For Quick Alerts
  ALLOW NOTIFICATIONS  
  For Daily Alerts

  ಎಚ್.ಡಿ ಕುಮಾರಸ್ವಾಮಿ ಯಶಸ್ವಿ ನಿರ್ಮಾಪಕನಾಗಲು ಈ ಚಿತ್ರಗಳು ಕಾರಣ.!

  By Bharath Kumar
  |
  ಎಚ್ . ಡಿ. ಕುಮಾರಸ್ವಾಮಿ ಕನ್ನಡದಲ್ಲಿ ಎಷ್ಟು ಸಿನಿಮಾ ನಿರ್ಮಾಣ ಮಾಡಿದ್ದಾರೆ ಗೊತ್ತಾ ..?

  ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಎಚ್.ಡಿ ಕುಮಾರಸ್ವಾಮಿ ಬರಿ ರಾಜಕಾರಣಿ ಮಾತ್ರವಲ್ಲ. ಅವರೊಬ್ಬ ಯಶಸ್ವಿ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ. ಚೆನ್ನಾಂಬಿಕ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯಲ್ಲಿ ಹಲವು ಹಿಟ್ ಸಿನಿಮಾಗಳನ್ನ ನೀಡಿದ ಖ್ಯಾತಿ ಇವರದ್ದು.

  ಸಿನಿಮಾರಂಗಕ್ಕೆ, ಸಿನಿಮಾ ಕಲಾವಿದರೊಂದಿಗೆ ಸದಾ ಸಂಪರ್ಕದಲ್ಲಿರುವ ಕುಮಾರಸ್ವಾಮಿ ಕೊನೆಯದಾಗಿ ಮಗ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಚಿತ್ರವನ್ನ ನಿರ್ಮಾಣ ಮಾಡಿದ್ದರು.

  ಸಿದ್ದು, ಬಿಎಸ್.ವೈ, ಕುಮಾರಣ್ಣ ಕೃಪೆಯಿಂದ 'ಟಗರು' ಮಾಡಿದ ದಾಖಲೆ.!ಸಿದ್ದು, ಬಿಎಸ್.ವೈ, ಕುಮಾರಣ್ಣ ಕೃಪೆಯಿಂದ 'ಟಗರು' ಮಾಡಿದ ದಾಖಲೆ.!

  ಇತ್ತೀಚಿನ ಯುವ ಜನಾಂಗಕ್ಕೆ ಕುಮಾರಸ್ವಾಮಿ ನಿರ್ಮಾಣದ ಚಿತ್ರಗಳು ಯಾವುದು.? ಎಷ್ಟು ಚಿತ್ರಗಳನ್ನ ವಿತರಣೆ ಮಾಡಿದ್ದಾರೆ ಎಂಬುದರ ಬಗ್ಗೆ ಕುತೂಹಲವಿದೆ. ಈ ಕುತೂಹಲಗಳಿಗೆ ಉತ್ತರ ಇಲ್ಲಿದೆ. ಓದಿ....

  'ಸೂರ್ಯವಂಶ'ದ ರೂವಾರಿ

  'ಸೂರ್ಯವಂಶ'ದ ರೂವಾರಿ

  ಚೆನ್ನಾಂಬಿಕ ಫಿಲ್ಮ್ಸ್ ಬ್ಯಾನರ್ ನಲ್ಲಿ ಎಚ್.ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಚೊಚ್ಚಲ ಸಿನಿಮಾ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅಭಿನಯಿಸಿದ್ದ ಸೂಪರ್ ಹಿಟ್ 'ಸೂರ್ಯವಂಶ'. ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಕಲಾ ಸಾಮ್ರಾಟ್ ಎಸ್ ನಾರಾಯಣ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. 1999 ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು.

  ವಿಷ್ಣುದಾದನ 'ಪ್ರೇಮೋತ್ಸವ'

  ವಿಷ್ಣುದಾದನ 'ಪ್ರೇಮೋತ್ಸವ'

  ಡಾ ವಿಷ್ಣುವರ್ಧನ್ ಅಭಿನಯದಲ್ಲೇ ಮೂಡಿ ಬಂದ ಇನ್ನೊಂದು ಸಿನಿಮಾ ಪ್ರೇಮೋತ್ಸವ. ಈ ಚಿತ್ರವನ್ನ ಎಚ್.ಡಿ.ಕೆ ಪತ್ನಿ ಅನಿತಾ ಕುಮಾರಸ್ವಾಮಿ ಅವರೇ ನಿರ್ಮಾಣ ಮಾಡಿದ್ದರು. ವಿಷ್ಣು ಜೊತೆಯಲ್ಲಿ ದೇವಯಾನಿ, ರೋಜಾ ಅಭಿನಯಿಸಿದ್ದರು. ದಿನೇಶ್ ಬಾಬು ನಿರ್ದೇಶನ ಮಾಡಿದ್ದರು.

  ಗಲಾಟೆ ಅಳಿಯಂದ್ರು

  ಗಲಾಟೆ ಅಳಿಯಂದ್ರು

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸಾಕ್ಷಿ, ತಾರಾ, ದೊಡ್ಡಣ್ಣ ಸೇರಿದಂತೆ ಹಲವರು ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಗಲಾಟೆ ಅಳಿಯಂದ್ರು'. ಈ ಚಿತ್ರವನ್ನ ನಿರ್ಮಾಣ ಮಾಡಿರೋದು ಎಚ್.ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ. ಎಸ್ ನಾರಾಯಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, 2000ರಲ್ಲಿ ಬಿಡುಗಡೆಯಾಗಿತ್ತು.

  ಜಗ್ಗೇಶ್ 'ಜಿತೇಂದ್ರ'

  ಜಗ್ಗೇಶ್ 'ಜಿತೇಂದ್ರ'

  ನವರಸ ನಾಯಕ ಜಗ್ಗೇಶ್ ಅಭಿನಯಿಸಿದ್ದ 'ಜಿತೇಂದ್ರ' ಚಿತ್ರವನ್ನ ನಿರ್ಮಾಣ ಮಾಡಿದ್ದು ಕೂಡ ಇದೇ ಚೆನ್ನಾಂಬಿಕ ಫಿಲ್ಮ್ಸ್. ವಿಶ್ವನಾಥ್ ನಿರ್ದೇಶನದ ಈ ಚಿತ್ರ 2001ರಲ್ಲಿ ಬಿಡುಗಡೆಯಾಗಿತ್ತು.

  ದಾಖಲೆಯ 'ಚಂದ್ರ ಚಕೋರಿ'

  ದಾಖಲೆಯ 'ಚಂದ್ರ ಚಕೋರಿ'

  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಚೊಚ್ಚಲ ಸಿನಿಮಾ 'ಚಂದ್ರಚಕೋರಿ'. ಕುಮಾರಸ್ವಾಮಿ ಅವರ ಬ್ಯಾನರ್ ನಲ್ಲಿ ತಯಾರಾಗಿದ್ದ ಈ ಸಿನಿಮಾ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಪ್ರದರ್ಶನ ಕಂಡಿತ್ತು. 2003ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಈ ಚಿತ್ರವನ್ನ ಕೂಡ ಎಸ್ ನಾರಾಯಣ್ ಅವರೇ ನಿರ್ದೇಶನ ಮಾಡಿದ್ದರು.

  'ಜಾಗ್ವಾರ್' ನಂತರ 'ಸೀತಾರಾಮ ಕಲ್ಯಾಣ'

  'ಜಾಗ್ವಾರ್' ನಂತರ 'ಸೀತಾರಾಮ ಕಲ್ಯಾಣ'

  'ಜಾಗ್ವಾರ್' ಚಿತ್ರವನ್ನ ನಿರ್ಮಾಣ ಮಾಡಿದ್ದ ಕುಮಾರಸ್ವಾಮಿ ಈಗ ನಿಖಿಲ್ ಅಭಿನಯದಲ್ಲಿ ತಯಾರಾಗುತ್ತಿರುವ ಎರಡನೇ ಸಿನಿಮಾ 'ಸೀತಾರಾಮ ಕಲ್ಯಾಣ'ಗೆ ಬಂಡವಾಳ ಹಾಕಿದ್ದಾರೆ. ರಚಿತಾ ರಾಮ್ ನಾಯಕಿಯಾಗಿದ್ದು, ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಶೂಟಿಂಗ್ ನಡೆಯುತ್ತಿದೆ.

  ವಿತರಣೆ ಮಾಡಿದ ಸಿನಿಮಾಗಳು

  ವಿತರಣೆ ಮಾಡಿದ ಸಿನಿಮಾಗಳು

  ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡುವುದಕ್ಕೂ ಮುಂಚೆ ಎಚ್.ಡಿ ಕುಮಾರಸ್ವಾಮಿ ಕೆಲವು ಚಿತ್ರಗಳನ್ನ ವಿತರಣೆ ಕೂಡ ಮಾಡಿದ್ದಾರೆ. ವಿಷ್ಣುವರ್ಧನ್ ಅಭಿನಯಿಸಿದ್ದ 'ಹಾಲುಂಡ ತವರು' ಮತ್ತು 'ಪಂಚಮವೇದ' ಚಿತ್ರಗಳನ್ನ ವಿತರಣೆ ಮಾಡಿದ್ದರು.

  English summary
  Karnataka chief minister hd kumaraswamy produced 6 kannada movies and distributed 2 movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X