TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ಚಿತ್ರರಂಗಕ್ಕೆ ಸಿಕ್ಕಿದ್ದೇನು?
ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು 2019-20ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ರೈತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಹಲವು ಯೋಜನೆಗಳನ್ನ ಘೋಷಿಸಿದ್ದಾರೆ.
ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಏನು ಸಿಗಲಿದೆ ಎಂಬ ಕುತೂಹಲ ಹೆಚ್ಚಿತ್ತು. ಯಾಕಂದ್ರೆ, ಸಿಎಂ ಕುಮಾರಸ್ವಾಮಿ ಅವರು ಮೂಲತಃ ನಿರ್ಮಾಪಕ ಹಾಗೂ ಚಿತ್ರರಂಗಕ್ಕೆ ಸಂಬಂಧಪಟ್ಟವರು. ಆದ್ರೆ, ಎಚ್ ಡಿ ಕೆ ಬಜೆಟ್ ನಲ್ಲಿ ಸಿನಿಮಾರಂಗಕ್ಕೆ ಯಾವ ದೊಡ್ಡ ಕೊಡುಗೆಯೂ ಸಿಕ್ಕಿಲ್ಲ. ಸಮಾಧಾನ ಅಂತಂದ್ರೆ ತುಳು, ಕೊಂಕಣಿ, ಕೊಡುವ ಚಲನಚಿತ್ರಗಳನ್ನ ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮಗಳನ್ನ ರೂಪಿಸಲು ನಿರ್ಧರಿಸಿದ್ದಾರೆ.
ಕರ್ನಾಟಕ ಬಜೆಟ್ 2019: ಎಚ್.ಡಿ ಕುಮಾರಸ್ವಾಮಿಯವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..
- ತುಳು, ಕೊಂಕಣಿ, ಕೊಡುವ ಚಲನಚಿತ್ರಗಳನ್ನ ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮಗಳನ್ನ ರೂಪಿಸಲಾಗುವುದು. ಈ ಉದ್ದೇಶದಿಂದ 19-20ನೇ ಸಾಲಿನಲ್ಲಿ 1 ಕೋಟಿ ರೂ ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದು ಘೋಷಿಸಿದ್ದಾರೆ.
ಕುಮಾರಸ್ವಾಮಿ ಬಜೆಟ್: ಸಾಲಮನ್ನಾ ಯೋಜನೆಗೆ 12,650 ಕೋಟಿ
- ಇದರ ಜೊತೆಗೆ ದಿವಂಗತ ಹಾಸ್ಯನಟ ನರಸಿಂಹರಾಜು ಅವರ ಸ್ಮರಾಣರ್ಥ ತಿಪಟೂರಿನಲ್ಲಿ ಸ್ಮಾರಕ ಸಭಾ ಮಂದಿರ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
ಕುಮಾರಣ್ಣನ ಬಜೆಟ್: ಮೈಸೂರಿನಿಂದ ರಾಮನಗರಕ್ಕೆ ಫಿಲ್ಮ್ ಸಿಟಿ ಶಿಫ್ಟ್
ಇದಕ್ಕೂ ಮುಂಚೆ ಕಳೆದ ಜುಲೈನಲ್ಲಿ ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ನಲ್ಲಿ ಚಿತ್ರರಂಗಕ್ಕೆ ಹಲವು ಕೊಡುಗೆ ನೀಡಿದ್ದರು. ಅದು ಮುಂದುವರಿಯಲಿದೆ. ಈ ಸಲ ಅಂತಹದ್ದೇನು ವಿಶೇಷವಿಲ್ಲ.