For Quick Alerts
  ALLOW NOTIFICATIONS  
  For Daily Alerts

  ಪಾರ್ವತಮ್ಮನ ಪಾತ್ರದಲ್ಲಿ ಸುಮಲತಾ ಅಂಬರೀಶ್

  By Pavithra
  |

  ಕನ್ನಡ ಸಿನಿಮಾರಂಗದ ಪ್ರತಿಯೊಬ್ಬರು ಅಮ್ಮ ಅಂತಾನೇ ಕರೆಯುತ್ತಿದ್ದ ನಿರ್ಮಾಪಕಿ ಪಾರ್ವತಮ್ಮ. ಪಾರ್ವತಮ್ಮ ರಾಜ್ ಕುಮಾರ್ ಎಲ್ಲರನ್ನೂ ಬಿಟ್ಟು ಹೋಗಿ ಸಾಕಷ್ಟು ತಿಂಗಳುಗಳೇ ಕಳೆದು ಹೋಗಿದೆ. ಆದರೆ ಸದ್ಯ ಸುಮಲತಾ ಅಂಬರೀಶ್ ಪಾರ್ವತಮ್ಮನ ಪಾತ್ರದಲ್ಲಿ ತೆರೆ ಮೇಲೆ ಬರುತ್ತಿದ್ದಾರೆ. ಅರೆ ಪಾರ್ವತಮ್ಮ ರಾಜ್ ಕುಮಾರ್ ಅವರ ಬಗ್ಗೆ ಸಿನಿಮಾ ಬರುತ್ತಿದೆಯೇ? ಎಂದು ಪ್ರಶ್ನೆ ಕೇಳಬೇಡಿ.

  ಈ ಪಾರ್ವತಮ್ಮನೇ ಬೇರೆ. ಹರಿಪ್ರಿಯಾ ಅಭಿನಯದ ಮಹಿಳಾ ಪ್ರಧಾನ ಸಿನಿಮಾ ಟೈಟಲ್ 'ಡಾಟರ್ ಆಫ್ ಪಾರ್ವತಮ್ಮ' ಎಂದು ಫಿಕ್ಸ್ ಆಗಿದೆ. ಹರಿಪ್ರಿಯಾ ಅಭಿನಯದ 25 ನೇ ಕನ್ನಡ ಸಿನಿಮಾ ಇದಾಗಿದ್ದು ಸುಮಲತಾ ಅಂಬರೀಶ್ ತಾಯಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಸದ್ದಿಲ್ಲದೆ ಸಿನಿಮಾದ ಮೊದಲ ಹಂತದ ಚಿತ್ರೀಕರಣವನ್ನ ಮುಗಿಸಿದ್ದಾರೆ ನಿರ್ದೇಶಕ ಶಂಕರ್.

  ಹರಿಪ್ರಿಯಾಗೆ ಈಗ ಸಿಲ್ವರ್ ಜೂಬ್ಲಿ ಸಂಭ್ರಮಹರಿಪ್ರಿಯಾಗೆ ಈಗ ಸಿಲ್ವರ್ ಜೂಬ್ಲಿ ಸಂಭ್ರಮ

  ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಈ ಸಿನಿಮಾ ಮತ್ತು ಶೀರ್ಷಿಕೆಗೂ ಯಾವುದೇ ಸಂಬಂದವಿಲ್ಲವಂತೆ. ಚಿತ್ರದಲ್ಲಿ ಹರಿಪ್ರಿಯಾರನ್ನ ಎಲ್ಲರೂ ಪಾರ್ವತಮ್ಮನ ಮಗಳು ಎಂದು ಕರೆಯುತ್ತಿರುತ್ತಾರೆ ಅದೇ ಕಾರಣದಿಂದ ಚಿತ್ರಕ್ಕೆ 'ಡಾಟರ್ ಆಫ್ ಪಾರ್ವತಮ್ಮ' ಎಂದು ಹೆಸರಿಡಲಾಗಿದೆ.

  ಇನ್ನು ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ತನಿಖಾಧಿಕಾರಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಸದ್ಯ ಹರಿಪ್ರಿಯಾ ಮತ್ತು ಸುಮಲತಾ ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಅಭಿಮಾನಿಗಳಿಗೆ ಹೊಸ ಸುದ್ದಿ ಕೊಡ್ತಾರಂತೆ ಹರಿಪ್ರಿಯಾಅಭಿಮಾನಿಗಳಿಗೆ ಹೊಸ ಸುದ್ದಿ ಕೊಡ್ತಾರಂತೆ ಹರಿಪ್ರಿಯಾ

  English summary
  Kannada actress Haripriya's 25th Kannada film is titled Daughter of Parvathamma. actress Sumalatha Ambarish plays the role of Parvathamma in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X