For Quick Alerts
  ALLOW NOTIFICATIONS  
  For Daily Alerts

  'ವಯಸ್ಸಾದ' ಅಂಬರೀಶ್ ಬರೆದಿದ್ದ ಕಟ್ಟಕಡೆಯ ಪತ್ರವಿದು.!

  |

  27 ಸೆಪ್ಟೆಂಬರ್ 2018 ರಂದು ರೆಬೆಲ್ ಸ್ಟಾರ್ ಅಂಬರೀಶ್ ಮುಖ್ಯಭೂಮಿಕೆಯಲ್ಲಿ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರ ಬಿಡುಗಡೆ ಆಯ್ತು. ಈ ಸಿನಿಮಾ ನೋಡಿದವರು ''ಅಂಬಿಗೆ ನಿಜಕ್ಕೂ ವಯಸ್ಸಾಗಿಲ್ಲ... ಅವರ ಉತ್ಸಾಹ, ಹುರುಪು ಕೊಂಚ ಕೂಡ ಕಮ್ಮಿ ಆಗಿಲ್ಲ'' ಎಂದಿದ್ದರು.

  ಅಂಬರೀಶ್ ಕೂಡ ಅಷ್ಟೇ.. ಅನಾರೋಗ್ಯದ ಸಮಸ್ಯೆ ಇದ್ದರೂ, ಎಲ್ಲೆಡೆ ಲವಲವಿಕೆಯಿಂದಲೇ ಓಡಾಡಿಕೊಂಡಿದ್ದರು. ಆದ್ರೆ, ನಿನ್ನೆ ರಾತ್ರಿ ಹಠಾತ್ತಾಗಿ ಅಂಬರೀಶ್ ನಿಧನರಾದರು.

  ಹಾಗ್ನೋಡಿದ್ರೆ, ಅಂಬರೀಶ್ ಇಷ್ಟ ಪಟ್ಟು ಅಭಿನಯಿಸಿದ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತೋ'. ಈ ಚಿತ್ರದ ಪ್ರಚಾರಕ್ಕಾಗಿ ಅಂಬರೀಶ್ ತಮ್ಮ ಅಭಿಮಾನಿಗಳಿಗೆ ಒಂದು ಪತ್ರ ಬರೆದಿದ್ದರು. ದುರಂತ ಅಂದ್ರೆ, ಅದೇ ಅಂಬರೀಶ್ ರವರ ಕಟ್ಟಕಡೆಯ ಪತ್ರವಾಗಿದೆ.

  ಅಸಲಿಗೆ, ಪತ್ರದಲ್ಲಿ ಅಂಬರೀಶ್ ಏನೇನೆಲ್ಲಾ ಉಲ್ಲೇಖಿಸಿದ್ದರು.? ನೀವೇ ನೋಡಿರಿ ಫೋಟೋ ಸ್ಲೈಡ್ ಗಳಲ್ಲಿ...

  ಅಂಬರೀಶ್ ಬರೆದಿದ್ದ ಕೊನೆಯ ಪತ್ರ

  ಅಂಬರೀಶ್ ಬರೆದಿದ್ದ ಕೊನೆಯ ಪತ್ರ

  'ಎಲ್ರಿಗೂ ನಮಸ್ಕಾರ,

  ಇದೇನಪ್ಪಾ ಅಂಬರೀಷ್ ಅವ್ರು ನಮಸ್ಕಾರ ಅಂತ ಹೇಳ್ತಾ ಇದ್ದಾರೆ, ಅವರಿಗೆ ವಯಸ್ಸಾಯ್ತು ಅಂದ್ಕೋಬೇಡಿ. ತುಂಬಾ ವರ್ಷಗಳ ನಂತರ ನಿಮ್ಮನ್ನೆಲ್ಲ ಈ ಪತ್ರದ ಮುಖಾಂತರ ಮಾತಾಡ್ಬೇಕು ಅನಿಸ್ತು. ಅದಕ್ಕೊಂದು ಕಾರಣನೂ ಇದೆ.

  'ಮನೆಗೆ ಬರಲಿಲ್ಲ ಅಂದ್ರೆ ಸಾಯಿಸ್ತೀನಿ ಬಡ್ಡಿಮಗನೇ' ಎಂದಿದ್ದ ಅಂಬರೀಶ್.!

  ಪರಿಪೂರ್ಣ ಕಲಾವಿದ ಆದೆ

  ಪರಿಪೂರ್ಣ ಕಲಾವಿದ ಆದೆ

  ಹುಟ್ಟಿದ್ದು ಮಂಡ್ಯ, ಕುಡಿದಿದ್ದು ಕಾವೇರಿ ನೀರು ಅನ್ನೋ ಹಾಗೆ, ಹುಟ್ಟಿದಾಗ ಅಮರ್‌ನಾಥ್ ಆಗಿದ್ದ ನಾನು ಬೆಳಿತಾ ಬೆಳಿತಾ ನಿಮ್ಮ ಅಂಬರೀಶ್ ಆದೆ. ಪುಟ್ಟಣ್ಣನ ಜಲೀಲನ ಪಾತ್ರ ಮಾಡ್ತಾ ಮಾಡ್ತಾ ನನಗೇ ಗೊತ್ತಿಲ್ಲದೆ ನನ್ನೊಳಗೆ ಒಬ್ಬ ಪರಿಪೂರ್ಣ ಕಲಾವಿದ ಬೆಳಿತಾ ಹೋದ. ಹಿಂದಿನ 45 ವರ್ಷಗಳ ಕಾಲ ನೀವು ನನ್ನ ಮೇಲಿಟ್ಟ ಪ್ರೀತಿ, ಅಭಿಮಾನದಿಂದ ನೀವು ನನಗೆ ಕೊಟ್ಟ ಬಿರುದು "ರೆಬೆಲ್ ಸ್ಟಾರ್".

  ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!

  ಇಷ್ಟ ಪಟ್ಟ ಹುಡುಗಿ ಜೊತೆಗೆ ಮದುವೆ

  ಇಷ್ಟ ಪಟ್ಟ ಹುಡುಗಿ ಜೊತೆಗೆ ಮದುವೆ

  ಇಷ್ಟ ಪಟ್ಟ ಹುಡುಗಿ ಜತೆ ಮುಂದೆ ಮದುವೆ ಆಯ್ತು, ಮುದ್ದಾದ ಮಗ ಕೂಡ ಹುಟ್ಟಿದ. ಜೀವನ ನಿಧಾನವಾಗಿ ರಾಜಕೀಯದ ಕಡೆ ಹರೀತು. ಜನ ಸೇವೆಯನ್ನು ಮಾಡ್ತಾ ಬಂದೆ, ಸಿನಿಮಾ ನಟನೆಯನ್ನೇನು ಬಿಟ್ಟಿರಲಿಲ್ಲ. ಚಿತ್ರರಂಗದ ಆತ್ಮೀಯರು, ಹಿತೈಷಿಗಳು, ಸ್ನೇಹಿತರು ಒತ್ತಾಯಕ್ಕೆ, ಪ್ರೀತಿಗೆ ಸೋತು ಅಲ್ಲೊಂದು ಇಲ್ಲೊಂದು ಪಾತ್ರಗಳನ್ನು ಮಾಡ್ತಾ ಇದ್ದೆ.

  ಇದಕ್ಕೆ ಕಾಕತಾಳೀಯ ಅಂತೀರಾ, ವಿಚಿತ್ರ ಅಂತೀರಾ.?

  ಪರಿಪೂರ್ಣ ಪಾತ್ರ ಮಾಡುವ ಚಡಪಡಿಕೆ

  ಪರಿಪೂರ್ಣ ಪಾತ್ರ ಮಾಡುವ ಚಡಪಡಿಕೆ

  ಸಂತೋಷದ ಜೀವನ ಸಾಗ್ತಾ ಬಂತು. ಅನಾರೋಗ್ಯದಿಂದ ಆಸ್ಪತ್ರೆಲಿ ಇದ್ದೆ. ಆಗ ನನ್ನೊಳಗಿನ ಕಲೆ ಹಾಗೇ ಇತ್ತು. ಮಾತನಾಡಲು ಶುರುಮಾಡಿದೆ. ಆಗ ಹುಟ್ಟಿಕೊಂಡದ್ದೇ ಈ ಚಡಪಡಿಕೆ, ಒಳ್ಳೆ ಪಾತ್ರಗಳನ್ನು ಮಾಡೋ ಚಡಪಡಿಕೆ. ವಯಸ್ಸಿಗೊಪ್ಪುವ ಪರಿಪೂರ್ಣವಾದ ಪಾತ್ರವನ್ನು ಮಾಡುವ ಚಡಪಡಿಕೆ. ಆಗ ಜತೆಯಾದವನು ಮಗನಂತಹ ಗೆಳೆಯ ಸುದೀಪ. ಇನ್ನೇನು ಇಬ್ಬರು ಸೇರಿಕೊಂಡು ನಿಮ್ಮ ಇಡೀ ಕುಟುಂಬದ ಜೊತೆ ಕುಳಿತು ನೋಡುವ ಚಿತ್ರ ಮಾಡುವುದಾಗಿ ನಿಶ್ಚಯ ಮಾಡಿದ್ದೀವಿ. ಇನ್ನೇನು ತಡ ಇಲ್ಲ, ಆದಷ್ಟು ಬೇಗ

  ಇಂತಿ ನಿಮ್ಮ ಪ್ರೀತಿಯಾ

  ಅಂಬರೀಶ್

  ಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗ

  English summary
  Kannada Actor Ambareesh had written letter to his fans before the release of 'Ambi Ning Vayassaytho'. Have a look at Ambareesh's last letter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X