For Quick Alerts
  ALLOW NOTIFICATIONS  
  For Daily Alerts

  ಏನು.. ಮಂಡ್ಯದಲ್ಲಿ 'ಸೀತಾರಾಮ ಕಲ್ಯಾಣ' ಫ್ರೀ ಟಿಕೆಟ್ ಹಂಚುತ್ತಿದ್ದಾರಾ?

  |
  ಮಂಡ್ಯದಿಂದ ನಿಖಿಲ್ ಸ್ಪರ್ಧೆ?, ಮೌನ ಮುರಿದ ಎಚ್.ಡಿ.ಕುಮಾರಸ್ವಾಮಿ..! | Oneindia Kannada

  'ಯುವರಾಜ' ನಿಖಿಲ್ ಕುಮಾರ್ ರನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಲು ಮಂಡ್ಯದಲ್ಲಿ 'ಸೀತಾರಾಮ ಕಲ್ಯಾಣ' ಚಿತ್ರದ ಫ್ರೀ ಟಿಕೆಟ್ ಗಳನ್ನು ಹಂಚಲಾಗುತ್ತಿದೆ ಎಂಬ ಸುದ್ದಿ ದಿಢೀರನೆ ಹಬ್ಬಿದೆ.

  ವಾಸ್ತವಕ್ಕೆ ದೂರವಾಗಿರುವ ಈ ಸುದ್ದಿಯನ್ನು ಇಂದು 'ಸೀತಾರಾಮ ಕಲ್ಯಾಣ' ಚಿತ್ರದ ನಿರ್ಮಾಪಕರೂ ಆಗಿರುವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಳ್ಳಿ ಹಾಕಿದರು.

  ಮಂಡ್ಯದಿಂದ ನಿಖಿಲ್ ಸ್ಪರ್ಧೆ?, ಮೌನ ಮುರಿದ ಎಚ್.ಡಿ.ಕುಮಾರಸ್ವಾಮಿ

  ಇದೇ ವಿಷಯವಾಗಿ ಕಿಡಿಕಾರಿದ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಫ್ರೀಯಾಗಿ ಟಿಕೆಟ್ ಹಂಚುತ್ತಿದ್ದರೆ, ರಾಜ್ಯದ ಉಳಿದೆಡೆ ಸಿನಿಮಾ ಹೇಗೆ ನಡೆಯುತ್ತಿದೆ ಅಂತ ಒಮ್ಮೆ ನೋಡಿಕೊಂಡು ಬನ್ನಿ ಎಂದು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ತಿರುಗೇಟು ನೀಡಿದರು. ಮುಂದೆ ಓದಿರಿ...

  ಚೀಪ್ ರಾಜಕೀಯ

  ಚೀಪ್ ರಾಜಕೀಯ

  ''ಇಷ್ಟೊಂದು ಚೀಪಾಗಿ ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನಿಖಿಲ್ ಅಭಿನಯದ ಬಗ್ಗೆ ತುಂಬಾ ಜನ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಇದು ಮುಖ್ಯಮಂತ್ರಿಯಾಗಿ ಅಥವಾ ನಿಖಿಲ್ ತಂದೆಯಾಗಿ ನಾನು ಆಡುತ್ತಿರುವ ಮಾತಲ್ಲ'' ಎಂದಿದ್ದಾರೆ ಎಚ್.ಡಿ.ಕುಮಾರಸ್ವಾಮಿ.

  ಮೊಮ್ಮಗನ 'ಸೀತಾರಾಮ ಕಲ್ಯಾಣ' ಮೆಚ್ಚಿದ ತಾತ ಎಚ್.ಡಿ.ದೇವೇಗೌಡ

  ರಾಜಕೀಯಕ್ಕೆ ಬರ್ತಾರಾ ನಿಖಿಲ್

  ರಾಜಕೀಯಕ್ಕೆ ಬರ್ತಾರಾ ನಿಖಿಲ್

  ''ನಿಖಿಲ್ ಕುಮಾರ್ ಗೆ ನಟನೆ ಬಗ್ಗೆ ಆಸಕ್ತಿ ಇದೆ. ರಾಜಕೀಯಕ್ಕೆ ಬರಬೇಕು ಎಂದರೆ ಖಂಡಿತ ಚುನಾವಣೆಗೆ ನಿಲ್ಲಿಸುತ್ತೇನೆ. ಆದರೆ ಆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ'' ಎಂದು ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

  'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಿಖಿಲ್ ಅಭಿನಯ ಕಂಡು ಚಪ್ಪಾಳೆ ತಟ್ಟಿದ ಸುದೀಪ್.!

  ಎಲ್ಲೂ ಹಾಗೆ ಹೇಳಿಲ್ಲ.!

  ಎಲ್ಲೂ ಹಾಗೆ ಹೇಳಿಲ್ಲ.!

  ''ಮಂಡ್ಯದಲ್ಲಿ ನಿಖಿಲ್ ಕುಮಾರ್ ಸ್ಪರ್ಧೆ ಮಾಡುವ ಬಗ್ಗೆ ನಾವು ಎಲ್ಲೂ ಹೇಳಿಲ್ಲ. ಮಂಡ್ಯದಲ್ಲಿ ದೇವೇಗೌಡರು ಸ್ಪರ್ಧಿಸಿದರೆ ಅವರ ಪರ ಕೆಲಸ ಮಾಡುವೆ ಎಂದು ನಿಖಿಲ್ ಹೇಳಿದ್ದಾನೆ'' ಎಂದು ಎಚ್.ಡಿ.ಕುಮಾರಸ್ವಾಮಿ ನುಡಿದರು.

  'ಸೀತಾರಾಮ ಕಲ್ಯಾಣ' ನೋಡಿ ಭಲೇ ಭಲೇ ಎಂದ ರಾಜಕಾರಣಿಗಳು.!

  ಒಂದು ವೇಳೆ...

  ಒಂದು ವೇಳೆ...

  ''ಮಂಡ್ಯ ಕ್ಷೇತ್ರ ನಮ್ಮ ಪಕ್ಷದ ಭದ್ರಕೋಟೆ. ಒಂದು ವೇಳೆ ಮಂಡ್ಯದಿಂದ ಅಂಬರೀಶ್ ಕುಟುಂಬದವರು ಸ್ಪರ್ಧಿಸಿದರೆ ನಾವು ವಿರೋಧಿಸುವುದಿಲ್ಲ. ಅದು ಅವರ ವೈಯಕ್ತಿಕ ನಿರ್ಧಾರ. ಅಂಬರೀಶ್ ಕುಟುಂಬದವರು ನಮ್ಮ ಪಕ್ಷಕ್ಕೆ ಸೇರಿದವರಲ್ಲ'' ಎಂದಿದ್ದಾರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.

  English summary
  HD Kumaraswamy rubbishes the rumors regarding 'Seetharama Kalyana' free tickets distribution in Mandya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X