Don't Miss!
- Sports
BGT 2023: ಫೆಬ್ರವರಿ 1ರಂದು ರವೀಂದ್ರ ಜಡೇಜಾಗೆ ಫಿಟ್ನೆಸ್ ಪರೀಕ್ಷೆ: ಪಾಸಾದರೆ ಮಾತ್ರ ಟೆಸ್ಟ್ ತಂಡದಲ್ಲಿ ಸ್ಥಾನ
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನನ್ನ, ಸುಮಲತಾ ನಡುವೆ ಸಂಬಂಧ ಕಟ್ಟಲು HDK ಯತ್ನಿಸಿದ್ರು; ರಾಕ್ ಲೈನ್ ಗಂಭೀರ ಆರೋಪ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರೆಬಲ್ ಸ್ಟಾರ್ ಅಂಬರೀಶ್ ಕುಟುಂಬದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ರಾಕ್ ಲೈನ್ ವೆಂಕಟೇಶ್ ಗರಂ ಆಗಿದ್ದಾರೆ. ಅಂಬರೀಶ್ ಕುಟುಂಬದ ಅತ್ಯಾಪ್ತರಾಗಿರುವ ರಾಕ್ ಲೈನ್ ವೆಂಕಟೇಶ್, ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video
ತನ್ನ ಮತ್ತು ಸುಮಲತಾ ನಡುವೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಪ್ರಯತ್ನಪಟ್ಟಿದ್ದರು ಎಂದು ರಾಕ್ ಲೈನ್ ವೆಂಕಟೇಶ್, ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣೆ ಸಮಯದಲ್ಲಿ ನಾನು ಮತ್ತು ಸುಮಲತಾ ಸೇರಿದಂತೆ ಅನೇಕರು ಹೋಟೆಲ್ ನಲ್ಲಿ ಮೀಟಿಂಗ್ ಆರೆಂಜ್ ಮಾಡಿದ್ದೆವು. ಆಗ ಸುಮಲತಾ ಜೊತೆ ಹೋಟೆಲ್ ಒಳಗೆ ಹೋಗುತ್ತಿದ್ದ ವಿಡಿಯೋವನ್ನು ಸಿಸಿ ಕ್ಯಾಮರಾದಲ್ಲಿ ತೆಗೆಸಿಕೊಂಡು ಸಂಬಂಧ ಕಲ್ಪಿಸಲು ಮುಂದಾಗಿದ್ದರು ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ. ಮುಂದೆ ಓದಿ...

ಹೋಟೆಲ್ ವಿಡಿಯೋ ಅವರ ಬಳಿ ಇದೆ
"ಆಡಿಯೋ, ವಿಡಿಯೋ ಬಾಂಬ್ ಹೆದರಿಸುತ್ತಿದ್ದಾರಲ್ಲಾ. ಇದು ಹೊಸದಲ್ಲ. ಚುನಾವಣೆ ನಡೆಯುವ ಸಂದರ್ಭದಲ್ಲಿ ನಾನು ನನ್ನ ಜೊತೆಯಲ್ಲಿ ಅಂಬರೀಶ್ ಸ್ನೇಹಿತರು ತುಂಬಾ ಜನ ಚುನಾವಣೆ ಪ್ರಚಾರ, ಮೀಟಿಂಗ್ ಗೋಸ್ಕರ ಹೋಟೆಲ್ ನಲ್ಲಿ ಇದ್ವಿ. ನಾನು ಸುಮಲತಾ ಇಬ್ಬರೇ ಕಾರಿನಿಂದ ಇಳಿದು ಹೋಟೆಲ್ ಒಳಗೆ ಹೋಗುವ ವಿಡಿಯೋ ತೆಗೆದುಕೊಂಡಿದ್ದಾರೆ" ಎಂದು ರಾಕ್ ಲೈನ್ ಆರೋಪ ಮಾಡಿದ್ದಾರೆ.

ಚುನಾವಣೆ ಸಮಯದಲ್ಲಿ ವಿಡಿಯೋ ಬಿಡುಗಡೆಗೆ ಮುಂದಾಗಿದ್ರು
"ಹೋಟೆಲ್ ಸೆಕ್ಯೂರಿಟಿ ಯಿಂದ ಸಿಸಿ ಟಿವಿ ಫೂಟೇಜ್ ತೆಗೆದುಕೊಂಡು ಬಂದು ಸುಮಲತಾ ಮತ್ತು ರಾಕ್ ಲೈನ್ ಇಬ್ಬರು ಹೋಟೆಲ್ ರೂಮ್ ಗೆ ಹೋಗುತ್ತಿದ್ದಾರೆ ನೋಡಿ, ಇದನ್ನ ಸ್ಟೋರಿ ಮಾಡಿ ಎಂದಿದ್ದರು. ಅದಕ್ಕೆ ಯಾವುದ್ ಯಾವುದೋ ಅಶ್ಲೀಲ ಚಿತ್ರಗಳನ್ನು ತೆಗೆದುಕೊಂಡು ಸ್ಟೋರಿ ಮಾಡಿ ಅದನ್ನ ಆ ಚುನಾವಣೆ ಸಮಯದಲ್ಲಿ ಬಿಡುಗಡೆ ಮಾಡಬೇಕೆಂದು ಬಯಸಿದ್ದರು" ಎಂದು ರಾಕ್ ಲೈನ್ ಹೇಳಿದ್ದಾರೆ.

ಅವರ ಚಾನಲ್ ನವರೇ ಇದನ್ನ ಹೇಳಿದ್ರು
"ಇದನ್ನ ಹೇಳಿದ್ದು ಮತ್ಯಾರು ಅಲ್ಲ ಅವರ ಚಾನಲ್ಲಿನಲ್ಲಿದ್ದ ಅಂಬರೀಶ್ ಅಭಿಮಾನಿಯೇ ಹೇಳಿದ್ದು. ಈ ರೀತಿಯದೆಲ್ಲ ಪ್ಲಾನ್ ಮಾಡಿದ್ದಾರೆ ಅಂತ ಅವರ ಚಾನಲ್ ನವರೇ ಹೇಳಿದ್ದು. ಯಾವ ತರದ ಕೆಟ್ಟ ಮನಸ್ಸು, ಕೆಟ್ಟ ಬುದ್ದಿ ಇವರದ್ದು. ಇದನ್ನೆಲ್ಲ ಯಾಕೆ ಮಾಡಬೇಕು. ಒಟ್ನಲ್ಲಿ ಸುಮಲತಾ ಮುಖಕ್ಕೆ ಮಸಿಬಳಿದು ಏನೆಲ್ಲ ಮಾಡಬೇಕೊ ಅದನ್ನೆಲ್ಲ ಮಾಡುತ್ತೀರಿ. ಯಾಕೆ ಬೇಕು ಇದು. ಏನೆ ಮಾಡಿದ್ರು ಇವತ್ತು ತಂತ್ರಜ್ಞಾನ ತುಂಬಾ ದೊಡ್ಡದು, ನೀವು ಅನುಭವಿಸುತ್ತೀರಿ" ಎಂದು ರಾಕ್ ಲೈನ್ ಹೇಳಿದರು.

ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ
"ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇಟ್ಟುಕೊಂಡು ಮಾತನಾಡಿ. ಚಿತ್ರರಂಗ ಏನು ಮೋಸ ಮಾಡಿದೆ ನಿಮಗೆ. ಚಿತ್ರರಂಗದಿಂದ ಏನು ಲಾಭ ಪಡಿದ್ದೀರಿ ಎನ್ನುವುದು ನಿಮಗೆ ಗೊತ್ತು. ನಿಮ್ಮ ಮನೆಯವರು ಸಹ ಚಿತ್ರರಂಗದಲ್ಲಿ ಸುಮಾರು ಜನ ಇದ್ದಾರೆ. ಅದನ್ನು ಮರಿಬಾರ್ದು ನೀವು. ಮುಖ್ಯಮಂತ್ರಿ ಆಗಿದ್ದಾಗ ಚಿತ್ರರಂಗಕ್ಕೆ ಏನು ಮಾಡಿದ್ದಾರೆ. ಒಂದು ಕೆಲಸ ಮಾಡಿದ್ದೀರಾ? ನಾವು ನಿಮ್ಮನ್ನು ಕೇಳಿದ್ವಾ, ನಿಮ್ಮ ಮನಸ್ಥಿತಿ ಏನು ಅಂತ ಗೊತ್ತು. ನಾವು ನಿಮ್ಮನ್ನ ಕೇಳಲ್ಲ" ಎಂದು ರಾಕ್ ಲೈನ್ ಆಕ್ರೋಶ ವ್ಯಕ್ತಪಡಿಸಿದ್ರು.