದ ರಂಗಭೂಮಿ ತಂಡಕ್ಕೆ ಸಾಥ್ ಕೊಟ್ಟೆ. ಆದ್ರೀಗ ನೋಡಿ ಹೇಗಾಗಿದೆ. ಆದ್ರೆ ದಯವಿಟ್ಟು ಕ್ಷಮಿಸಿ. ಮತ್ತೆ ಈ ತಪ್ಪನ್ನು ನಾನು ಮಾಡುವುದಿಲ್ಲ. ಮುಂದಿನ ಸಿನಿಮಾಗಳಲ್ಲಿ ನಾನು ನಿಮ್ಮನ್ನು ಮತ್ತಷ್ಟು ಮನರಂಜನೆ ನೀಡುತ್ತೇನೆ"

ಸಣ್ಣಕಥೆ ಆಧರಿಸಿ ಮಾಡಿದ ಸಿನಿಮಾ

ಸಣ್ಣಕಥೆ ಆಧರಿಸಿ ಮಾಡಿದ ಸಿನಿಮಾ

ಹೆಚ್.ಬಿ.ಇಂದ್ರ ಕುಮಾರ್ ಅವರ ಸಣ್ಣ ಕಥೆ ಆಧಾರಿಸಿ, ಅದಕ್ಕೆ ಹಲವಾರು ಅಂಶಗಳನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಮೌನೇಶ್ ಬಡಿಗೇರ್. ಸ್ಯಾಂಡಲ್ ವುಡ್ ನ ಒಂದು ಪ್ರಯೋಗಾತ್ಮಕ ಸಿನಿಮಾವಾಗಿ ಬ್ರಿಡ್ಜ್ ಚಿತ್ರದ ರೂಪದಲ್ಲಿ ಮೂಡಿಬಂದ ಸಿನಿಮಾ. ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದ್ರೆ ಕೆಲವು ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಬೇಸರ ಮೂಡಿಸಿದೆ. ಅಲ್ಲದೆ ಹರಿಪ್ರಿಯಾ ನಿರೀಕ್ಷೆಯ ಮಟ್ಟ ಮುಟ್ಟಲಿಲ್ಲ ಎನ್ನುವುದು ಅಸಮಧಾನಕ್ಕೆ ಕಾರಣವಾಗಿದೆ.

ಮೌನೇಶ್ ಬಡಿಗೇರ್ ನಿರ್ದೇಶನ

ಮೌನೇಶ್ ಬಡಿಗೇರ್ ನಿರ್ದೇಶನ

ಸೂಜಿದಾರ ಮೌನೇಶ್ ಬಡಿಗೇರ್ ನಿರ್ದೇಶನದ ಚೊಚ್ಚಲ ಸಿನಿಮಾ. ಬಹುತೇಕ ರಂಗಭೂಮಿ ಕಲಾವಿದರೆ ಸೇರಿಕೊಂಡು ಮಾಡಿರುವ ಸಿನಿಮಾ. ಹರಿಪ್ರಿಯಾ ವಿಭಿನ್ನ ಲುಕ್ ಗಳನ್ನು ರಿಲೀಸ್ ಮಾಡಿ ಚಿತ್ರದ ಮೇಲಿನ ನಿರೀಕ್ಷೆಯ ಮಟ್ಟವನ್ನು ಹೆಚ್ಚಿಸಿತ್ತು ಚಿತ್ರತಂಡ. ಪೋಸ್ಟರ್ ಗಳನ್ನೆ ನೋಡಿ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟ ಅಭಿಮಾನಿಗಳಿಗೆ ಬೇಸರ ಮೂಡಿಸಿದೆಯಂತೆ.

ಸುಚೇಂದ್ರ ಪ್ರಸಾದ್, ಅಚ್ಯುತ್, ಯಶವಂತ್ ಶೆಟ್ಟಿ

ಸುಚೇಂದ್ರ ಪ್ರಸಾದ್, ಅಚ್ಯುತ್, ಯಶವಂತ್ ಶೆಟ್ಟಿ

ಚಿತ್ರದಲ್ಲಿ ಬಹುತೇಕರು ರಂಗಭೂಮಿ ಹಿನ್ನಲೆ ಇರುವವರೇ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್ ಹರಿಪ್ರಿಯಾ ಪತಿಯ ಪಾತ್ರದಲ್ಲಿ ಮಿಂಚಿದ್ದಾರೆ. ಯಶವಂತ್ ಶೆಟ್ಟಿ ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ದಾರೆ. ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

More from Filmibeat

English summary
Kannada actress Haripriya unhappy about 'Soojidara' Kannada movie. she apologized her fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X