Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಸಾಹಸಕ್ಕೆ ಕೈ ಹಾಕಿದ ಶಿವಣ್ಣನ ಮಗಳು ನಿವೇದಿತಾ

ನಟ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಹೊಸ ಪ್ರಯತ್ನ ಮಾಡುತ್ತಿದ್ದಾರೆ. ಕನ್ನಡದಲ್ಲಿ ಈಗ ವೆಬ್ ಸೀರಿಸ್ ಗಳು ಹೆಚ್ಚಾಗಿದ್ದು, ನಿವೇದಿತಾ ಕೂಡ ಹೊಸ ವೆಬ್ ಸೀರಿಸ್ ಶುರು ಮಾಡಿದ್ದಾರೆ.
ಈ ಹಿಂದೆಯೇ ಈ ವೆಬ್ ಸೀರಿಸ್ ಗೆ 'ಹೇಟ್ ಯು ರೋಮಿಯೋ' ಎಂಬ ಹೆಸರು ಫಿಕ್ಸ್ ಆಗಿತ್ತು. ಇದೀಗ ವೆಬ್ ಸೀರಿಸ್ ನ ಕೆಲ ಪೋಸ್ಟರ್ ಗಳು ಬಿಡುಗಡೆಯಾಗಿದೆ. ಜೊತೆಗೆ ಈ ವೆಬ್ ಸೀರಿಸ್ ನಟಿಸುವ ಕಲಾವಿದ ಯಾರು ಎಂಬ ವಿಷಯ ಕೂಡ ತಿಳಿದಿದೆ.
ವೆಬ್ ಸೀರಿಸ್ ಶುರು ಮಾಡಿದ ಶಿವರಾಜ್ ಕುಮಾರ್
ಅಂದಹಾಗೆ, ಶಿವರಾಜ್ ಕುಮಾರ್ ಅವರ 'ಶ್ರೀಮುತ್ತು ಸಿನಿ ಸರ್ವಿಸ್' ಬ್ಯಾನರ್ ನಲ್ಲಿ ಬರುತ್ತಿರುವ 'ಹೇಟ್ ಯು ರೋಮಿಯೋ' ವೆಬ್ ಸೀರಿಸ್ ನ ಕೆಲವು ಹೊಸ ವಿಚಾರಗಳು ವಿವರ ಮುಂದಿದೆ ಓದಿ...

ಅರವಿಂದ್ ಐಯ್ಯರ್ ನಟನೆ
ನಟ ಅರವಿಂದ್ ಐಯ್ಯರ್ 'ಹೇಟ್ ಯು ರೋಮಿಯೋ' ವೆಬ್ ಸೀರೀಸ್ ನಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದಾರೆ. 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಗಮನ ಸೆಳೆದ ಈ ನಟ ಸದ್ಯಕ್ಕೆ 'ಭೀಮಸೇನ ನಳಮಹರಾಜ' ಸಿನಿಮಾದ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಇದೀಗ ಶಿವಣ್ಣನ ಬ್ಯಾನರ್ ನಲ್ಲಿ ನಟಿಸುವ ಅವಕಾಶ ಅರವಿಂದ್ ಪಾಲಾಗಿದೆ.

ಹೊಸ ಪೋಸ್ಟರ್ ಗಳು ಬಿಡುಗಡೆ
'ಹೇಟ್ ಯು ರೋಮಿಯೋ' ಸಿನಿಮಾದ ಫಸ್ಟ್ ಲುಕ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಇದೀಗ ಸಿನಿಮಾದ ಕೆಲವು ಹೊಸ ಹೊಸ ಪೋಸ್ಟರ್ ಗಳು ಹೊರಬಂದಿದೆ. ಸಖತ್ ಸ್ಟೈಲಿಶ್ ಆಗಿ ಅರವಿಂದ್ ಐಯ್ಯರ್ ಕಾಣಿಸಿಕೊಂಡಿದ್ದು, ಪೋಸ್ಟರ್ ಆಕರ್ಷಕವಾಗಿದೆ.

ನಿರ್ಮಾಪಕಿಯಾದ ನಿವೇದಿತ
ನಿವೇದಿತ ಶಿವರಾಜ್ ಕುಮಾರ್ ರವರ ನೇತೃತ್ವದ ಶ್ರೀ ಮುತ್ತು ಸಿನಿ ಸರ್ವಿಸ್ ಹಾಗೂ ಸಕ್ಕತ್ ಸ್ಟುಡಿಯೊ ಸಹ ನಿರ್ಮಾಣದಲ್ಲಿ 'ಹೇಟ್ ಯು ರೋಮಿಯೋ' ನಿರ್ಮಾಣ ಆಗುತ್ತಿದೆ. ಈ ವೆಬ್ ಸೀರಿಸ್ ಚಿತ್ರೀಕರಣ ಇದೀಗ ಪ್ರಾರಂಭಿಕ ಹಂತದಲ್ಲಿದೆ.

ನಾಯಕ ನಟಿ ಯಾರು?
'ಹೇಟ್ ಯು ರೋಮಿಯೋ' ವೆಬ್ ಸೀರಿಸ್ ನಲ್ಲಿ ನಟಿಸುವ ನಾಯಕಿ ಯಾರು ಎಂಬುದನ್ನು ಸದ್ಯದವರೆಗೆ ಈ ಟೀಂ ರಿವೀಲ್ ಮಾಡಿಲ್ಲ.
'ಭಾರತದಲ್ಲೇ ಆನ್ ಲೈನ್ ನಲ್ಲಿ ಹೆಸರುವಾಸಿಯಾಗಿರುವ ಕನ್ನಡತಿ' ಎಂದು ಮಾತ್ರ ಕ್ಲೂ ನೀಡಿದ್ದು, ಶೀಘ್ರದಲ್ಲಿ ಅವರ ಹೆಸರನ್ನು ಅನೌನ್ಸ್ ಮಾಡಲಿದೆಯಂತೆ.

ವಿದೇಶದಲ್ಲಿ ಚಿತ್ರೀಕರಣ
ಶಿವರಾಜ್ ಕುಮಾರ್ ಬ್ಯಾನರ್ ನಲ್ಲಿ ಬರುತ್ತಿರುವ ಈ ವೆಬ್ ಸೀರಿಸ್ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ವೆಬ್ ಸೀರೀಸ್ ಆಗಿದೆಯಂತೆ. ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ಇದರ ಚಿತ್ರೀಕರಣ ಆಗುತ್ತಿದೆಯಂತೆ. ಇನ್ನು ಈ ಸೀರಿಸ್ ನಲ್ಲಿ 30 ನಿಮಿಷದ 7 ಸಂಚಿಕೆಗಳಿರುತ್ತವೆ.

ಸಂತಸದಲ್ಲಿ ಅರವಿಂದ್
ತಮ್ಮ ನೂತನ ವೆಬ್ ಸೀರಿಸ್ ಬಗ್ಗೆ ಅರವಿಂದ್ ಅಯ್ಯರ್ ಸಂತಸ ಹಂಚಿಕೊಂಡಿದ್ದಾರೆ. ಲಂಡನ್ ನಲ್ಲಿ ಇಂಜಿನಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಆ ಸಮಯದಲ್ಲಿ ಅಲ್ಲೇ ಅಭಿನಯ ತರಬೇತಿ ಪಡೆದುಕೊಂಡಿದ್ದು, ಬೆಂಗಳೂರಿನಲ್ಲಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವುಗಳ ನಂತರ 'ಕಿರಿಕ್ ಪಾರ್ಟಿ' ಸಿನಿಮಾದ ಸಿನಿಮಾ ಜರ್ನಿ ಶುರು ಮಾಡಿದರು.

ಶ್ರೀ ಮುತ್ತು ಸಿನಿ ಸರ್ವಿಸ್ ಹಾಗೂ ಸಕ್ಕತ್ ಸ್ಟುಡಿಯೊ
ಈಗಾಗಲೇ, ಶಿವರಾಜ್ ಕುಮಾರ್ ರವರ ಸಂಸ್ಥೆಯಿಂದ 'ಮಾನಸ ಸರೊವರ' ಧಾರವಾಹಿ ಮೂಡಿಬರುತ್ತಿದ್ದು, ಈ ಸಂಸ್ಥೆಯ ಮೊದಲ ವೆಬ್ ಸೀರೀಸ್ ಇದಾಗಿದೆ. ಕನ್ನಡದಲ್ಲಿ ಒರಿಜಿನಲ್ ಕಂಟೆಂಟ್ ಗೆ ಹೆಸರಾಗಿರುವ ಸಕ್ಕತ್ ಸ್ಟುಡಿಯೊ ಈಗಾಗಲೇ 'ಲೂಸ್ ಕನೆಕ್ಷನ್', 'ಡಾ ಪಾಲ್' ವೆಬ್ ಸೀರಿಸ್ ಗಳನ್ನು ಮಾಡಿದೆ. ಹಸೀನ್ ಖಾನ್ ಹಾಗು ಇಶಾಮ್ ಖಾನ್ 'ಹೇಟ್ ಯು ರೋಮಿಯೋ' ಈ ವೆಬ್ ನಿರ್ದೇಶಕರಾಗಿದ್ದಾರೆ.