For Quick Alerts
  ALLOW NOTIFICATIONS  
  For Daily Alerts

  ಯಾರೋ ನಾಲ್ಕು ಜನ 'ಡಿ ಬಾಸ್' ಅಂತಾರೆ: ದರ್ಶನ್ ವಿರುದ್ಧ ಸಿಎಂ ವಾಗ್ದಾಳಿ

  |
  Lok Sabha Elections 2019 : ಮತ್ತೆ ನಟ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ ಎಚ್ ಡಿ ಕುಮಾರಸ್ವಾಮಿ

  ಮಂಡ್ಯ ಚುನಾವಣೆ ಈಗ ವೈಯಕ್ತಿಕ ಟೀಕೆಗಳಿಂದ ಸದ್ದು ಮಾಡ್ತಿದೆ. ಪಕ್ಷೇತರ ಅಭ್ಯರ್ಥಿ ಪರ ನಿಂತಿರುವ ನಟ ದರ್ಶನ್ ಅವರ ವಿರುದ್ಧ ಸಿಎಂ ಎಚ್ ಡಿ ಕುಮಾರಸ್ವಾಮಿ ಸಿಡಿದೆದ್ದಿದ್ದಾರೆ. 'ನಾವು ಜೋಡೆತ್ತುಗಳು' ಎಂದು ಹೇಳಿದ್ದ ದರ್ಶನ್ ಹೇಳಿಕೆಗೆ ತಿರುಗೇಟು ನೀಡಿದ್ದ ಸಿಎಂ 'ಅದು ಜೋಡತ್ತುಗಳಲ್ಲ, ಕಳ್ಳೆತ್ತುಗಳು' ಎಂದಿದ್ದರು.

  'ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಯಾರದು? ಅದು ಸಿನಿಮಾಗೆ ಮಾತ್ರ, ಜನರಿಗೆ ಡಿ ಬಾಸ್ ಆಗೋಕೆ ಆಗಲ್ಲ. ರೈತರಿಗೆ ಡಿ ಬಾಸ್ ಆಗೋಕೆ ಆಗಲ್ಲ' ಎಂದು ಎಚ್ಡಿಕೆ ದರ್ಶನ್ ವಿರುದ್ಧ ಕಿಡಿಕಾರಿದ್ದರು.

  'ಡಿ ಬಾಸ್ ಯಾರು' ಎಂದು ಕೇಳಿದ್ದ ಸಿಎಂಗೆ ದರ್ಶನ್ ಪ್ರತಿಕ್ರಿಯೆ

  ಸಿಎಂ ಅವರ ಈ ಹೇಳಿಕೆಗೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ದರ್ಶನ್ ''ಇದು ಅಭಿಮಾನಿಗಳು ಕೊಟ್ಟಿರುವ ಪ್ರೀತಿಯ ಭಿಕ್ಷೆ'' ಎಂದು ಪರೋಕ್ಷವಾಗಿ ಮುಖ್ಯಮಂತ್ರಿಗೆ ತಿರುಗೇಟು ನೀಡಿದ್ದರು. ಈ ಹೇಳಿಕೆ ನಂತರ ಸಿಎಂ ಕುಮಾರಸ್ವಾಮಿ ಮತ್ತೆ ದರ್ಶನ್ ವಿರುದ್ಧ ಗುಡುಗಿದ್ದಾರೆ. ಏನಂದ್ರು? ಮುಂದೆ ಓದಿ.....

  ಯಾರೋ ನಾಲ್ಕು ಜನ ಕೊಟ್ಟಿರೋದು

  ಯಾರೋ ನಾಲ್ಕು ಜನ ಕೊಟ್ಟಿರೋದು

  ಡಿ ಬಾಸ್ ಅನ್ನೋದು ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಿರೋದು ಎಂದು ದರ್ಶನ್ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ''ಅವರದ್ದೇ ಅಭಿಮಾನಿ ಸಂಘಗಳು ಕೊಟ್ಟಿರ್ತಾರೆ, ಆರೂವರೆ ಕೋಟಿ ಜನ ಕೊಟ್ಟಿರೋದಾ?. ಯಾರೋ ನಾಲ್ಕು ಜನ ಕೊಟ್ಟಿರ್ತಾರೆ ಬಿಡಿ'' ಎಂದು ಪ್ರಶ್ನಿಸಿದ್ದಾರೆ.

  ಜೋಡೆತ್ತುಗಳ ವಿರುದ್ಧ ಸಿಎಂ ಕುಮಾರಸ್ವಾಮಿ ಗರಂ: ಯಾರದು ಡಿ ಬಾಸ್?

  ನನ್ನ ಮಗನ್ನ ಯುವರಾಜ ಅಂತಾರೆ

  ನನ್ನ ಮಗನ್ನ ಯುವರಾಜ ಅಂತಾರೆ

  ''ನನ್ ಮಗನಿಗೂ ಯುವರಾಜ ಅಂತ ಕೊಟ್ಟಿದ್ದಾರೆ. ಅದು ಯಾರೋ ನಾಲ್ಕು ಜನ. ಹಾಗಂತ ನಾವೇನೋ ಆಗ್ಬಿಟ್ಟಿದ್ದೀವಿ ಅಂತ ಮೆರೆಯೋಕೆ ಆಗುತ್ತಾ'' ಎಂದು ಸಿಎಂ ಕುಮಾರಸ್ವಾಮಿ ನಟ ದರ್ಶನ್ ವಿರುದ್ಧ ಟೀಕಿಸಿದ್ದಾರೆ.

  ಜೋಡೆತ್ತುಗಳು ಕಾಣೆಯಾಗಿದೆ ಎಂದು ಕೂಗುತ್ತಿರುವವರಿಗೆ ಸುಮಲತಾ ಸ್ಪಷ್ಟನೆ

  ದರ್ಶನ್ ವರ್ಸಸ್ ಸಿಎಂ

  ದರ್ಶನ್ ವರ್ಸಸ್ ಸಿಎಂ

  ಸದ್ಯದ ಪರಿಸ್ಥಿತಿ ನೋಡಿದ್ರೆ ಮಂಡ್ಯ ಚುನಾವಣೆ ಸಿಎಂ ವರ್ಸಸ್ ದರ್ಶನ್ ಎನ್ನುವಂತಾಗಿದೆ. ಯಾಕಂದ್ರೆ, ಮಂಡ್ಯದಲ್ಲಿ ಸುಮಲತಾ ಎದುರು ನಿಖಿಲ್ ಕುಮಾರ್ ಸ್ಪರ್ಧೆ ಮಾಡಿದ್ದಾರೆ. ನಿಖಿಲ್ ಪರ ಸಿಎಂ ನಿಂತಿದ್ದು, ಸುಮಲತಾ ಪರ ದರ್ಶನ್ ಮತ್ತು ಯಶ್ ನಿಂತಿದ್ದಾರೆ. ಹಾಗಾಗಿ, ದರ್ಶನ್ ಅವರು ಟಾರ್ಗೆಟ್ ಆಗ್ತಿದ್ದಾರೆ ಎನ್ನಲಾಗುತ್ತಿದೆ.

  ಶಾಂತಿ ಕಾಪಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ ದರ್ಶನ್

  ಶಾಂತಿಯುತ ಚುನಾವಣೆ ನಡೆಯಲಿ

  ಶಾಂತಿಯುತ ಚುನಾವಣೆ ನಡೆಯಲಿ

  ಮತ್ತೊಂದೆಡೆ ಮಂಡ್ಯದಲ್ಲಿ ಶಾಂತಿಯುತ ಮತದಾನ ಆಗಬೇಕು ಎಂದು ಸುಮಲತಾ ಮತ್ತು ದರ್ಶನ್ ಕೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ದರ್ಶನ್ ಕೂಡ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಜನರಿಗೆ, ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

  English summary
  Chief minister hd kumaraswamy again Questioned, who gave d Boss title to him?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X