For Quick Alerts
  ALLOW NOTIFICATIONS  
  For Daily Alerts

  ಹರ್ಷಿಕಾ ಪೂಣಚ್ಚ ರಾತ್ರಿ ಸ್ಕಂದಗಿರಿ ಬೆಟ್ಟ ಹತ್ತಿದ್ಯಾಕೆ?

  By Rajendra
  |

  ನಿಮಗೇ ಗೊತ್ತು ಇದು ಚಳಿಗಾಲ. ಬೆಳಿಗ್ಗೆ ಬೆಳಿಗ್ಗೆ ಏಳೋಕಾಗ್ದೇ ಇರುವಷ್ಟು ಚಳಿ ಇರುತ್ತೆ. ಆದರೆ ಅದ್ಯಾವುದನ್ನೂ ಲೆಕ್ಕಿಸದೇ ಕೊಡಗಿನ ಬೆಡಗಿನ ಹರ್ಷಿಕಾ ಪೂಣಚ್ಚ ಇತ್ತೀಚೆಗೆ ಮಧ್ಯರಾತ್ರಿಯಲ್ಲಿ ಮನೆಯಿಂದ ಹೊರಟು ಬೆಂಗಳೂರಿಂದ 40 ಕಿ.ಮೀ ದೂರ ಇರೋ ಸ್ಕಂದಗಿರಿ ಬೆಟ್ಟಕ್ಕೆ ರಾತ್ರಿ 2 ಗಂಟೆಗೆ ತಲುಪಿದರು.

  ಅಲ್ಲಿಂದ ಶುರುವಾಯ್ತು ಬೆಟ್ಟ ಹತ್ತೋ ಕೆಲಸ. ಒಂದು ಕಡೆ ಚಳಿಯಿಂದ ಮೈಯಲ್ಲಾ ಕೊರೀತಾ ಇದ್ದರೆ ಹರ್ಷಿಕಾ ಯಾವುದಕ್ಕೂ ಕೇರ್ ಮಾಡ್ದೇ ಬೆಟ್ಟ ಹತ್ತಿದರು. ಬೆಟ್ಟದ ಮೇಲೆ ತಲುಪಿದಾಗ ಬೆಳ್ಳಂಬೆಳಗ್ಗೆ 4 ಗಂಟೆ. ಅಲ್ಲಿ ಏನಾದರೂ ಪೂಜೆ ಇತ್ತ. ಸದ್ಯ ರಿಲೀಸಾಗಿರೋ 'ಬಿ3' ಸಿನಿಮಾಗೆ ಹರಕೆ ಹೊತ್ತಿದ್ರಾ? [ಅಯ್ಯೋ, ಆ ದೊಡ್ಡ ಬೆಟ್ಟ ಏನು ಹತ್ತೀಯಾ?]

  ಇದ್ಯಾವುದೂ ಅಲ್ಲ. ಅಲ್ಲೊಂದು ಚಿತ್ರದ ಟ್ರೇಲರ್ ಗೆ ಫೋಟೋಶೂಟ್ ಇತ್ತು. ಚಿತ್ರದ ಹೆಸ್ರು 'ಲವ್ ದರ್ಬಾರ್'. ವಿಘ್ನೇಶ್ವರ ವಿಶ್ವ ಅನ್ನೋ ಮಲೆನಾಡ ಮೈಲಾರಿ ನಿರ್ದೇಶಿಸ್ತಾ ಇರೋ ವಿಭಿನ್ನ ಸಿನಿಮಾದ ಫೋಟೋಶೂಟ್. ಇಡೀ ಚಿತ್ರತಂಡವೇ ಅಲ್ಲಿತ್ತು. ಚಿತ್ರದ ಕಾನ್ಸೆಪ್ಟ್ ಮತ್ತು ಸ್ಕ್ರಿಪ್ಟ್ ನೋಡಿ ಥ್ರಿಲ್ಲಾಗಿರೋ ಹರ್ಷಿಕಾ ಪೂಣಚ್ಚ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ಸ್ಕಂದಗಿರಿ ಬೆಟ್ಟದಲ್ಲಿ ಮುಂಜಾನೆಯ ಸೂರ್ಯ ಮೂಡೋಕು ಮೊದಲು ಫೋಟೋಶೂಟ್ ಮಾಡ್ಬೇಕು ಅನ್ನೋದಕ್ಕಾಗೀನೇ ಕೊರೆಯೋ ಚಳಿಯಲ್ಲೂ ಹರ್ಷಿಕಾ ಮತ್ತು ಭುವನ್ ಅನ್ನೋರು ಬೆಟ್ಟ ಹತ್ತಿ ಪೋಟೋಗೆ ಪೋಸ್ ಕೊಟ್ಟಿದ್ದಾರೆ. [ಸ್ಕಂದ ಬೆಟ್ಟಕ್ಕೆ ಟ್ರೆಕ್ಕಿಂಗ್]

  ಸ್ಯಾಂಡಲ್ ವುಡ್ ನಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಬರೆದಿರೋ ವಿಘ್ನೇಶ್ವರ ವಿಶ್ವ ನಿರ್ದೇಶನದ ಚೊಚ್ಚಲ ಚಿತ್ರ ನಾಲ್ಕು ಭಾಷೆಗಳಲ್ಲಿ ತಯಾರಾಗಲಿದೆ. ತಮಿಳು, ತೆಲುಗು, ಕನ್ನಡ, ಹಿಂದಿ ಬಾಷೆಗಳಲ್ಲಿ ಟ್ರೇಲರ್ ಮತ್ತು ಸಿನಿಮಾ ರೆಡಿಯಾಗಲಿದೆ.

  ಚಿತ್ರಕ್ಕೆ ಸಂಗೀತ ನಿರ್ದೇಶಕ ಅಜನೀಶ್, ಜೈ ಹೋ ಖ್ಯಾತಿಯ ವಿಜಯಪ್ರಕಾಶ್ ಕಂಠ ಕಮಾಲ್ ಮಾಡಲಿದೆ. ಬಹುಶಃ ಒಂದು ಟ್ರೇಲರ್ ಇಷ್ಟು ರಿಚ್ ಆಗಿ ಶೂಟ್ ಆಗ್ತಿರೋದು ಕನ್ನಡ ಚಿತ್ರರಂಗದಲ್ಲೇ ಇದೇ ಮೊದಲು.

  ಟೈಗರ್ ಧರ್ಮ ಸೇರಿದಂತೆ ಹಲವು ಹಿರಿಯ ನಟರು ಚಿತ್ರದ ಟ್ರೇಲರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಲವ್ ದರ್ಬಾರ್' ಅನ್ನೋ ಲವ್ಲೀ ಚಿತ್ರ ಒಂದು ಕ್ಯೂಟ್ ಕ್ಯೂಟ್ ಲವ್ ಸ್ಟೋರಿ. ಚಿತ್ರದ ಫಸ್ಟ್ ಲುಕ್ ನ ಜೊತೆಗೆ ಮತ್ತಷ್ಟು ಇಂಟರೆಸ್ಟಿಂಗ್ ಮಾಹಿತಿಗಳನ್ನು ನಿಮ್ಮ ನೆಚ್ಚಿನ ಒನ್ಇಂಡಿಯಾ ಕನ್ನಡದಲ್ಲಿ ನಿರೀಕ್ಷಿಸಿ.

  English summary
  The photo shoot of actress Harshika Poonacha upcoming movie 'Love Darbar' held at Skandagiri hills located approximately 70 km from Bangalore city, and 3 km from Chikballapur. The movie directed by Vigneshwara Vishwa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X