»   » ಹರ್ಷಿಕಾ ಪೂಣಚ್ಚ ಅಭಿನಯದ 'ಅದಿತಿ' ಫಸ್ಟ್ ಲುಕ್ ಬಿಡುಗಡೆ

ಹರ್ಷಿಕಾ ಪೂಣಚ್ಚ ಅಭಿನಯದ 'ಅದಿತಿ' ಫಸ್ಟ್ ಲುಕ್ ಬಿಡುಗಡೆ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 2' ನಂತರ ಸಂಪೂರ್ಣ ತಮ್ಮನ್ನು ಸಿನಿಮಾ ದಲ್ಲಿ ತೊಡಿಗಿಸಿಕೊಂಡಿರುವ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ, ಬಹುಭಾಷಾ ನಟಿ ಆಗಿ ಕಾಣಸಿಕೊಂಡಿದ್ದಾರೆ. ಕನ್ನಡದಲ್ಲಿ 'ಕ್ರೇಜಿ ಕೃಷ್ಣ' ನಂತರ ಯಾವುದೇ ಸಿನಿಮಾ ದಲ್ಲೂ ಕಾಣಿಸಿಕೊಳ್ಳದ ನಟಿ ಈಗ ತೆರೆ ಮೇಲೆ ಬರಲು ಸಜ್ಜಾಗುತ್ತಿದ್ದಾರೆ.[ಹರ್ಷಿಕಾ ಪೂಣಚ್ಚಗೆ ಲಕ್ ತಂದುಕೊಟ್ಟ ಒಂದೇ ಒಂದು ಫೋಟೋ.!]

ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಬಿಜಿ ಆಗಿದ್ದ ಹರ್ಷಿಕಾ, ಸಡನ್ ಆಗಿ ಯಾವ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅಂತಿರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ..

ಹರ್ಷಿಕಾ ಪೂಣಚ್ಚ ಕನ್ನಡ ಸಿನಿಮಾ ಇದೇ..

ಹರ್ಷಿಕಾ ಪೂಣ್ಣಚ್ಚ ಕನ್ನಡದಲ್ಲಿ ಅಭಿನಯಿಸಲಿರುವ ಹೊಸ ಚಿತ್ರ 'ಅದಿತಿ'.[ವೆಂಕಟನ 'ಹುಚ್ಚಾ'ಟಕ್ಕೆ ದಿಗಿಲು ಬಿದ್ದ ಹರ್ಷಿಕಾ-ರಿಷಿಕಾ]

'ಅದಿತಿ' ಫಸ್ಟ್ ಲುಕ್

ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಅಭಿನಯದ 'ಅದಿತಿ' ಚಿತ್ರದ ಎಕ್ಸ್ ಕ್ಲೂಸಿವ್ ಫಸ್ಟ್ ಲುಕ್ ಇಂದು (ಫೆ.7) ಬಿಡುಗಡೆ ಆಗಿದೆ.

ಎ ಅಬ್ಬಣ್ಣ ನಿರ್ದೇಶನದಲ್ಲಿ 'ಅದಿತಿ'

'ಅದಿತಿ' ಚಿತ್ರವನ್ನು ಬಾಬು ಅಬ್ಬಣ್ಣ ರಚಿಸಿ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ವಿನು ಮಾನಸ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಹರ್ಷಿಕಾ ಪೂಣಚ್ಚ ಕನಸು ನನಸಾಗುತ್ತಾ?

ಇತ್ತೀಚೆಗಷ್ಟೇ ತಮಿಳು ಸಿನಿಮಾ ವೊಂದಕ್ಕೆ ಚಾಲನೆ ನೀಡಿದ್ದ ಹರ್ಷಿಕಾ, ತಾವು ತಮಿಳಿನ ನಯನತಾರಾ ರೀತಿ ಬೆಳೆಯಬೇಕೆಂದು ಹೇಳಿಕೊಂಡಿದ್ದರು. ಇವರ ಕನಸು ನನಸಾಗಲಿ.

'ಪಾನಿಪುರಿ'ಯಲ್ಲಿ ಹರ್ಷಿಕಾ

ಈ ಹಿಂದೆ ಹರ್ಷಿಕಾ 'ಮುರುಳಿ ಮೀರ್ಟ್ ಮೀರ', 'ಕ್ರೇಜಿಲೋಕ', '...ರೇ' ಸಿನಿಮಾಗಳಲ್ಲಿ ನಟಿಸಿದ್ದರು.

English summary
Harshika Poonacha Starring, Abbanna Directorial 'Aditi' movie First look Released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada