For Quick Alerts
  ALLOW NOTIFICATIONS  
  For Daily Alerts

  ಹಾಸ್ಯ ಚಕ್ರವರ್ತಿ ನರಸಿಂಹರಾಜು ಜನ್ಮದಿನಾಚರಣೆ

  By Rajendra
  |

  ಕನ್ನಡ ಚಿತ್ರರಂಗದಲ್ಲಿ ಹಾಸ್ಯಕ್ಕೆ ನರಸಿಂಹರಾಜು ಒಬ್ಬರೇ ಚಕ್ರವರ್ತಿ ಎಂಬ ಮಾತನ್ನು ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಆರ್. ಬನ್ನೂರುಮಠ ಒಮ್ಮೆ ಹೇಳಿದ್ದರು. ಅವರ ಮಾತಿನಲ್ಲಿ ನೂರಕ್ಕೆ ನೂರರಷ್ಟು ಸತ್ಯ ಇದೆ. ನರಸಿಂಹರಾಜು ಅವರಂತಹ ಹಾಸ್ಯ ರತ್ನ ಮತ್ತೆ ಕನ್ನಡದಲ್ಲಿ ಬರಲಿಲ್ಲ.

  ಇಂದು ಅವರು ಬೌತಿಕವಾಗಿ ಚಿತ್ರರಸಿಕರ ಜೊತೆಗಿಲ್ಲದಿದ್ದರೂ ತಮ್ಮ ಚಿತ್ರಗಳ ಮೂಲಕ ನಿತ್ಯ ನಗಿಸುತ್ತಿದ್ದಾರೆ. ಚಿತ್ರಕ್ಕೆ ನಾಯಕ, ನಾಯಕಿಯಂತೆ ಹಾಸ್ಯನಟನ ಪಾತ್ರವೂ ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟವರು ನರಸಿಂಹರಾಜು.

  ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ 90ನೇ ಜನ್ಮ ದಿನಾಚರಣೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಹಮ್ಮಿಕೊಂಡಿದೆ. ಒಟ್ಟು ಎರಡು ದಿನಗಳ ಕಾಲ ಅಕ್ಟೋಬರ್ 5 ಹಾಗೂ 6ರಂದು ಪ್ರಿಯದರ್ಶಿನಿ ಚಿತ್ರಮಂದಿರ ಬಾದಾಮಿ ಹೌಸ್ ನಲ್ಲಿ ನಡೆಯಲಿದೆ.

  ಕಾರ್ಯಕ್ರಮವನ್ನು ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರು ಉದ್ಘಾಟಿಸಲಿದ್ದಾರೆ. ಉಪಸ್ಥಿತಿ ಹಿರಿಯ ಕಲಾವಿದೆ ಸುಧಾ ನರಸಿಂಹರಾಜು. ಇದೇ ಸಂದರ್ಭದಲ್ಲಿ ನರಸಿಂಹರಾಜು ಅವರ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

  ಇದೇ ಸಂದರ್ಭದಲ್ಲಿ ಹಾಸ್ಯ ಚಕ್ರವರ್ತಿ ಸಾಕ್ಷ್ಯಚಿತ್ರ ಪ್ರದರ್ಶನ, ಅಕ್ಟೋಬರ್ 5ರಂದು ಮಧ್ಯಾಹ್ನ 2 ಗಂಟೆಗೆ ಮಕ್ಕಳ ರಾಜ್ಯ ಚಲನಚಿತ್ರ ಪ್ರದರ್ಶನ ಇರುತ್ತದೆ. ಅಕ್ಟೋಬರ್ 6ರಂದು ಬೆಳಗ್ಗೆ 11ಕ್ಕೆ ವಿಚಾರ ಸಂಕಿರಣದಲ್ಲಿ 'ಕನ್ನಡ ರಂಗಭೂಮಿಗೆ ನರಸಿಂಹರಾಜು' ಕೊಡುಗೆ ಕುರಿತು ಗುಡಿಹಳ್ಳಿ ನಾಗರಾಜ್ ಮಾತನಾಡಲಿದ್ದಾರೆ.

  ಚಲನಚಿತ್ರರಂಗದಲ್ಲಿ ನರಸಿಂಹರಾಜು ಕುರಿತ ವಿಚಾರ ಸಂಕಿರಣವನ್ನು ಡಾ.ಕೆ.ಪುಟ್ಟಸ್ವಾಮಿ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ನರಸಿಂಹರಾಜು ಕುರಿತ ಕೃತಿಯೂ ಬಿಡುಗಡೆ ಮಾಡಲಾಗುತ್ತದೆ. ಡಾ. ರಾಜ್ ಜೊತೆಗೆ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನರಸಿಂಹರಾಜು ನಂತರವೂ ರಂಗ ಭೂಮಿಯನ್ನು ಕಡೆಗಣಿಸಲಿಲ್ಲ. (ಒನ್ಇಂಡಿಯಾ ಕನ್ನಡ)

  English summary
  Hasya chakravarthi T. R. Narasimharaju, 90th birth anniversary celebrating at Karnataka Chalanachitar academy on 5th and 6th October 2013. The programme inaugurates senior actor, director and producer Dwarakish.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X