»   » ರಿಯಾಲಿಟಿ ಶೋಗಳ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಾಮೆಂಟ್.!

ರಿಯಾಲಿಟಿ ಶೋಗಳ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಾಮೆಂಟ್.!

Posted By:
Subscribe to Filmibeat Kannada

ಖಾಸಗಿ ವಾಹಿನಿಗಳು ಕನ್ನಡ ಚಿತ್ರಗಳ ಸ್ಯಾಟೆಲೈಟ್ ಹಕ್ಕುಗಳನ್ನು ಕೊಂಡುಕೊಳ್ಳುತ್ತಿಲ್ಲ. ಹೀಗಿದ್ದರೂ, ಅದೇ ಖಾಸಗಿ ವಾಹಿನಿಗಳಲ್ಲಿ ಸ್ಟಾರ್ ಹೀರೋಗಳು ರಿಯಾಲಿಟಿ ಶೋ ನಡೆಸಿಕೊಡುತ್ತಾರೆ. ಶೋಗಳಲ್ಲಿ ಬಿಜಿ ಇರುವ ಸ್ಟಾರ್ ಗಳು ಕಾಲ್ ಶೀಟ್ ಕೂಡ ನೀಡುವುದಿಲ್ಲ ಎಂಬ ಕಾರಣಕ್ಕೆ ಬೇಸೆತ್ತ ನಿರ್ಮಾಪಕರು ಕಳೆದ ವರ್ಷ ಬೀದಿಗಿಳಿದು ಹೋರಾಟ ಮಾಡಿದ್ದರು.

'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋ ಶುರುವಾಗುವ ಸಂದರ್ಭದಲ್ಲೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ನಿರ್ಮಾಪಕರು ಪ್ರತಿಭಟನೆ ನಡೆಸಿದ್ದರು. ['ಇವರು'ಗಳ ಮೇಲೆ ಮಾತ್ರ ಕನ್ನಡ ನಿರ್ಮಾಪಕರ ಸಿಡುಕು-ಮುನಿಸು.!]

ಈಗ ಇದೇ ವಿಚಾರಕ್ಕೆ ನಿರ್ಮಾಪಕರು ಕೂಡ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ.

ನಿರ್ಮಾಪಕರ ಪ್ರತಿಭಟನೆಗೆ ಎಚ್.ಡಿ.ಕೆ ಬೆಂಬಲ

ರಿಯಾಲಿಟಿ ಶೋಗಳಲ್ಲಿ ಸ್ಟಾರ್ ನಟರು ಭಾಗವಹಿಸುವುದರ ವಿರುದ್ಧ ನಿರ್ಮಾಪಕರು ಕೈಗೊಂಡಿದ್ದ ಪ್ರತಿಭಟನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಬಲ ನೀಡಿದ್ದಾರೆ. [ಪರಭಾಷೆ ಚಿತ್ರಗಳ ದಬ್ಬಾಳಿಕೆ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಗುಡುಗು!]

ಎಚ್.ಡಿ.ಕೆ ಹೇಳಿದಿಷ್ಟು...

''ರಿಯಾಲಿಟಿ ಶೋ ಕುರಿತಾಗಿ ಚೇಂಬರ್ ಕಡೆಯಿಂದ ನಿರ್ಮಾಪಕರು ಮಾಡಿದ ಪ್ರತಿಭಟನೆಗೆ ನನ್ನ ಕಡೆಯಿಂದ ಬೆಂಬಲ ಇದೆ'' ಅಂತ ನಿನ್ನೆ (ಅಕ್ಟೋಬರ್ 24) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಜಗ್ಗೇಶ್ ಮಾತಿಗೆ ತಿರುಗೇಟು ಕೊಟ್ಟ ಎಚ್.ಡಿ.ಕೆ

''ಜಗ್ಗೇಶ್ ರವರು ಒಂದು ಮಾತು ಹೇಳಿದ್ದರು, ''ಹೊಟ್ಟೆಗೆ ಊಟಕ್ಕೂ ಗತಿ ಇಲ್ಲದ ಕಲಾವಿದರು ಇದ್ದಾರೆ'' ಅಂತ. ಅಂತಹ ಕಲಾವಿದರನ್ನು ಹಾಕೊಂಡು ಉದ್ದಾರ ಮಾಡುವುದಾದರೆ ಓಕೆ. ಅದು ಬಿಟ್ಟು, ಸಿನಿಮಾಗಳಲ್ಲಿ ಟಾಪ್ ಆಗಿರುವ ಸ್ಟಾರ್ ನಟರನ್ನು ಇಟ್ಕೊಂಡು, ಟಿವಿಯಲ್ಲೂ ಪ್ರೋಗ್ರಾಂ ಮಾಡಿದರೆ ಸಿನಿಮಾ ನೋಡಲು ಯಾರು ಬರ್ತಾರೆ? ಈ ಬಗ್ಗೆ ಕಲಾವಿದರು ಕೂಡ ಅರ್ಥ ಮಾಡಿಕೊಳ್ಳಬೇಕು'' ಎಂದರು ಎಚ್.ಡಿ.ಕುಮಾರಸ್ವಾಮಿ.

ಕಸ್ತೂರಿ ವಾಹಿನಿಯಲ್ಲೂ ರಿಯಾಲಿಟಿ ಶೋ ಬೇಡ

''ಪ್ರೊಡ್ಯೂಸರ್ ಗಳಿಗೆ ತೊಂದರೆ ಆಗುತ್ತದೆ ಎಂದಾದರೆ, ನನ್ನ ಚಾನೆಲ್ ಕೂಡ ಸೇರಿದಂತೆ ರಿಯಾಲಿಟಿ ಶೋ ನಡೆಯಬಾರದು ಅಂತ ಹೇಳುತ್ತೇನೆ'' - ಎಚ್.ಡಿ.ಕುಮಾರಸ್ವಾಮಿ

English summary
Former Chief Minister, JDS Leader, Politician HD Kumaraswamy addressed the Press Meet yesterday (October 24th) at KFCC. During the Press Meet, HD Kumaraswamy openly supported Kannada Film Producers who protested against Reality Shows.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada