»   » ವೆಂಕಟನ 'ಹುಚ್ಚಾ'ಟಕ್ಕೆ ದಿಗಿಲು ಬಿದ್ದ ಹರ್ಷಿಕಾ-ರಿಷಿಕಾ

ವೆಂಕಟನ 'ಹುಚ್ಚಾ'ಟಕ್ಕೆ ದಿಗಿಲು ಬಿದ್ದ ಹರ್ಷಿಕಾ-ರಿಷಿಕಾ

Posted By:
Subscribe to Filmibeat Kannada

'ಹುಚ್ಚ ವೆಂಕಟ್' ಸಿನಿಮಾ ಅನ್ನುವುದಕ್ಕಿಂತ ಹೆಚ್ಚಾಗಿ ಕರ್ನಾಟಕದ ಮೂಲೆಮೂಲೆಯಲ್ಲೂ 'ವೆಂಕಟ' ಜನರ ಬಾಯಲ್ಲಿ ನಲಿದಾಡಿದ್ದು ತನ್ನ 'ಹುಚ್ಚಾಟ'ಕ್ಕೆ.

''ಲಕ್ಕಿ ಸ್ಟಾರ್ ರಮ್ಯಾ ನನ್ನ ಹೆಂಡತಿ, ಅವಳಿಗಾಗೇ ನಾನು ಈ ಸಿನಿಮಾ ಮಾಡಿರೋದು'', ಅಂತ 'ಹುಚ್ಚ ವೆಂಕಟ್' ಚಿತ್ರವನ್ನ ರಮ್ಯಾಗಾಗಿ ಅರ್ಪಿಸಿದ ವೆಂಕಟನಿಗೆ ಇಡೀ ಕರ್ನಾಟಕ 'ಹುಚ್ಚ ವೆಂಕಟ' ಅಂತಲೇ ಬಿರುದುಕೊಟ್ಟಿತ್ತು.

ಅದೆಲ್ಲಕ್ಕಿಂತ ಹೆಚ್ಚಾಗಿ ''ನಾನೇ, ಹುಚ್ಚ ವೆಂಕಟ್'' ಅಂತ ಎಲ್ಲಾ ಕಡೆ ಹೇಳ್ಕೊಂಡು ತಿರುಗಾಡಿ, ಪೊಲೀಸರ ಅತಿಥಿಯಾಗಿದ್ದ ವೆಂಕಟ, ಕಡೆಗೂ ತಮ್ಮ ದೀರ್ಘಕಾಲದ ಕನಸನ್ನ ಬೆಳ್ಳಿಪರದೆ ಮೇಲೆ ತಂದರು.

venkat

ಆದ್ರೇನು ಪ್ರಯೋಜನ, 'ಹುಚ್ಚ ವೆಂಕಟ'ನ ಪ್ರತಿಭೆಗೆ ಪ್ರೇಕ್ಷಕರು ಕೊಟ್ಟ ಪ್ರತಿಕ್ರಿಯೆಯನ್ನ ನಾವು ಬಿಡಿಸಿ ಹೇಳಬೇಕಾಗಿಲ್ಲ. ಸಿಬ್ಬಂದಿಗಳೂ ಇಲ್ಲದ ಥಿಯೇಟರ್ ನಲ್ಲಿ ಬೊಬ್ಬೆ ಹೊಡೆದುಕೊಂಡ ವೆಂಕಟನ ಪ್ರತಾಪವನ್ನ ನೀವೀಗಾಗಲೇ ಯೂಟ್ಯೂಬಲ್ಲಿ ನೋಡಿರಬಹುದು. [ಹೊಸ ಹುಚ್ಚು ವೆಂಕ್ಟನ ವಿಡಿಯೋ ಸಖತ್ ಬೊಂಬಾಟ್!]

ಸಮಯ ಸುದ್ದಿ ವಾಹಿನಿಯ ಕ್ಯಾಮರಾ ಮುಂದೆ, ರುದ್ರನರ್ತನವಾಡಿದ ಹುಚ್ಚ ವೆಂಕಟ, ಇದೀಗ ಝೀ ಕನ್ನಡ ವಾಹಿನಿಯಲ್ಲೂ ಅದನ್ನೇ ಮುಂದುವರಿಸಿದ್ದಾರೆ. ಹುಚ್ಚ ವೆಂಕಟನ ಕೋಪಕ್ಕೆ ರಾಕ್ ಸ್ಟಾರ್ ರೋಹಿತ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಗೇಮ್ ಶೋ 'ಡಿವೈಡೆಡ್' ವೇದಿಕೆ ಅಲ್ಲಾಡಿ ಹೋಗಿದೆ.

divided

ಅಲ್ಲದೇ, 'ಹುಚ್ಚ ವೆಂಕಟ'ನ ಮೇಲೆ ನಂಬಿಕೆ ಇಟ್ಟು ಆಟ ಆಡಬೇಕಿದ್ದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟಿ ರಿಷಿಕಾ ಸಿಂಗ್ ಬೆಚ್ಚಿ ಬಿದ್ದಿದ್ದಾರೆ. 'ಹುಚ್ಚ ವೆಂಕಟ್' ಚಿತ್ರ ಸೋತು ಸುಣ್ಣವಾದ ಗುಂಗಿನಿಂದ ಇನ್ನೂ ಹೊರಬರದ ವೆಂಕಟ್, ಯಾವುದೋ ಸಿಟ್ಟನ್ನ, ವೇದಿಕೆ ಸಿಕ್ಕ ನೆಪದಲ್ಲಿ ಹೊರಹಾಕಿದ್ದಾರೆ. ಅದರ ಪ್ರೋಮೋ ಇಲ್ಲಿದೆ ನೋಡಿ....

'ವೆಂಕಟ'ನ ಈ ವರ್ತನೆ ಇಂದ ಹರ್ಷಿಕಾ ಮತ್ತು ರಿಷಿಕಾ...ಪಾಪ....ಅಳುವುದೊಂದು ಬಾಕಿ. ಈ ಬಗ್ಗೆ ಫೇಸ್ ಬುಕ್ ನಲ್ಲಿ ''ನಾನು ಭಾಗವಹಿಸಿರುವ ಅತ್ಯಂತ ಭಯಾನಕ ಶೋ'' ಅಂತ ಹರ್ಷಿಕಾ ಪೂಣಚ್ಚ ಸ್ಟೇಟಸ್ ಬೇರೆ ಹಾಕಿಕೊಂಡಿದ್ದಾರೆ. [ರಿಯಾಲಿಟಿ ಶೋ ನಿರೂಪಕರಾಗಿ ಆರ್ ಜೆ ರೋಹಿತ್]

ಪ್ರೋಮೋದಲ್ಲೇ ಬೆವತು ನೀರಾಗಿರುವ ಈ ನಟೀಮಣಿಯರು, ವೆಂಕಟನ ಜೊತೆ ಸೇರಿ ಲಕ್ಷ ಲಕ್ಷ ಹೇಗೆ ಗೆಲ್ಲುತ್ತಾರೆ ಅನ್ನುವುದು ಇವತ್ತಿನ ಸಂಚಿಕೆಯಲ್ಲಿ ಅನಾವರಣವಾಗಲಿದೆ.

English summary
Huccha Venkat is in news again. Huccha Venkat along with Harshika Poonacha and Rishika Singh have taken part in Zee Kannada's Divided Reality show, where Harshika and Rishika gets frightened looking at Venkat's mad act.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada