»   » ಉಪ್ಪಿ ಕೈಯಿಂದ ಗೋರಂಟಿ ಹಾಕಿಸಿಕೊಳ್ಳಲಿರುವ ಹರ್ಷಿಕಾ ಪೂಣಚ್ಚ

ಉಪ್ಪಿ ಕೈಯಿಂದ ಗೋರಂಟಿ ಹಾಕಿಸಿಕೊಳ್ಳಲಿರುವ ಹರ್ಷಿಕಾ ಪೂಣಚ್ಚ

Posted By:
Subscribe to Filmibeat Kannada

ತೆಲುಗಿನ 'ಸೊಗ್ಗಾಡೆ ಚಿನ್ನಿನಾಯನ' ಚಿತ್ರದ ರೀಮೇಕ್ ಆಗಿರುವ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರದಲ್ಲಿ ಉಪೇಂದ್ರ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ನಾಯಕಿಯರಾಗಿ ನಟಿ ಪ್ರೇಮ ಮತ್ತು ನಟಿ ಶ್ರುತಿ ಹರಿಹರನ್ ಅವರು ಸಾಥ್ ಕೊಡಲಿದ್ದಾರೆ.

ಇದೀಗ ಈ ಚಿತ್ರದ ಶೂಟಿಂಗ್ ಸೆಟ್ ಗೆ ನಟಿ ಹರ್ಷಿಕಾ ಪೂಣಚ್ಚ ಅವರು ಕೂಡ ಸೇರಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿ ಹರ್ಷಿಕಾ ಪೂಣಚ್ಚ ಅವರು ಒಂದು ಚಿಕ್ಕ ಪಾತ್ರ ವಹಿಸಲಿರುವುದರಿಂದ ಈ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.[ಉಪ್ಪಿಗೆ ಮತ್ತೆ ಹುಟ್ಟಿ ಬಾ ಅಂತ ಪತ್ರ ಬರೆದಿದ್ದು ಪ್ರೇಮಾ ಅವರಾ?]


Actress Harshika Poonacha's Guest role in 'Upendra matte hutti baa, Inti Prema'

ಅಂದಹಾಗೆ ಈ ಚಿತ್ರದಲ್ಲಿ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ನಟ ಉಪೇಂದ್ರ ಅವರು ಕೈಗೆ ಗೋರಂಟಿ (ಮೆಹೆಂದಿ) ಹಾಕಲಿದ್ದಾರೆ. ಮಾತ್ರವಲ್ಲದೇ ಹರ್ಷಿಕಾ ಅವರು ಉಪ್ಪಿ ಅವರ ಜೊತೆ ಒಂದು ರೋಮ್ಯಾಂಟಿಕ್ ಹಾಡಿಗೂ ಸಖತ್ ಆಗಿ ಹೆಜ್ಜೆ ಹಾಕಲಿದ್ದಾರೆ.


ಚಿತ್ರಕ್ಕೆ 'H2O' ಚಿತ್ರದ ಖ್ಯಾತಿಯ ನಿರ್ದೇಶಕ ಎನ್ ಲೋಕನಾಥ್ ಅವರು ಆಕ್ಷನ್-ಕಟ್ ಹೇಳಲಿದ್ದು, ನಿರ್ಮಾಪಕ ಶ್ರೀರಾಮ್ ಅವರು ಬಂಡವಾಳ ಹೂಡುತ್ತಿದ್ದಾರೆ.[ಏನು ಹರ್ಷಿಕಾ ಪೂಣಚ್ಚ ಬಾಲಿವುಡ್ ಗೆ ಹೋಗ್ತಿಲ್ವಾ?]


Actress Harshika Poonacha's Guest role in 'Upendra matte hutti baa, Inti Prema'

ಪಕ್ಕಾ ರೋಮ್ಯಾಂಟಿಕ್ ಥ್ರಿಲ್ಲರ್ ಹಾಗೂ ಫ್ಯಾಮಿಲಿ ಎಂರ್ಟಟೈನರ್ 'ಉಪೇಂದ್ರ ಮತ್ತೆ ಹುಟ್ಟಿ ಬಾ' ಎಂಬ ಚಿತ್ರದಲ್ಲಿ ನಟ ವಸಿಷ್ಟ ಎನ್.ಸಿಂಹ ಅವರು ಖಳನಟನ ಪಾತ್ರದಲ್ಲಿ ಮಿಂಚುವ ಮೂಲಕ ಮತ್ತೆ ಪ್ರೇಕ್ಷಕರಿಗೆ ಮೋಡಿ ಮಾಡಲಿದ್ದಾರೆ.[ಅವಕಾಶಗಳ ಬೆನ್ನೇರಿ ಸವಾರಿ ಆರಂಭಿಸಿದ ಕ್ಯೂಟ್ ವಿಲನ್ ವಸಿಷ್ಟ]

English summary
Kannada Actor Upendra, Kannada Actress Prema and Kannada Actress Sruthi Hariharan have joined hands, for a new movie titled 'Upendra matte hutti baa, Inti Prema' which is directed by N.Lokanath. The latest news is that, Actress Harshika Poonacha is playing a cameo role in the movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X