»   » ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಶಿವಣ್ಣ ನಟಿಸ್ತಾರಾ?

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಶಿವಣ್ಣ ನಟಿಸ್ತಾರಾ?

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಮೇಶ್ ಅರವಿಂದ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ತೆಲುಗು ರೀಮೇಕ್ 'ಗಂಡು ಎಂದರೆ ಗಂಡು' ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭವಾಗಿದೆ ಅನ್ನೋದು ನಿಮಗೆ ಗೊತ್ತಿರೋ ವಿಷಯ.

ಇದೀಗ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ನಿನ್ನೆ (ಮಾರ್ಚ್ 2) ಬುಧವಾರದಂದು ಶೂಟಿಂಗ್ ಸ್ಪಾಟ್ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಜೊತೆಗೆ ದಿಢೀರ್ ಅಂತ ಭೇಟಿ ಕೊಟ್ಟಿದ್ದರು.['ಗಂಡು ಎಂದರೆ ಗಂಡು' ಶೂಟಿಂಗ್ ಶುರು ಗುರು!]

Hatrick Hero Visits The Sets Of Ganesh's 'Gandu Endare Gandu'

ಶಿವಣ್ಣ ಅವರ ದಿಢೀರ್ ಭೇಟಿ ನೋಡಿ ಫುಲ್ ಖುಷ್ ಆದ 'ಗಂಡು ಎಂದರೆ ಗಂಡು' ಚಿತ್ರತಂಡ ಶಿವಣ್ಣ ಅವರ ಜೊತೆ ಭರ್ಜರಿಯಾಗಿ ಫೊಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

Hatrick Hero Visits The Sets Of Ganesh's 'Gandu Endare Gandu'

ಶೂಟಿಂಗ್ ಸ್ಪಾಟ್ ನಲ್ಲಿದ್ದ ನಟ ದೇವರಾಜ್, ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಕಮ್ ನಟ ರಮೇಶ್ ಅರವಿಂದ್ ಮತ್ತು ನಟ ರವಿಶಂಕರ್ ಅವರು ಶಿವಣ್ಣ ಅವರ ಜೊತೆ ಪೋಸ್ ಕೊಟ್ಟರು. ಕೊಂಚ ಹೊತ್ತು ಸೆಟ್ ನಲ್ಲಿ ಚಿತ್ರತಂಡದೊಂದಿಗೆ ಜಾಲಿಯಾಗಿ ಚಿತ್ರದ ಬಗ್ಗೆ ಶಿವಣ್ಣ ಅವರು ಮಾತಾಡಿದರು.[ರಮೇಶ್-ಗಣೇಶ್ ಕಾಂಬಿನೇಷನ್ ನ ಚಿತ್ರದ ಹೆಸರೇನು ಗೊತ್ತಾ?]

Hatrick Hero Visits The Sets Of Ganesh's 'Gandu Endare Gandu'

ಇನ್ನು ಸೆಂಚುರಿ ಸ್ಟಾರ್ ಶಿವಣ್ಣ ಅವರ ಭೇಟಿಗೆ ಸಂತಸ ವ್ಯಕ್ತಪಡಿಸಿರುವ ಚಿನ್ನದ ಹುಡುಗ ಗಣಿ ಅವರು 'ಶೂಟಿಂಗ್ ಸೆಟ್ ಗೆ ತುಂಬಾ ಸರಳ ವ್ಯಕ್ತಿತ್ವ ಹೊಂದಿರುವ ಶಿವಣ್ಣ ಅವರು ಭೇಟಿ ಮಾಡಿದ್ದು ತುಂಬಾ ಖುಷಿ ಆಯ್ತು' ಎಂದು ತಮ್ಮ ಫೇಸ್ ಬುಕ್ಕಿನಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ.

Shivanna's visit to #Gandendre Gandu shooting Extremely happy to have the down to earth person on the set󾌵

Posted by Golden Star Ganesh on Wednesday, March 2, 2016

ಕಮಲ್ ಹಾಸನ್ ಅವರ 'ಉತ್ತಮ ವಿಲನ್' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ ನಂತರ ಇದೀಗ ರಮೇಶ್ ಅರವಿಂದ್ ಅವರು ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ನಡುವೆಯೂ ಬಿಡುವು ಮಾಡಿಕೊಂಡು ನಿರ್ದೇಶನದ ಹೊಣೆ ಹೊತ್ತಿದ್ದಾರೆ.[ಚಿನ್ನದ ಹುಡುಗನಿಗೆ ಆಕ್ಷನ್-ಕಟ್ ಹೇಳ್ತಾರಂತೆ, ರಮೇಶ್ ಅರವಿಂದ್.!]

Hatrick Hero Visits The Sets Of Ganesh's 'Gandu Endare Gandu'

ತೆಲುಗಿನ 'ಭಲೇ ಭಲೇ ಮಗಾಡಿವೊಯ್' ಸಿನಿಮಾದ ರೀಮೇಕ್ 'ಗಂಡು ಎಂದರೆ ಗಂಡು' ಚಿತ್ರದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ 'ಮಾಸ್ಟರ್ ಪೀಸ್' ಚಿತ್ರದ ಯಶಸ್ವಿ ನಟಿ ಶಾನ್ವಿ ಶ್ರೀವಾತ್ಸವ ಅವರು ಕಾಣಿಸಿಕೊಂಡಿದ್ದಾರೆ.

Hatrick Hero Visits The Sets Of Ganesh's 'Gandu Endare Gandu'

ನಿರ್ಮಾಪಕರಾದ ಅಲ್ಲು ಅರವಿಂದ್ ಮತ್ತು ರಾಕ್ ಲೈನ್ ವೆಂಕಟೇಶ್ ಅವರು 'ಗಂಡು ಎಂದರೆ ಗಂಡು' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ತೆಲುಗಿನ 'ಭಲೇ ಭಲೇ ಮಗಾಡಿವೊಯ್' ಚಿತ್ರಕ್ಕೂ ಅಲ್ಲು ಅರವಿಂದ್ ಅವರು ಬಂಡವಾಳ ಹೂಡಿದ್ದರು.

English summary
Hatrick Hero Shivarajkumar visits the sets of 'Gandu Endare Gandu'. A picture of Karunada Chakravarthy aka Shivanna along with Ganesh, Devaraj, Ramesh Aravind & Ravi Shankar has gone viral in the social media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada