For Quick Alerts
  ALLOW NOTIFICATIONS  
  For Daily Alerts

  'ಭೂಮಿಪುತ್ರ' ಸಿನಿಮಾ ಹಿಂದಿದ್ಯಾ ಎಚ್.ಡಿ.ಕೆ ಚುನಾವಣಾ ರಣತಂತ್ರ.?

  By Harshitha
  |

  'ಜೆ.ಡಿ.ಎಸ್' ದಳಪತಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕೈಗೊಂಡ ಜನಪರ ಕಾರ್ಯಕ್ರಮಗಳ ಕುರಿತು 'ಕಲಾ ಸಾಮ್ರಾಟ್' ಎಸ್.ನಾರಾಯಣ್ 'ಭೂಮಿಪುತ್ರ' ಎಂಬ ಸಿನಿಮಾ ರೆಡಿ ಮಾಡುತ್ತಿರುವ ಸುದ್ದಿ ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನೀವೆಲ್ಲ ಓದಿದ್ರಿ. [ಬೆಳ್ಳಿತೆರೆಯಲ್ಲಿ ಮೂಡಲಿದೆ ಜೆಡಿಎಸ್ 'ದಳಪತಿ'ಯ T20 ಆಡಳಿತ]

  'ಇದೀಗ ಈ ಸಿನಿಮಾದ ಹಿಂದೆ ಚುನಾವಣಾ ರಣತಂತ್ರ ಇದೆ!' ಎಂಬ ಪುಕಾರು ರಾಜಕೀಯ ವಲಯದಲ್ಲಿ ಹಬ್ಬಿದೆ. ಬರುವ ವಿಧಾನ ಸಭೆ ಚುನಾವಣೆಯನ್ನ ತಲೆಯಲ್ಲಿ ಇಟ್ಟುಕೊಂಡು ಎಚ್.ಡಿ.ಕುಮಾರಸ್ವಾಮಿ 'ಸಿನಿಮಾ' ಮೂಲಕ ಹೊಸ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಮುಂದೆ ಓದಿ....

  ಸೆಟ್ಟೇರಲಿದೆ 'ಭೂಮಿಪುತ್ರ' ಸಿನಿಮಾ

  ಸೆಟ್ಟೇರಲಿದೆ 'ಭೂಮಿಪುತ್ರ' ಸಿನಿಮಾ

  ವಿಧಾನ ಸಭೆ ಚುನಾವಣೆಗೆ ರಾಜಕೀಯ ರಂಗೇರಲು ಆರಂಭವಾಗುತ್ತಿರುವಾಗಲೇ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಅಗಿದ್ದಾಗ ಮಾಡಿರುವ ಸಾಧನೆ ಬಣ್ಣಿಸುವ 'ಭೂಮಿಪುತ್ರ' ಚಿತ್ರ ನಿರ್ಮಾಣಕ್ಕೆ ಅವರ ಅಭಿಮಾನಿಯೊಬ್ಬರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

  ಎಚ್.ಡಿ.ಕೆ ವರ್ಚಸ್ಸು ಹೆಚ್ಚಿಸಲು ಈ ಸಿನಿಮಾ.?

  ಎಚ್.ಡಿ.ಕೆ ವರ್ಚಸ್ಸು ಹೆಚ್ಚಿಸಲು ಈ ಸಿನಿಮಾ.?

  ಎಲೆಕ್ಷನ್ ಹೊತ್ತಿಗೆ ಎಚ್.ಡಿ.ಕುಮಾರಸ್ವಾಮಿ ಅವರ ವರ್ಚಸ್ಸು ಹೆಚ್ಚಿಸಲು ಈ ಸಿನಿಮಾ ಸಹಕಾರಿ ಆಗಲಿದೆ ಎಂಬ ಮಾತುಗಳು ಈಗಾಗಲೇ ರಾಜಕೀಯ ರಂಗದಲ್ಲಿ ಕೇಳಿಬರುತ್ತಿದೆ. ಆದ್ರೆ, ಇದಕ್ಕೆ ಎಚ್.ಡಿ.ಕುಮಾರಸ್ವಾಮಿ ಹೇಳುವುದೇ ಬೇರೆ.!

  ಎಚ್.ಡಿ.ಕುಮಾರಸ್ವಾಮಿ ಹೇಳುವುದೇನು.?

  ಎಚ್.ಡಿ.ಕುಮಾರಸ್ವಾಮಿ ಹೇಳುವುದೇನು.?

  ''ಭೂಮಿಪುತ್ರ' ಚಿತ್ರವನ್ನ ನಾನು ನಿರ್ಮಾಣ ಮಾಡುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ, ನನ್ನಿಂದ ಸಹಾಯ ಪಡೆದುಕೊಂಡಿದ್ದ ಪ್ರಭುಕುಮಾರ್ ಎಂಬುವರು ನಿರ್ಮಾಣ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನಕ್ಕೆ ಅನುಕೂಲವಾಗಿ ಎಂಬ ಉದ್ದೇಶ ಅವರದ್ದು'' ಎನ್ನುತ್ತಾರೆ ಎಚ್.ಡಿ.ಕುಮಾರಸ್ವಾಮಿ

  ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡೆ

  ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡೆ

  '''ಭೂಮಿಪುತ್ರ' ಸಿನಿಮಾ ಮಾಡುವ ಕುರಿತು ಕೆಲ ತಿಂಗಳ ಹಿಂದೆ ಎಸ್.ನಾರಾಯಣ್ ಹಾಗೂ ಪ್ರಭುಕುಮಾರ್ ನನ್ನನ್ನ ಭೇಟಿ ಮಾಡಿದ್ದರು. ಆಗ ನಾನು ಒಪ್ಪಿಗೆ ನೀಡಿರಲಿಲ್ಲ. ಯುವ ಜನತೆಗೆ ಸ್ಫೂರ್ತಿ ನೀಡುವ ಹಾಗೆ ಸಿನಿಮಾ ಮಾಡುತ್ತೇವೆ, ವೈಭವೀಕರಿಸುವುದಿಲ್ಲ ಎಂದು ನನಗೆ ಭರವಸೆ ಕೊಟ್ಟ ಮೇಲೆ ಒಲ್ಲದ ಮನಸ್ಸಿನಿಂದ ಅನುಮತಿ ನೀಡಿದೆ'' - ಎಚ್.ಡಿ.ಕುಮಾರಸ್ವಾಮಿ

  ಎಚ್.ಡಿ.ಕೆ ಆಗಿ ಅರ್ಜುನ್ ಸರ್ಜಾ

  ಎಚ್.ಡಿ.ಕೆ ಆಗಿ ಅರ್ಜುನ್ ಸರ್ಜಾ

  'ಭೂಮಿಪುತ್ರ' ಚಿತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪಾತ್ರದಲ್ಲಿ ಅರ್ಜುನ್ ಸರ್ಜಾ ಮಿಂಚಲಿದ್ದಾರೆ. ಈಗಾಗಲೇ ತಮಿಳಿನ 'ಮೊದಲವನ್' ಚಿತ್ರದಲ್ಲಿ ಒಂದು ದಿನದ ಮುಖ್ಯಮಂತ್ರಿಯಾಗಿ ಅರ್ಜುನ್ ಸರ್ಜಾ ಗಮನ ಸೆಳೆದಿದ್ದರು.

  English summary
  JDS Leader, Karnataka EX CM HD Kumaraswamy spoke about Kannada Movie 'Bhumiputra' directed by S.Narayan produced by Prabhu Kumar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X