twitter
    For Quick Alerts
    ALLOW NOTIFICATIONS  
    For Daily Alerts

    ಮಂಡ್ಯ ಪ್ರಚಾರದಲ್ಲಿ ವಿಷ್ಣು ಸ್ಮಾರಕ ಕೂಗು: ಅಭಿಮಾನಕ್ಕೆ ತಲೆಬಾಗಿದ ಸಿಎಂ

    |

    Recommended Video

    ಡಾ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವುದಾಗಿ ಭರವಸೆ ಕೊಟ್ಟ ಎಚ್ ಡಿ ಕುಮಾರಸ್ವಾಮಿ

    ಮಂಡ್ಯ ಲೋಕಸಭೆ ಅಖಾಡ ರಣರಂಗವಾಗಿದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಅಬ್ಬರ ಪ್ರಚಾರ ನಡೆಯುತ್ತಿದೆ. ಒಂದು ಕಡೆ ಸಿಎಂ ಇನ್ನೊಂದು ಕಡೆ ಯಶ್-ದರ್ಶನ್ ಬಿರುಸಿನ ಮತಯಾಚನೆ ನಡೆಸಿದರು.

    ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

    ಬುಧವಾರ ನಿಖಿಲ್ ಪರವಾಗಿ ಪ್ರಚಾರ ಮಾಡಿದ ಸಿಎಂ, ಡಾ ವಿಷ್ಣುವರ್ಧನ್ ಸ್ಮಾರಕದ ಬಗ್ಗೆ ಭರವಸೆ ನೀಡಿ ಗಮನ ಸೆಳೆದರು. ಮಂಡ್ಯದ ಹಳ್ಳಿಯೊಂದರಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ವಿಷ್ಣುವರ್ಧನ್ ಅಭಿಮಾನಿಗಳು ಸಿಎಂಗೆ ಬೇಡಿಕೆ ಇಟ್ಟರು.

    ಸತ್ತ ಮೇಲೂ ನಾನು ವಿಷ್ಣು ಅಭಿಮಾನಿ ಎಂದು ಜಗತ್ತಿಗೆ ಸಾರಿದ ದಾದಾ ಸೇನಾನಿಸತ್ತ ಮೇಲೂ ನಾನು ವಿಷ್ಣು ಅಭಿಮಾನಿ ಎಂದು ಜಗತ್ತಿಗೆ ಸಾರಿದ ದಾದಾ ಸೇನಾನಿ

    ಇದಕ್ಕೆ ಪ್ರತಿಯಾಗಿ ಸ್ಪಂದಿಸಿದ ಕುಮಾರಸ್ವಾಮಿ ''ಡಾ ವಿಷ್ಣುವರ್ಧನ್ ಅವರ ನಿಧನರಾದಾಗ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ಮಾಡಲು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹೇಳಿದ್ದು ನಾನು. ಅಂದು ಜಯನಗರದಲ್ಲಿ ಅಂತ್ಯಕ್ರಿಯೆ ಮಾಡಲು ಕುಟುಂಬದವರು ನಿರ್ಧರಿಸಿದ್ದರು'' ಎಂದು ಸಿಎಂ ಅಭಿಮಾನಿಗಳಿಗೆ ಮನವರಿಕೆ ಮಾಡಿಕೊಟ್ಟರು.

    'ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ'ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ

    ಇನ್ನು ಸ್ಮಾರಕ ನಿರ್ಮಾಣ ಮಾಡಿ ಎಂದು ಕೇಳಿದ ಅಭಿಮಾನಿಗಳಿಗೆ ''ಚುನಾವಣೆ ನಂತರ ಯಾವ ರೀತಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ನೀವು ಆದೇಶ ಮಾಡಿ, ನಾನು ಮಾಡಿಕೊಡುತ್ತೇನೆ'' ಎಂದು ಭರವಸೆ ನೀಡಿದರು.

    hd kumaraswamy promised to dr vishnuvardhan fans

    ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಆಗಲಿ ಎಂದು ಕೋಟ್ಯಾಂತರ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಆದ್ರೆ, ಅಲ್ಲಿನ ಜಾಗ ವಿವಾದಕ್ಕೆ ಗುರಿಯಾಗಿದ್ದು, ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವಂತೆ ಕುಟುಂಬ ಕೇಳಿಕೊಂಡಿದೆ.

    ಹಾಗಾಗಿ, ವಿಷ್ಣು ಸ್ಮಾರಕ ವಿವಾದ ಇದುವರೆಗೂ ಬಗೆಹರಿಯದ ಸಮಸ್ಯೆಯಾಗಿ ಉಳಿದುಕೊಂಡಿದೆ. ಎಲೆಕ್ಷನ್ ಮುಗಿದ ಮೇಲೆ ಮಾಡೋಣ ಎಂದಿರುವ ಸಿಎಂ, ಆದಷ್ಟೂ ಬೇಗ ಈ ಒಳ್ಳೆಯ ಕೆಲಸ ಮಾಡಿಕೊಡಲಿ ಎಂಬುದಷ್ಟೇ ದಾದಾ ಅಭಿಮಾನಿಗಳ ಕೋರಿಕೆ.

    English summary
    Chief minister hd kumaraswamy promised to dr vishnuvardhan fans about vishnu memorial.
    Wednesday, April 10, 2019, 19:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X