»   » ನಟ ಜಗ್ಗೇಶ್ ಬೇಸರ ಯಾರ ಮೇಲೆ?

ನಟ ಜಗ್ಗೇಶ್ ಬೇಸರ ಯಾರ ಮೇಲೆ?

By: ಹರಾ
Subscribe to Filmibeat Kannada

ನಟ ಜಗ್ಗೇಶ್ ಬೇಸರಗೊಂಡಿದ್ದಾರೆ. ಭವಿಷ್ಯದ ಮೇಲೆ ಭರವಸೆ ಇಟ್ಟು, ಒಳ್ಳೆಯ ಕಾಲದ ಆಶಾವಾದದಲ್ಲಿದ್ದ ನವರಸ ನಾಯಕ ಜಗ್ಗೇಶ್ ಮನನೊಂದಿದ್ದಾರೆ. ಇದಕ್ಕೆ ಕಾರಣ ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಾದ ಕೋಲಾಹಲ.

ನಿರ್ಮಾಪಕರು ಅನುಭವಿಸುತ್ತಿರುವ ಕಷ್ಟವನ್ನ ಬಗೆಹರಿಸಬೇಕು ಅನ್ನುವ ನಿಟ್ಟಿನಲ್ಲಿ ಮುಂದಾಳತ್ವ ವಹಿಸಿ, ಕಳೆದ ವಾರ ರೆಬೆಲ್ ಸ್ಟಾರ್ ಅಂಬರೀಶ್ ಮನೆಗೆ ತೆರಳಿ ಜಗ್ಗೇಶ್ ಮಾತುಕತೆ ನಡೆಸಿದ್ದರು. ಜಗ್ಗೇಶ್, ನಟಿ ತಾರಾ ಮಾತಿಗೆ ಬೆಲೆಕೊಟ್ಟು ಅಂಬಿ ಮಾಮಾ ಕಲಾವಿದರ ಸಂಘದ ಸಭೆ ಕರೆದರು. [ಒಗ್ಗೂಡದ ಕಲಾವಿದರ ಬಗ್ಗೆ ನಟ ಜಗ್ಗೇಶ್ ಗರಂ]

ಅಂಬರೀಶ್ ನೇತೃತ್ವದಲ್ಲಿ ಎಲ್ಲವೂ ಸರಿಹೋಗುತ್ತೆ ಅಂತಲೇ ಎಲ್ಲರೂ ನಂಬಿದ್ದರು. ಆದ್ರೆ, ಅಂದುಕೊಂಡಂತೆ ಯಾವುದೂ ಆಗಲ್ಲಿಲ್ಲ. ಅಂಬರೀಶ್ ಕರೆಗೆ 'ಸ್ಟಾರ್' ಕಲಾವಿದರು ಬೆಲೆಕೊಡಲಿಲ್ಲ. ಇದರಿಂದ ಫಿಲ್ಮ್ ಚೇಂಬರ್ ನಲ್ಲಿ ಮತ್ತೆ ಪ್ರತಿಭಟನೆ ನಡೆಯುತ್ತಿದೆ.

ಎಲ್ಲವನ್ನ ಕಣ್ಣಾರೆ ನೋಡುತ್ತಿರುವ ಜಗ್ಗೇಶ್, ಬೇಸರದಿಂದ ಕೆಲ ಟ್ವೀಟ್ ಗಳನ್ನ ಮಾಡಿದ್ದಾರೆ. ಯಾರ ಮೇಲೆ ಅವರಿಗೆ ಬೇಜಾರು, ಕೋಪ ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

''ಅಂಬರೀಶ್ ಅವರಿಗೆ ಧನ್ಯವಾದ''

ಅಂಬರೀಶ್ ಈಗ ಕೇವಲ ನಟ ಮಾತ್ರ ಅಲ್ಲ. ಜವಾಬ್ದಾರಿಯುತ ರಾಜಕಾರಣಿ ಕೂಡ. ಬಿಜಿ ಶೆಡ್ಯೂಲ್ ನಡುವೆ ಚಿತ್ರರಂಗದ ಸಮಸ್ಯೆ ಬಗೆಹರಿಸುವುದಕ್ಕೆ ಮುಂದಾಳತ್ವ ವಹಿಸಿರುವ ಅಂಬರೀಶ್ ಅವರಿಗೆ ಜಗ್ಗೇಶ್ ಧನ್ಯವಾದ ಸಲ್ಲಿಸಿದ್ದಾರೆ. [ಧರಣಿ ನಿರತ ನಿರ್ಮಾಪಕರ ಭವಿಷ್ಯ ಇಂದು ಅಂಬರೀಷ್ ಕೈಯಲ್ಲಿ!]

ಕವಲುದಾರಿಗೆ ಕಾರಣ ಯಾರು?

ಎಲ್ಲರೂ ತಾಳ್ಮೆಯಿಂದ ಇದ್ದಿದ್ದರೆ ಬಹುಶಃ ವಾಣಿಜ್ಯ ಮಂಡಳಿಯಲ್ಲಿ ನಿನ್ನೆ ನಡೆದ ಸಭೆ ಯಶಸ್ವಿ ಆಗುತ್ತಿತ್ತು. ಆದ್ರೆ, ವಿಫಲಕ್ಕೆ ಕೆಲವರ ಆತುರ ಕಾರಣ ಅಂದಿದ್ದಾರೆ ಜಗ್ಗೇಶ್. ಹಾಗಾದ್ರೆ, ಕವಲುದಾರಿಗೆ ಕಾರಣ ಯಾರು? ಜಗ್ಗೇಶ್ ಮಾಡಿರುವ ಟ್ವೀಟ್ ನ ನೀವೇ ಓದಿ ಅರ್ಥ ಮಾಡಿಕೊಳ್ಳಿ. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

ಉಂಡ ಮನೆ ಅಪಮಾನವಿತ್ತವರಾರು?

ವಾಣಿಜ್ಯ ಮಂಡಳಿಯನ್ನ ಎಲ್ಲರೂ ಗೌರವಿಸಬೇಕು. ಇಲ್ಲದಿದ್ದರೆ ಉಂಡ ಮನೆಗೆ ಅವಮಾನ ಮಾಡಿದಂತೆ ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. [ಹೊಟ್ಟೆಪಾಡಿಗಾಗಿ ಬೀದಿಗಿಳಿದ ಕನ್ನಡ ನಿರ್ಮಾಪಕರು]

''ಗೌರವ ನಡೆಯಿಂದ ಹೆಚ್ಚುತ್ತೆ''

''ನಮ್ಮ ಗೌರವ ಅಭಿಮಾನಿಗಳ ಸಂಖ್ಯೆಯಿಂದ ಹೆಚ್ಚಾಗೋಲ್ಲ ಬದಲಿಗೆ ನಮ್ಮ ನಡೆಯಿಂದ ಹೆಚ್ಚುತ್ತೆ. ಇದಕ್ಕೆ ರಾಜ್ ಕುಮಾರ್ ರವರು ಒಬ್ಬರೇ ಸಾಕ್ಷಿ. ಹಾಗಾಗಿ ಅವರು ಇನ್ನೂ ಉಳಿದರು'' ಅಂತ ಜಗ್ಗೇಶ್ ಟ್ವೀಟಿಸಿದ್ದಾರೆ. ಜಗ್ಗೇಶ್ ಮಾಡಿರುವ ಈ ಟ್ವೀಟ್ ಗಳಲ್ಲಿ ಅವರ ಬೇಸರ ಯಾರ ವಿರುದ್ಧ ಅಂತ ಗೊತ್ತಾಗುತ್ತಿಲ್ಲ. ಆದ್ರೆ, ಚಿತ್ರರಂಗ ಒಡೆದ ಮನೆಯಾಗಿದೆ ಅನ್ನೋದಕ್ಕೆ ಅವರ ಈ ಎಲ್ಲಾ ಟ್ವೀಟ್ ಗಳೇ ಸಾಕ್ಷಿ. [''ರೆಬೆಲ್ ಸ್ಟಾರ್ ಅಂಬರೀಶ್ ಗೆ ಧಿಕ್ಕಾರ...ಧಿಕ್ಕಾರ...'']

English summary
Kannada Actor Jaggesh has taken his twitter account to react on the havoc which took place yesterday during the meeting presided by Ambareesh in KFCC. Take a look at Jaggesh tweets.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada