»   » ಮುತ್ತಣ್ಣನ ಮಗಳ ಮದುವೆಗೆ ಕುಮಾರನಿಗಿಲ್ಲ ಆಹ್ವಾನ

ಮುತ್ತಣ್ಣನ ಮಗಳ ಮದುವೆಗೆ ಕುಮಾರನಿಗಿಲ್ಲ ಆಹ್ವಾನ

Posted By: ಸೋನು ಗೌಡ
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೇಷ್ಠ ಪುತ್ರಿ ನಿರುಪಮಾ ಅವರ ಮದುವೆ ಆಗಸ್ಟ್ 31 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬಹಳ ವೈಭವದಿಂದ ಜರುಗಿತ್ತು ಎಂದು ನಿಮಗೆಲ್ಲಾ ತಿಳಿದೇ ಇದೆ.

ಇಷ್ಟೊಂದು ಅದ್ಧೂರಿಯಾಗಿ ನೆರವೇರಿದ ಡಾ.ನಿರುಪಮಾ ಹಾಗು ಡಾ.ದಿಲೀಪ್ ಮದುವೆಯಲ್ಲಿ ಇಡೀ ಚಿತ್ರರಂಗದ ಗಣ್ಯರು ಸೇರಿದಂತೆ ರಾಜಕೀಯ ನಾಯಕರುಗಳು ಕೂಡ ಹಾಜರಿದ್ದು, ನೂತನ ವಧುವರರಿಗೆ ಆಶೀರ್ವದಿಸಿದ್ದರು.[ಮದುವೆಯಲ್ಲಿ ಜನ ಜಾತ್ರೆ : ಶಿವಣ್ಣ ಕುಟುಂಬಕ್ಕೆ ಸಿಗದ ಊಟ.!]

Shiva rajkumar

ಇದೀಗ ವಿಷ್ಯಾ ಏನಪ್ಪಾ ಅಂದ್ರೆ ಆಮಂತ್ರಣ ಪತ್ರಿಕೆ ಕೊಟ್ಟವರಲ್ಲಿ ಕೆಲವರು ಬಂದಿದ್ದರು, ಕೆಲವರು ಬಂದಿರಲಿಲ್ಲ. ಆದ್ರೆ ಧಾರೆ ಎರೆದು ಕೊಡಬೇಕಿದ್ದ ಸೋದರ ಮಾವನೇ ಮದುವೆಗೆ ಬಂದಿರಲಿಲ್ಲ.[ಶಿವಣ್ಣ ಮಗಳ ಮದುವೆಗೆ 'ಇವರೆಲ್ಲಾ' ಬರ್ಲಿಲ್ಲ, ಯಾಕೆ?]

ಹೌದು ಮದುಮಗಳು ನಿರುಪಮಾ ಅವರ ಸೋದರ ಮಾವನಾದ ಕುಮಾರ್ ಬಂಗಾರಪ್ಪನವರಿಗೆ ಈ ಅದ್ದೂರಿ ಮದುವೆಗೆ ಆಹ್ವಾನವಿರಲಿಲ್ಲವಂತೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗೀತಾ ಶಿವರಾಜ್ ಕುಮಾರ್ ಅವರ ಸೋದರ ಕುಮಾರ್ ಬಂಗಾರಪ್ಪ "ನನಗೆ ಸೋದರ ಸೊಸೆಯ ಮದುವೆಯ ಆಮಂತ್ರಣ ಪತ್ರಿಕೆ ನೀಡಲಿಲ್ಲ, ಆದರೆ ಆಮಂತ್ರಣ ಪತ್ರಿಕೆ ನೀಡಲಾಗಿದೆ ಎಂದು ಹೇಳಿರುವ ಮಾಹಿತಿ ನಿಜವಲ್ಲ' ಎಂದು ನುಡಿದಿದ್ದಾರೆ.[ಚಿತ್ರಗಳು: ದೊಡ್ಮನೆ ಮೊಮ್ಮಗಳ ಮದುವೆಯ ಅದ್ಧೂರಿ ಕ್ಷಣಗಳು]

Shiva rajkumar

ಇಲ್ಲಿಯವರೆಗೂ ಕಂಡಿರದಂತಹ ಅದ್ದೂರಿ ಮದುವೆಗೆ ಇಡೀ ಚಿತ್ರರಂಗ ಹಾಗೂ ಶಿವಣ್ಣ ಅವರ ಅಭಿಮಾನಿಗಳು ಸಾಕ್ಷಿಯಾಗಿದ್ದರು. ಆದರೆ ವಿಷಾದದ ಸಂಗತಿ ಏನಪ್ಪಾ ಅಂದ್ರೆ ಮದುವೆಗೆ ಆಗಮಿಸಬೇಕಿದ್ದ ಸೋದರ ಮಾವನೇ ಆಗಮಿಸದೇ ಇದ್ದದ್ದರಿಂದ ಮದುವೆ ಸಂಭ್ರಮದಲ್ಲಿ ಕುಮಾರ್ ಬಂಗಾರಪ್ಪನವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

    English summary
    Hatrick Hero Shivanna not invited Kumar Bangarappa to his daughter Marriage. Kannada Actor Shivarajkumar Daughter Dr.Nirupama has tied knot with Dr.Dileep on (August 31st) in Palace Grounds, Bengaluru.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada