»   » ಎಚ್ಡಿಕೆ ಫೀಡ್ ಬ್ಯಾಕ್ ಗೆ ಮಾರುಹೋದ 'ಸ್ವೀಟಿ' ರಾಧಿಕಾ

ಎಚ್ಡಿಕೆ ಫೀಡ್ ಬ್ಯಾಕ್ ಗೆ ಮಾರುಹೋದ 'ಸ್ವೀಟಿ' ರಾಧಿಕಾ

By: ಉದಯರವಿ
Subscribe to Filmibeat Kannada

ನಟಿ ರಾಧಿಕಾ ಕುಮಾರಸ್ವಾಮಿ ಐದು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿರುವ ಚಿತ್ರ ಸ್ವೀಟಿ. ಈ ಚಿತ್ರದಲ್ಲಿ ಕಥೆಗಿಂತಲೂ ಅವರ ಗ್ಲಾಮರ್ ಗೆ ಹೆಚ್ಚಿನ ಮಾರ್ಕ್ಸ್ ಬಿದ್ದಿವೆ. ಬಹುತೇಕ ಚಿತ್ರವಿಮರ್ಶೆಗಳು ರಾಧಿಕಾ ಗ್ಲಾಮರನ್ನೇ ಹಾಡಿ ಹೊಗಳಿವೆ.

ಇದೇ ಸಂದರ್ಭದಲ್ಲಿ ರಾಧಿಕಾ ಕುಮಾರಸ್ವಾಮಿ 27ನೇ ವರ್ಷಕ್ಕೆ ಅಡಿಯಿಟ್ಟಿದ್ದಾರೆ. ಸೋಮವಾರ (ನ.11) ರಾಧಿಕಾ ಅವರಿಗೆ ಹುಟ್ಟುಹಬ್ಬ ಸಂಭ್ರಮ. ಇದೆಲ್ಲಕ್ಕಿಂತಲೂ ಹೆಚ್ಚಾಗಿ ತಮ್ಮ ಚಿತ್ರದ ಬಗ್ಗೆ ಕೇಳಿಬರುತ್ತಿರುವ ಮೆಚ್ಚುಗೆಯ ಮಾತುಗಳು ರಾಧಿಕಾ ಅವರನ್ನು ಇನ್ನಷ್ಟು ಗೆಲುವಾಗಿಸಿವೆ. [ಸ್ವೀಟಿ ಚಿತ್ರ ವಿಮರ್ಶೆ: ಒಮ್ಮೆ ನೋಡಬಹುದಾದ ಚಿತ್ರ]

HD Kumaraswamy feedback on Sweety Radhik

ಎಲ್ಲಕ್ಕಿಂತಲೂ ಹೆಚ್ಚಾಗಿ ಎಚ್ ಡಿ ಕುಮಾರಸ್ವಾಮಿ ಅವರು 'ಸ್ವೀಟಿ' ಚಿತ್ರದ ಬಗ್ಗೆ ಕೊಟ್ಟಿರುವ ಫೀಡ್ ಬ್ಯಾಕ್ ಗೆ ರಾಧಿಕಾ ಮಾರುಹೋಗಿದ್ದಾರೆ. ತಮ್ಮ ರಾಜಕೀಯ ಜಂಜಾಟಗಳ ನಡುವೆಯೂ ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿರುವ ಕುಮಾರಸ್ವಾಮಿ ಹೇಳಿರುವುದೇನೆಂದರೆ...

ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಚಿತ್ರದಲ್ಲಿ ಚೆನ್ನಾಗಿ ಕಾಣ್ತೀಯ. ಇದೇ ರೀತಿಯ ಒಳ್ಳೋಳ್ಳೆಯ ಚಿತ್ರಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿದರು ಎಂದು ರಾಧಿಕಾ ಹೇಳಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಇನ್ನೂ ಭವಿಷ್ಯವಿದೆ ಎಂದು ಹೇಳಿರುವ ಕುಮಾರಸ್ವಾಮಿ, ಸ್ವೀಟಿ ಚಿತ್ರವನ್ನು ಕಣ್ಣುಮಿಟುಕಿಸದೆ ನೋಡಿರುವುದಾಗಿ ಹೇಳಿಕೊಂಡಿದ್ದಾರೆ ರಾಧಿಕಾ ಕುಮಾರಸ್ವಾಮಿ. ಒಟ್ಟಾರೆಯಾಗಿ ಎಚ್ಡಿಕೆ ಫೀಡ್ ಬ್ಯಾಕ್ ಗೆ ರಾಧಿಕಾ ಕಳೆದುಹೋಗಿರುವುದಂತೂ ನಿಜ.

English summary
Leader of the Opposition, H.D. Kumaraswamy lauds Radhika Kumaraswamy's latest Kannada flick Sweety. HDK fall for Radhika glamour in the film. Radhika celebrating her 27th birthday on 11th November.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada