»   » ಎಚ್ ಡಿ ಗಂಗರಾಜು ಕೈತಪ್ಪಿದ ರಜನಿಕಾಂತ್ 'ಲಿಂಗಾ'

ಎಚ್ ಡಿ ಗಂಗರಾಜು ಕೈತಪ್ಪಿದ ರಜನಿಕಾಂತ್ 'ಲಿಂಗಾ'

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯ ಭಾರಿ ಬಜೆಟ್ ನ ಅದ್ದೂರಿ ಚಿತ್ರ 'ಲಿಂಗಾ' ಇದೇ ಡಿಸೆಂಬರ್ 12ಕ್ಕೆ ವಿಶ್ವವ್ಯಾಪಿ ತೆರೆಗೆ ಬರುತ್ತಿದೆ. ರಜನಿ ಚಿತ್ರಗಳ ಕರ್ನಾಟಕ ವಿತರಣೆ ಹಕ್ಕುಗಳನ್ನು ಪ್ರತಿ ಬಾರಿಯೂ ಪಡೆಯುತ್ತಿದ್ದವರು ಫಿಲಂ ಚೇಂಬರ್ ಹಾಲಿ ಅಧ್ಯಕ್ಷರಾದ ಎಚ್ ಡಿ ಗಂಗರಾಜು.

ಆದರೆ ಈ ಬಾರಿ 'ಲಿಂಗಾ' ಚಿತ್ರ ಅವರ ಕೈತಪ್ಪುತ್ತಿದೆ. 'ಲಿಂಗಾ' ಚಿತ್ರದ ಕರ್ನಾಟಕ ವಿತರಣೆ ಹಕ್ಕುಗಳು ಗಂಗರಾಜು ಅವರಿಗೆ ಈ ಬಾರಿ ಸಿಗುತ್ತಿಲ್ಲ. ಸರಿಸುಮಾರು ರು.100 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದಾಗಿದೆ.

hd-gangaraju-missed-lingaa-distribution-rights

ಈ ಬಾರಿ ಚಿತ್ರವನ್ನು ಸ್ವತಃ ರಾಕ್ ಲೈನ್ ವೆಂಕಟೇಶ್ ಅವರೇ ವಿತರಣೆ ಮಾಡುತ್ತಿದ್ದಾರೆ. ಹಾಗಾಗಿ ಗಂಗಾಜು ಅವರಿಗೆ 'ಲಿಂಗಾ' ಸಿಗುತ್ತಿಲ್ಲ. ಇನ್ನು ಈ ಚಿತ್ರದಲ್ಲಿ ರಜನಿಕಾಂತ್ ಅವರದು ದ್ವಿಪಾತ್ರಾಭಿನಯ. ಜೊತೆಗೆ ಕಣ್ಣಿಗೆ ತಂಪೆರೆಯಲು ಅನುಷ್ಕಾ ಶೆಟ್ಟಿ, ಸೋನಾಕ್ಷಿ ಸಿನ್ಹಾ ಮುಂತಾದವರು ಇದ್ದಾರೆ.

ಲಿಂಗಾ ಚಿತ್ರದ ವಿಶೇಷತೆ ಎಂದರೆ ಬಹುತೇಕ ಭಾಗವನ್ನು ಕರ್ನಾಟಕದಲ್ಲೇ ಚಿತ್ರೀಕರಿಸಿರುವುದು. ಹಾಗಾಗಿ ಈ ಚಿತ್ರದ ಬಗ್ಗೆ ಕನ್ನಡಿಗರಲ್ಲೂ ವಿಶೇಷ ಆಸಕ್ತಿ ಇದೆ. ಈಗಾಗಲೆ ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

ಎಷ್ಟೇ ಆಗಲಿ ರಜಿನಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಚಿತ್ರ 'ಲಿಂಗಾ'. ಅನುಷ್ಕಾ ಶೆಟ್ಟಿ, ಸೋನಾಕ್ಷಿ ಗ್ಲಾಮರ್, ಸಂತಾನಂ ಕಾಮಿಡಿ ತುಂಬಿತುಳುಕುತ್ತಿರುವ 'ಲಿಂಗಾ' ಟ್ರೇಲರ್ ಒಂದು ದಿನದಲ್ಲೇ ಹತ್ತು ಲಕ್ಷ ಜನರ ಮನಮುಟ್ಟಿ ಇತಿಹಾಸ ಸೃಷ್ಟಿಸಿದೆ. ಇದೇ ಹಾದಿಯಲ್ಲಿ ಮುಂದೆ ಇನ್ಯಾವ್ಯಾವ ರೆಕಾರ್ಡ್ ಗಳು ಬ್ರೇಕ್ ಆಗುವುದೋ ಆ ಶಿವನೇ ಬಲ್ಲ. (ಏಜೆನ್ಸೀಸ್)

English summary
This time KFCC president HD Gangaraju is not getting the rights of Karnataka region for the release of Rajinikanth lead 'Lingaa'. The movie is set for release on December 12, 2014 worldwide.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada