For Quick Alerts
  ALLOW NOTIFICATIONS  
  For Daily Alerts

  ಕೈ, ಕಮಲದ ನಂತರ ಜೆಡಿಎಸ್ ಪಕ್ಷಕ್ಕೆ ಸುದೀಪ್.! ಹೆಚ್.ಡಿ. ದೇವೇಗೌಡ ಹೇಳಿದ್ದೇನು?

  By Bharath Kumar
  |
  ಸುದೀಪ್ ಜೆಡಿಎಸ್ ಸೇರುತ್ತಾರಾ? ಎಚ್ ಡಿ ದೇವೇಗೌಡ ಹೇಳೋದ್ ಹೀಗೆ | Filmibeat Kannada

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ತಾರಂತೆ. ಇಲ್ಲ ಬಿ.ಜೆ.ಪಿ ಪಕ್ಷವನ್ನ ಬೆಂಬಲಿಸುತ್ತಾರಂತೆ. ಹಾಗಂತೆ, ಈಗಂತೆ ಎನ್ನವಾಗಲೇ ಜೆ.ಡಿ.ಎಸ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಸುದೀಪ್ ಪಕ್ಷಕ್ಕೆ ಸೇರುವ ವಿಚಾರವಾಗಿ ಮಾತನಾಡಿದ್ದಾರೆ.

  ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಎಚ್.ಡಿ ದೇವೇಗೌಡ ಅವರು ''ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದಾರೆ. ಆದ್ರೆ ಅವರು ಏನು ನಿರ್ಧಾರ ಮಾಡಿದ್ದಾರೋ ನನಗೆ ಗೊತ್ತಿಲ್ಲ. ನಾನು ಯಾರ ವ್ಯಕ್ತಿತ್ವವನ್ನು ಹಗುರವಾಗಿ ಕಾಣೋಲ್ಲ. ಅವರೊಂದಿಗೆ ಕುಮಾರಸ್ವಾಮಿ ಮಾತನಾಡಿರೋದು ಸತ್ಯ'' ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ಸುದೀಪ್ ಮತ್ತು ಹೆಚ್.ಡಿ.ಕೆ ಭೇಟಿ ಹಿಂದಿನ ಅಸಲಿ ಕಾರಣ?

  ಕಳೆದ ಎರಡು ವಾರಗಳ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಸುದೀಪ್ ಮನೆಗೆ ಭೇಟಿ ನೀಡಿದ್ದರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದರು. ಈ ವೇಳೆ ತಮ್ಮ ಪಕ್ಷಕ್ಕೆ ಬರುವಂತೆ ಸುದೀಪ್ ಅವರಿಗೆ ಆಹ್ವಾನ ಕೂಡ ನೀಡಿದ್ದರು.

  ಆದ್ರೆ, ಸುದೀಪ್ ಅವರು ರಾಜಕೀಯಕ್ಕೆ ಬರುವ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ. ಹೀಗಿದ್ದರೂ, ಸುದೀಪ್ ರಾಜಕೀಯಕ್ಕೆ ಬರ್ತಾರೆ ಎಂಬ ಸುದ್ದಿಗಳು ಮಾತ್ರ ದಿನದಿಂದ ದಿನಕ್ಕೆ ಚರ್ಚೆ ಆಗುತ್ತಲೇ ಇದೆ.

  English summary
  Jds National President and Former Prime Minister HD Deve Gowda react about sudeep political stand. earlier, HD Kumaraswamy invites Sudeep to JDS party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X