For Quick Alerts
  ALLOW NOTIFICATIONS  
  For Daily Alerts

  ಸಿಎಂ vs ಜೋಡೆತ್ತುಗಳ ಪ್ರಚಾರ: ಯಾರಿಗೆ ಯಾರು ತಿರುಗೇಟು ಕೊಡ್ತಾರೆ?

  |
  Lok Sabha Elections : ಮಗನ ಪರ ಪ್ರಚಾರಕ್ಕೆ ಇಳಿದ ಸಿಎಂ ಎಚ್.ಡಿ.ಕುಮಾರಸ್ವಾಮಿ

  ಮಂಡ್ಯ ಅಖಾಡಕ್ಕೆ ಇಂದು ಸ್ವತಃ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೇ ಧುಮುಕಿದ್ದಾರೆ. ಪುತ್ರನ ಪರವಾಗಿ ಮತಯಾಚನೆ ಮಾಡುತ್ತಿರುವ ಸಿಎಂ ವಿರೋಧಿಗಳ ವಿರುದ್ಧ ಯಾವೆಲ್ಲಾ ಅಸ್ತ್ರಗಳನ್ನ ಪ್ರಯೋಗಿಸುತ್ತಾರೆ ಎಂಬ ಕುತೂಹಲ ಕಾಡ್ತಿದೆ.

  ಇಷ್ಟು ದಿನ ಮಂಡ್ಯದಲ್ಲಿ ಜೋಡೆತ್ತುಗಳದ್ದೇ ಅಬ್ಬರ ಹೆಚ್ಚಾಗಿತ್ತು. ಈಗ ಸಿಎಂ ಎಂಟ್ರಿಯಾಗಿರುವುದರಿಂದ ಯಶ್ ಮತ್ತು ದರ್ಶನ್ ವಿರುದ್ಧ ಮುಖ್ಯಮಂತ್ರಿ ಯಾವ ವಿಷ್ಯವನ್ನಿಟ್ಟು ವಾಗ್ದಾಳಿ ಮಾಡಬಹುದು ಎಂಬ ಪ್ರಶ್ನೆ ಕಾಡುತ್ತಿದೆ.

  ಚುನಾವಣೆಗಳಲ್ಲಿ ದರ್ಶನ್ ಪ್ರಚಾರ ಮಾಡೋದು ಈ ಒಂದೇ ಕಾರಣಕ್ಕೆ

  ಹಾಗಿದ್ರೆ, ಮಂಡ್ಯ ಪ್ರಚಾರದಲ್ಲಿಂದು ಸಿಎಂ ಮತ್ತು ಜೋಡೆತ್ತುಗಳ ನಡುವೆ ಏನೆಲ್ಲಾ ಆಗಬಹುದು. ಯಾವೆಲ್ಲಾ ವಿಷ್ಯಗಳ ಬಗ್ಗೆ ಚರ್ಚೆ ನಡೆಯಬಹುದು, ಯಾವ ಆರೋಪ ಪ್ರತ್ಯಾರೋಪ ಇಂದು ಎದುರಾಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಹಾಗ್ನೋಡಿದ್ರೆ, ಕೆಲವು ವಿಷ್ಯಗಳು ಇಂದು ಪ್ರಸ್ತಾಪವಾಗುವ ಸಾಧ್ಯತೆ ಇದೆ. ಯಾವುದು ಆ ಅಂಶಗಳು? ಮುಂದೆ ಓದಿ.....

  ಅಂಬರೀಶ್ ಗೆ ಒಬ್ಬರೇ ಹೆಂಡ್ತಿ.!

  ಅಂಬರೀಶ್ ಗೆ ಒಬ್ಬರೇ ಹೆಂಡ್ತಿ.!

  ಪ್ರಚಾರದ ವೇಳೆ ಮಾತನಾಡಿದ ಯಶ್, 'ಸುಮಲತಾ ಹೆಸರಿನಲ್ಲಿ ಎಷ್ಟೇ ಜನರನ್ನ ನಿಲ್ಲಿಸಿದ್ರೂ ಅಂಬರೀಶ್ ಅವರಿಗೆ ಒಬ್ಬರೇ ಹೆಂಡ್ತಿ, ಅದು ಎಲ್ಲರಿಗೂ ಗೊತ್ತು' ಎಂದು ಹೇಳಿದ್ದರು. ಈ ಹೇಳಿಕೆ ಜೆಡಿಎಸ್ ಕಾರ್ಯಕರ್ತರನ್ನ ಕೆರಳಿಸಿದ್ದು, ಸಿಎಂಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂದು ಚರ್ಚೆ ಮಾಡ್ತಿದ್ದಾರೆ. ಬಹುಶಃ ಯಶ್ ಅವರ ಈ ಹೇಳಿಕೆ ಸಿಎಂ ತಿರುಗೇಟು ನೀಡಬಹುದು.

  ನಿಖಿಲ್-ಯಶ್ ಟಾಕ್ ಫೈಟ್

  ನಿಖಿಲ್-ಯಶ್ ಟಾಕ್ ಫೈಟ್

  ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ನಿಖಿಲ್ ಹೇಳಿದ್ದರು. ಇದಕ್ಕೆ ಯಶ್ ಕೂಡ ತಮ್ಮದೇ ಸ್ಟೈಲ್ ನಲ್ಲಿ ಉತ್ತರಿಸಿದ್ದರು. ಉತ್ತರ ಕರ್ನಾಟಕದ ಜನತೆಗೆ ಸರ್ಕಾರ ಏನೂ ಮಾಡಿಲ್ಲ. ನಾನು ನನ್ನ ವೈಯಕ್ತಿಕ ದುಡ್ಡಿನಿಂದ ಮಾಡಿದ್ದೀನಿ ಎಂದು ಯಶ್ ಹೇಳಿದ್ದರು. ಬಹುಶಃ ರಾಕಿಂಗ್ ಸ್ಟಾರ್ ಈ ಹೇಳಿಕೆಗೆ ಮುಖ್ಯಮಂತ್ರಿ ಉತ್ತರಿಸಬಹುದು.

  'ಬಾಡಿಗೆ' ವಿಷ್ಯ ಕೆದಕಿದ ನಿಖಿಲ್ ಗೆ ಯಶ್ ತಿರುಗೇಟು

  ಸುಮಲತಾಗೆ ಮೋದಿ ಬೆಂಬಲ

  ಸುಮಲತಾಗೆ ಮೋದಿ ಬೆಂಬಲ

  ಇನ್ನು ಮಂಗಳವಾರ ಮೈಸೂರಿಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನ ಗೆಲ್ಲಿಸಿ ಎಂದು ಕರೆ ಕೊಟ್ಟರು. ಇದು ಮೈತ್ರಿ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸುಮಲತಾ ಪಕ್ಷೇತರ ಅಭ್ಯರ್ಥಿ ಅಲ್ಲ. ಬಿಜೆಪಿ ಅಭ್ಯರ್ಥಿ ಎಂದು ಟೀಕಿಸುತ್ತಿದ್ದಾರೆ. ಬಹುಶಃ ಮೋದಿ ಅವರ ಮಾತಿಗೆ ಸಿಎಂ ಪ್ರತಿಕ್ರಿಯಸಬಹುದು.

  ಸುಮಲತಾ ಆರೋಪಕ್ಕೆ ತಿರುಗೇಟು

  ಸುಮಲತಾ ಆರೋಪಕ್ಕೆ ತಿರುಗೇಟು

  ಜೆಡಿಎಸ್ ಪಕ್ಷದವರು ನನ್ನ ವೈಯಕ್ತಿಕವಾಗಿ ಹಾಗೂ ನಮ್ಮ ಕುಟುಂಬ ಮತ್ತು ಯಶ್, ದರ್ಶನ್ ವಿರುದ್ಧ ಉದ್ದೇಶಪೂರ್ವಕವಾಗಿ ಮಸಿ ಬಳಿಯುವ ಪ್ರಯತ್ನ ಮಾಡ್ತಿದ್ದಾರೆ ಎಂದು ಸುಮಲತಾ ಆರೋಪಿಸಿದ್ದರು. ತೀರಾ ಕೀಳುಮಟ್ಟದ ರಾಜಕಾರಣಕ್ಕೆ ಮುಂದಾಗ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಸುಮಲತಾ ಅವರ ಆರೋಪಗಳಿಗೂ ಸಿಎಂ ತಿರುಗೇಟು ನೀಡಬಹುದು.

  ಯಶ್-ದರ್ಶನ್ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ: ಅಂಬಿ ಪುತ್ರ ಅಭಿಷೇಕ್

  ಜೋಡೆತ್ತುಗಳ ವಿರುದ್ಧ ತೊಡೆ ತಟ್ಟಬಹುದು

  ಜೋಡೆತ್ತುಗಳ ವಿರುದ್ಧ ತೊಡೆ ತಟ್ಟಬಹುದು

  ಇದೆಲ್ಲ ಪಕ್ಕಕ್ಕೆ ಇಟ್ಟರೇ, ಸುಮಲತಾ ಪರ ಪ್ರಚಾರ ಮಾಡುತ್ತಿರುವ ಜೋಡೆತ್ತುಗಳ ವಿರುದ್ಧ ಸಿಎಂ ಕಿಡಿಕಾರಬಹುದು. ಸಿನಿಮಾ ಸ್ಟಾರ್ ಗಳು ರೈತರಿಗೆ ಏನೂ ಮಾಡಿಲ್ಲ ಎಂದು ಮತ್ತೆ ಆರೋಪ ಮಾಡಬಹುದು. ಸಿಎಂ ಹೇಳಿಕೆಗಳಿಗೂ ಯಶ್ ಮತ್ತು ದರ್ಶನ್ ಉತ್ತರಿಸಬಹುದು. ಒಟ್ನಲ್ಲಿ, ಮಂಡ್ಯ ಪ್ರಚಾರ ಇಂದು ಭಾರಿ ಕುತೂಹಲ ಮೂಡಿಸಿದೆ.

  ಯಶ್ ಬಗ್ಗೆ ನಿಖಿಲ್ 'ಬಾಡಿಗೆ' ಬಾಣ: ಸುಮಲತಾ ಹೇಳಿದ್ದೇನು?

  ಯಾರು ಎಲ್ಲೆಲ್ಲಿ ಪ್ರಚಾರ

  ಯಾರು ಎಲ್ಲೆಲ್ಲಿ ಪ್ರಚಾರ

  ಕೆಆರ್ ನಗರದಲ್ಲಿ ದರ್ಶನ್, ಪಾಂಡವಪುರದಲ್ಲಿ ಸುಮಲತಾ, ಮಂಡ್ಯ ಮತ್ತು ಮದ್ದೂರಿನಲ್ಲಿ ಯಶ್ ಪ್ರಚಾರ ಮಾಡಲಿದ್ದಾರೆ. ಮತ್ತೊಂದೆಡೆ ಕೆ.ಆರ್.ಎಸ್ ನಿಂದ ಸಿಎಂ ಪ್ರಚಾರ ಮಾಡಲಿದ್ದು, ಸುಮಾರು 30 ಹಳ್ಳಿಗಳಲ್ಲಿ ಮತಭೇಟೆ ಮಾಡಲಿದ್ದಾರೆ.

  English summary
  Chief minister Hd Kumaraswamy, nikhil kumar, kannada actor darshan, yash, sumalatha are campaigning in mandya today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X