For Quick Alerts
  ALLOW NOTIFICATIONS  
  For Daily Alerts

  ಫೀನಿಕ್ಸ್ ನಂತೆ ಎದ್ದುಬಂದ ಶಿವಣ್ಣನಿಗೆ ಹ್ಯಾಪಿ ಬರ್ತ್ ಡೇ

  By ಜೀವನರಸಿಕ
  |

  ಸ್ಯಾಂಡಲ್ ವುಡ್ ಕಿಂಗ್ ಹುಟ್ಟುಹಬ್ಬ (ಜು.12) ಈ ವರ್ಷ ರಾಜ್ಯಾದ್ಯಂತ ಅಭಿಮಾನಿಗಳಲ್ಲಿ ಹಬ್ಬದಂತೆ ಆಚರಣೆಯಾಗಲಿದೆ. ಇದು ಹ್ಯಾಟ್ರಿಕ್ ಹೀರೋಗೆ 53ನೇ ಹುಟ್ಟುಹಬ್ಬದ ಸಂಭ್ರಮ. 2013ರಿಂದ ಶಿವರಾಜ್ ಕುಮಾರ್ ಅದೃಷ್ಟ ಖುಲಾಯಿಸಿದೆ.

  'ಭಜರಂಗಿ' ಸಿನಿಮಾ ಗೆದ್ದಿದ್ದರಿಂದ 53 ವರ್ಷದ ಶಿವಣ್ಣ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ಹೀರೋ ಆಗಿದ್ದಾರೆ. ನಾಲ್ಕೈದು ಸಿನಿಮಾ ಸೋತಿದ್ದ ಶಿವಣ್ಣನನ್ನ ಭಜರಂಗಿ ಸಿನಿಮಾ ಫೀನಿಕ್ಸ್ ನಂತೆ ಮೇಲೆದ್ದು ಬರೋ ಹಾಗೆ ಮಾಡಿದೆ. [ಹ್ಯಾಟ್ರಿಕ್ ಹೀರೋ ಶಿವಣ್ಣನಿಗೊಂದು ಸಮಸ್ಯೆಯಿದೆ]

  ನೂರಾರು ಸಿನಿಮಾ ಮಾಡಿರೋ ಶಿವರಾಜ್ ಕುಮಾರ್ ಗೆ ಒಂದು ಸಿನಿಮಾ ಮಾಡ್ಬೇಕು ಅಂತ ನಿರ್ಮಾಪಕರು ಕಾಯ್ತಿದ್ದಾರೆ. ಇನ್ನು ಅದೆಷ್ಟೋ ನಿರ್ದೇಶಕರು ಕೂಡ ಶಿವಣ್ಣನನ್ನ ಒಂದು ಸಾರಿ ಡೈರೆಕ್ಟ್ ಮಾಡ್ಬೇಕು ಅನ್ನೋ ಆಸೆ ಹೊತ್ತಿದ್ದಾರೆ.

  ಅಷ್ಟೇ ಯಾಕೆ ಹೊಸ ಹೀರೋಯಿನ್ ಗಳಿಗೂ ಶಿವರಾಜ್ ಕುಮಾರ್ ಒಂದ್ಸಾರಿ ಜೋಡಿಯಾಗ್ಬೇಕು ಅನ್ನೋ ಆಸೆ. ಯಾಕಂದ್ರೆ ಸೆಂಚುರಿಸ್ಟಾರ್ ಆದ್ರೂ ಕೂಡ ಈಗಲೂ 22ರ ಯಂಗ್ ಹೀರೋಗಳನ್ನೂ ನಾಚಿಸೋ ಹಾಗೆ ಫೈಟ್ಸ್, ಡಾನ್ಸ್ ಮಾಡ್ತಾರೆ ಶಿವಣ್ಣ. ಈ ಕರುನಾಡ ಚಕ್ರವರ್ತಿಯ ಹುಟ್ಟುಹಬ್ಬ ಈ ವರ್ಷ ಭರ್ಜರಿಯಾಗಿರುತ್ತೆ. ಶಿವಣ್ಣನ ಬರ್ತಡೇಯಲ್ಲಿ ಏನು ವಿಶೇಷಗಳಿರ್ತವೆ ಅನ್ನೋದನ್ನ ನೋಡೋಣ ಬನ್ನಿ.

  ಕೈಯ್ಯಲ್ಲಿವೆ 9 ಸಿನಿಮಾಗಳು

  ಕೈಯ್ಯಲ್ಲಿವೆ 9 ಸಿನಿಮಾಗಳು

  2009ರಿಂದೀಚೆಗೆ ದೊಡ್ಡ ಗೆಲುವು ಕಾಣದ ಶಿವರಾಜ್ ಕುಮಾರ್ ಈಗ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಈಗ ಶಿವಣ್ಣ ಕೈಯ್ಯಲ್ಲಿರೋ ಸಿನಿಮಾಗಳು ಭರ್ಜರಿ ಒಂಬತ್ತು ಅಂದ್ರೆ ಸಕ್ಸಸ್ ಸಾಥ್ ಜೋರಾಗೇ ಇದೆ.

  ಡಾ. ಶಿವರಾಜ್ ಕುಮಾರ್ ಆಗಿದ್ದಾರೆ ಶಿವಣ್ಣ

  ಡಾ. ಶಿವರಾಜ್ ಕುಮಾರ್ ಆಗಿದ್ದಾರೆ ಶಿವಣ್ಣ

  ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅವರಿಗೆ 2013-14 ತುಂಬಾನೇ ಲಕ್ಕಿ ಈಯರ್. ಶಿವಣ್ಣ ಈಗ ಡಾ. ಶಿವರಾಜ್ ಕುಮಾರ್ ಆಗಿದ್ದಾರೆ. ಹಂಪಿಯ ವಿಜಯನಗರ ವಿ ವಿ ಶಿವಣ್ಣನಿಗೆ ಗೌರವ ಡಾಕ್ಟರೇಟ್ ನೀಡಿದೆ.

   ಶಿವಲಿಂಗ ಫಸ್ಟ್ ಪೋಸ್ಟರ್

  ಶಿವಲಿಂಗ ಫಸ್ಟ್ ಪೋಸ್ಟರ್

  ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ 'ಶಿವಲಿಂಗ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರೋ ಫಸ್ಟ್ ಪೋಸ್ಟರ್ ಹೊರಬರ್ತಿದೆ. ಮತ್ತೊಮ್ಮೆ ಇಲ್ಲಿ ಪವರ್ಫುಲ್ ಶಿವಣ್ಣನನ್ನ ನೋಡಬಹುದು. ನಿರ್ದೇಶಕ ಪಿ ವಾಸು ಸಿನಿಮಾ ಅಂದಮೇಲೆ ಅಲ್ಲಿ ಒಂದು ಶಕ್ತಿ ಇದ್ದೇ ಇರುತ್ತೆ. ಅದಕ್ಕೆ ಶಿವಣ್ಣ ಸೇರಿದ್ರೆ ಸೂಪರ್ ಪವರ್.

  ಖದರ್ಫುಲ್ ಹ್ಯಾಟ್ರಿಕ್ ಹೀರೋ

  ಖದರ್ಫುಲ್ ಹ್ಯಾಟ್ರಿಕ್ ಹೀರೋ

  ಶಿವಣ್ಣನ ಟಿಪಿಕಲ್ ಫೋಟೋ ಒಂದನ್ನ ಇಟ್ಟುಕೊಂಡು ಖದರ್ ಅನ್ನೋ ಸಿನಿಮಾ ಫಸ್ಟ್ ಪೋಸ್ಟರ್ ರಿಲೀಸ್ ಮಾಡ್ತಿದೆ. ಶಿವಣ್ಣನನ್ನ ಖದರ್ ಚಿತ್ರದಲ್ಲಿ ಹೇಗೆ ತೋರಿಸ್ತಾರೋ ಗೊತ್ತಿಲ್ಲ. ಆದ್ರೆ ಈ ಎರಡೂ ಚಿತ್ರದ ನಿರ್ಮಾಪಕರು ಮಾತ್ರ ಈ ಹಿಂದೆ 'ಗೋವಿಂದಾಯ ನಮಃ', 'ಶ್ರಾವಣಿ ಸುಬ್ರಹ್ಮಣ್ಯ' ಸಿನಿಮಾ ಮಾಡಿದ್ದ ಸುರೇಶ್.

  ಸಾ ರಾ ಗೋವಿಂದು ಅವರಿಂದ ಸನ್ಮಾನ

  ಸಾ ರಾ ಗೋವಿಂದು ಅವರಿಂದ ಸನ್ಮಾನ

  ಡಾ. ರಾಜ್ ಕುಮಾರ್ ಬಲಗೈಯ್ಯಂತಿದ್ದ ಹಿರಿಯ ನಿರ್ಮಾಪಕ ಸಾರಾ ಗೋವಿಂದು ಕನ್ನಡಪರ ಸಂಘಟನೆಗಳ ಪರವಾಗಿ ಡಾಕ್ಟರೇಟ್ ಸಿಕ್ಕ ಸಂಭ್ರಮಕ್ಕೆ ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣನಿಗೆ ಇವತ್ತು ಸನ್ಮಾನ ಮಾಡಲಿದ್ದಾರೆ.

  ಖೋಡೇಸ್ ಸರ್ಕಲ್ ನಲ್ಲಿ ಆರ್ಯನ್ ಜೋಷ್

  ಖೋಡೇಸ್ ಸರ್ಕಲ್ ನಲ್ಲಿ ಆರ್ಯನ್ ಜೋಷ್

  ನಗರದ ಖೋಡೇಸ್ ಸರ್ಕಲ್ ನಲ್ಲಿ ಶಿವಣ್ಣ ಅಭಿಮಾನಿಗಳು ಮತ್ತು ಚಿತ್ರತಂಡ ಸದ್ಯ ತೆರೆಗೆ ಬರಲಿರೋ ಶಿವರಾಜ್ ಕುಮಾರ್ ಅಭಿನಯದ 'ಆರ್ಯನ್' ಚಿತ್ರದ ಬೃಹತ್ ವಿನೈಲ್ ರೆಡಿಮಾಡಿದ್ದಾರೆ. ಈ ಮೂಲಕ ಕಿಂಗ್ ಗೆ ಶುಭಹಾರೈಸ್ತಿದ್ದಾರೆ.

  ಮನೆಯಲ್ಲಿ ಪೂಜೆ ಸಂಭ್ರಮ, ಅನ್ನದಾನ

  ಮನೆಯಲ್ಲಿ ಪೂಜೆ ಸಂಭ್ರಮ, ಅನ್ನದಾನ

  ಶಿವಣ್ಣ ಮನೆಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಅದು ಹಬ್ಬದಂತೆ ಆಚರಣೆಯಾಗುತ್ತೆ. ಮನೆಗೆ ಬಂದವರಿಗೆ ಸತ್ಕಾರ ಮಾಡೋದ್ರಲ್ಲಿ ಅಣ್ಣಾವ್ರ ಕುಟುಂಬ ಎತ್ತಿದಕೈ. ಶಿವಣ್ಣ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ನಾಗವಾರದ ಶಿವಣ್ಣ ಮನೆಯ ಕಡೆ ಹರಿದು ಬರಲಿದ್ದಾರೆ.

  ಬೆಳ್ಳಿ ಟೀಂ ಶಿವಣ್ಣ ಜೊತೆ

  ಬೆಳ್ಳಿ ಟೀಂ ಶಿವಣ್ಣ ಜೊತೆ

  ಈ ಬಾರಿ ಶಿವಣ್ಣ ಜೊತೆ ಮೂರ್ನಾಲ್ಕು ಸಿನಿಮಾ ತಂಡಗಳಿರ್ತವೆ, ಸದ್ಯ ಶೂಟಿಂಗ್ ನಲ್ಲಿರೋ 'ಬೆಳ್ಳಿ' ಟೀಂ ಶಿವಣ್ಣನ ಜೊತೆ ಸದಾ ಸಾಥ್ ಕೊಡಲಿದೆ. ಶಿಷ್ಯ ದೀಪಕ್, ಒರಟ ಪ್ರಶಾಂತ್, ವಿನೋದ್ ರಾಜ್ ಹುಟ್ಟುಹಬ್ಬದಲ್ಲಿ ಶಿವಣ್ಣನಿಗೆ ಸಾಥ್ ಕೊಡಲಿದ್ದಾರೆ. [ಬೆಳ್ಳಿ ಚಿತ್ರದ ವಿಶೇಷಗಳು]

  ಮನಮೋಹಕ ಶಿವಣ್ಣ

  ಮನಮೋಹಕ ಶಿವಣ್ಣ

  ಶಿವಣ್ಣ ಹುಟ್ಟುಹಬ್ಬಕ್ಕೆ ಸಿಂಪಲ್ ಸುನಿ ನಿರ್ದೇನದ 'ಮನಮೋಹಕ' ಸಿನಿಮಾ ಮುಹೂರ್ತ ಮಾಡೋ ಯೋಚನೆಯಲ್ಲಿದೆ. ಎಲ್ಲವೂ ಸರಿಯಾಗಿ ತಯಾರಿಯಾದ್ರೆ ಶಿವಣ್ಣ ಮನಮೋಹಕವಾಗಿ ಕಂಗೊಳಿಸೋದ್ರಲ್ಲಿ ಅನುಮಾನವಿಲ್ಲ.

  ಬಂಗಾರದ ವಂಶದ ಕಬೀರ

  ಬಂಗಾರದ ವಂಶದ ಕಬೀರ

  ಸ್ವತಃ ಶಿವಣ್ಣ ಅಭಿನಯಿಸಬೇಕು ಅಂದುಕೊಂಡಿರೋ ಭಕ್ತಿಪ್ರಧಾನ ಚಿತ್ರ ಕಬೀರ. ಈ ಸಿನಿಮಾಗೂ ಮೊದಲೇ ಓಂ ಸಾಯಿಪ್ರಕಾಶ್ ನಿರ್ದೇಶನದ ಶಿವಣ್ಣನಿಗೆ ರಾಧಿಕಾ ತಂಗಿಯಾಗಿ ಅಭಿನಯಿಸ್ತಾ ಇರೋ 'ಬಂಗಾರದ ವಂಶ' ಚಿತ್ರತಂಡ ಕೂಡ ಶೂಟಿಂಗ್ ಶುರುಮಾಡೋ ತವಕದಲ್ಲಿದೆ.

  ಶಿವಣ್ಣ ನೂರ್ಕಾಲ ಬಾಳಲಿ

  ಶಿವಣ್ಣ ನೂರ್ಕಾಲ ಬಾಳಲಿ

  ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಚಿತ್ರರಂಗವೇ ಸಂಭ್ರಮಿಸುತ್ತೆ. ಡಾಕ್ಟರೇಟ್ ಪಡೆದ ಈ ಸಾಧಕನಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

  English summary
  This time Hat Trick Hero, Sandalwood King Dr.Shivrajkumar 53rd birthday (12th July) will be celebrated in different manner. At present he is engaged in nine different projects. Advanced happy birthday Shivanna. Here is a very special birthday boy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X