For Quick Alerts
  ALLOW NOTIFICATIONS  
  For Daily Alerts

  ವೇದಿಕೆ ಮೇಲೆ ಅಂಬಿಗೆ ಮುತ್ತು ಕೊಟ್ಟ ನಟಿ ಹರ್ಷಿಕಾ

  By Naveen
  |

  ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟನೆಯ 'ದಿ ವಿಲನ್' ಸಿನಿಮಾದ ಅದ್ದೂರಿ ಆಡಿಯೋ ಕಾರ್ಯಕ್ರಮ ದುಬೈ ನಲ್ಲಿ ನಡೆದಿದೆ. ಕಳೆದ ಶುಕ್ರವಾರ ಸಿನಿಮಾದ ಕಾರ್ಯಕ್ರಮ ನಡೆದಿದ್ದು, ಸಖತ್ ಕಲರ್ ಫುಲ್ ಆಗಿ ಇತ್ತು. ಅಂದಹಾಗೆ, ಈ ಕಾರ್ಯಕ್ರಮ ಅನೇಕ ವಿಶೇಷತೆಗಳನ್ನು ಹೊಂದಿತ್ತು.

  ನಟ ಸುದೀಪ್ ಅವರನ್ನು ಹೊರತು ಪಡಿಸಿ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ನಟ ಶಿವರಾಜ್ ಕುಮಾರ್, ನಟಿ ಆಮಿ ಜಾಕ್ಸನ್, ನಿರ್ದೇಶಕ ಪ್ರೇಮ್, ನಿರ್ಮಾಪಕ ಸಿ ಆರ್ ಮನೋಹರ್ ಹಾಗೂ ಅರ್ಜುನ್ ಜನ್ಯ ಕಾರ್ಯಕ್ರಮದಲ್ಲಿ ಹಾಜರಿದ್ದರು.

  ದುಬೈನಲ್ಲಿ ನಡೆದ 'ವಿಲನ್' ಆಡಿಯೋ ಲಾಂಚ್ ಗೆ ಸುದೀಪ್ ಹೋಗಿಲ್ಲ ಯಾಕೆ.? ದುಬೈನಲ್ಲಿ ನಡೆದ 'ವಿಲನ್' ಆಡಿಯೋ ಲಾಂಚ್ ಗೆ ಸುದೀಪ್ ಹೋಗಿಲ್ಲ ಯಾಕೆ.?

  ರೆಬಲ್ ಸ್ಟಾರ್ ಅಂಬರೀಶ್ ಈ ಕಾರ್ಯಕ್ರಮ ಮುಖ್ಯ ಅತಿಥಿಯಾಗಿದ್ದರು.ಈ ವೇಳೆ ವೇದಿಕೆ ಮೇಲೆ ಕುಣಿಯುತ್ತಿದ್ದ ಅವರಿಗೆ ಹರ್ಷಿಕಾ ಪೂಣಚ್ಛ ಪ್ರೀತಿಯಿಂದ ಮುತ್ತು ನೀಡಿದ್ದಾರೆ. ಮುಂದೆ ಓದಿ...

  ಕಾರ್ಯಕ್ರಮದಲ್ಲಿ ಅಂಬರೀಶ್ ಅವರಿಗೆ ಟ್ರಿಬ್ಯೂಟ್

  ಕಾರ್ಯಕ್ರಮದಲ್ಲಿ ಅಂಬರೀಶ್ ಅವರಿಗೆ ಟ್ರಿಬ್ಯೂಟ್

  ದುಬೈ ನಲ್ಲಿ ನಡೆದ 'ದಿ ವಿಲನ್' ಕಾರ್ಯಕ್ರಮದಲ್ಲಿ ನಟ ಅಂಬರೀಶ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಅಂಬರೀಶ್ ಅವರಿಗೆ ಟ್ರಿಬ್ಯೂಟ್ ನೀಡಲಾಗಿತ್ತು. 'ಈ ಕನ್ನಡ ಮಣ್ಣನು ಮರಿಬೇಡ...' ಹಾಡು ಸೇರಿದಂತೆ ಅಂಬರೀಶ್ ಅವರ ಸೂಪರ್ ಹಿಟ್ ಹಾಡುಗಳಿಗೆ ಹರ್ಷಿಕಾ ಪೂಣಚ್ಛ ಹೆಜ್ಜೆ ಹಾಕಿದರು.

  ಅಂಬಿಗೆ ಪ್ರೀತಿಯ ಚುಂಬನ

  ಅಂಬಿಗೆ ಪ್ರೀತಿಯ ಚುಂಬನ

  ಅಂಬರೀಶ್ ಹಾಡುಗಳಿಗೆ ನೃತ್ಯ ಮಾಡಿದ ನಟಿ ಹರ್ಷಿಕಾ ಪೂಣಚ್ಛ ಕೊನೆಗೆ ವೇದಿಕೆ ಮೇಲೆ ಬಂದ ಅಂಬಿ ಅವರಿಗೆ ಪ್ರೀತಿಯಿಂದ ತಬ್ಬಿಕೊಂಡು ಮುತ್ತು ಕೊಟ್ಟರು. ಅಂಬರೀಶ್ ಕೂಡ ತಮ್ಮ ಹಾಡುಗಳಿಗೆ ಕುಣಿದರು. ಅಂಬಿ ಕುಣಿತ ಕಂಡ ಅವರ ಅಭಿಮಾನಿಗಳು ಶಿಳ್ಳೆ ಚೆಪ್ಪಾಳೆ ಹೊಡೆದರು.

  ದುಬೈ ನೆಲದಲ್ಲಿ ಹಾಡಿ ಕುಣಿದ 'ದಿ ವಿಲನ್' ದುಬೈ ನೆಲದಲ್ಲಿ ಹಾಡಿ ಕುಣಿದ 'ದಿ ವಿಲನ್'

  ಶಿವಣ್ಣ ಜೊತೆ ಆಮಿ ಡ್ಯಾನ್ಸ್

  ಶಿವಣ್ಣ ಜೊತೆ ಆಮಿ ಡ್ಯಾನ್ಸ್

  ಶಿವರಾಜ್ ಕುಮಾರ್ ಹಾಗೂ ಆಮಿ ಜಾಕ್ಸನ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದರು. ಇಬ್ಬರ ಡ್ಯಾನ್ಸ್ ನೋಡಿ ದುಬೈ ಕನ್ನಡಿಗರು ಖುಷಿ ಪಟ್ಟರು. 'ದಿ ವಿಲನ್' ಸಿನಿಮಾದ 'ನೋಡವಳಾಂದವ...' ಹಾಡಿಗೆ ಶಿವಣ್ಣ ಜೊತೆಗೆ ಆಮಿ ಜಾಕ್ಸನ್ ಕುಣಿದು ಕುಪ್ಪಳಿಸಿದರು.

  ನಾಯಕಿಯರ ನೃತ್ಯ

  ನಾಯಕಿಯರ ನೃತ್ಯ

  ಕಾರ್ಯಕ್ರಮದ ಸುಂದರ ಸಂಜೆಯಲ್ಲಿ ಕನ್ನಡದ ಕೆಲ ನಟಿಯರ ನೃತ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಟಿ ಭಾವನಾ ರಾವ್, ಕಾರುಣ್ಯ ರಾಮ್, ಸೋನು ಗೌಡ ಸೇರಿದಂತೆ ಕೆಲ ನಟಿಯರು ಕಾರ್ಯಕ್ರಮವನ್ನು ಹೆಚ್ಚು ಕಲರ್ ಫುಲ್ ಆಗುವಂತೆ ಮಾಡಿದರು.

  ಸುದೀಪ್ ಬರಲಿಲ್ಲ ಯಾಕೆ?

  ಸುದೀಪ್ ಬರಲಿಲ್ಲ ಯಾಕೆ?

  ಒಂದು ನಿರಾಸೆಯ ಸಂಗತಿ ಎಂದರೆ ಈ ಕಾರ್ಯಕ್ರಮಕ್ಕೆ ಸುದೀಪ್ ಬರಲು ಸಾಧ್ಯ ಆಗಲಿಲ್ಲ. ಸುದೀಪ್ ನೇತೃತ್ವದಲ್ಲಿ ಸೆಪ್ಟಂಬರ್ 8, 9 ರಂದು ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದೆ. ಬಹುಶಃ ಈ ಟೂರ್ನಿಯ ಬ್ಯುಸಿಯಲ್ಲಿ ದುಬೈಗೆ ಹೋಗಲು ಸಾಧ್ಯವಾಗದೇ ಇರಬಹುದು. ಅಥವಾ 'ಪೈಲ್ವಾನ್', 'ಕೋಟಿಗೊಬ್ಬ-3' ಹಾಗೂ ತೆಲುಗಿನ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ಶೂಟಿಂಗ್ ಕಾರಣವಾಗಿರಬಹುದಾ.? ನಿಜವಾದ ಕಾರಣ ಗೊತ್ತಿಲ್ಲ.

  English summary
  Kannada actress Harshika Poonacha kissed Actor Ambareesh in 'The Villain' movie audio launch. Actor Sudeep and Shivarajkumar starrer Kannada Movie 'The Villain' audio released in Dubai Yesterday ( 24th August).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X