For Quick Alerts
  ALLOW NOTIFICATIONS  
  For Daily Alerts

  ಹೆಡ್ ಬುಷ್ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕ ಹಾಗೂ ಸಮಯ ಘೋಷಣೆ

  |

  ನಟ ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಚಿತ್ರ ಇದೇ ತಿಂಗಳ 21ಕ್ಕೆ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. ಅಗ್ನಿ ಶ್ರೀಧರ್ ಚಿತ್ರಕತೆ ಹಾಗೂ ಅನೂಪ್ ಶೂನ್ಯ ನಿರ್ದೇಶನವಿರುವ ಈ ಚಿತ್ರ ಬೆಂಗಳೂರು ಭೂಗತ ಲೋಕದ ಕತೆಯನ್ನು ಹೇಳಲು ಮುಂದಾಗಿದೆ. ಚಿತ್ರದ ಫಸ್ಟ್ ಲುಕ್‌ನಲ್ಲಿಯೇ ಧನಂಜಯ್ ಎಂಪಿ ಜಯರಾಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಸಿದ್ದ ಹೆಡ್ ಬುಷ್ ಚಿತ್ರತಂಡ ಇದೀಗ ಟ್ರೈಲರ್ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ.

  ಚಿತ್ರದ ಟ್ರೈಲರ್ ಇದೇ ತಿಂಗಳ 16ರಂದು ಬೆಳಗ್ಗೆ 11.07ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಾಯಕ ಡಾಲಿ ಧನಂಜಯ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ಚಿತ್ರದ ಪ್ರಿ ರಿಲೀಸ್ ಕೂಡ ಅದೇ ದಿನದಂದು ದಾವಣಗೆರೆಯ ಎಂಬಿಎ ಕಾಲೇಜು ಆವರಣದಲ್ಲಿ ಸಂಜೆ 5.30ಕ್ಕೆ ಜರುಗಲಿದೆ.

  ಈ ಕಾರ್ಯಕ್ರಮದಲ್ಲಿ ಹೆಡ್ ಬುಷ್ ಚಿತ್ರತಂಡದ ಜತೆ ಸ್ಯಾಂಡಲ್‌ವುಡ್ ಕ್ವೀನ್ ಮೋಹಕ ತಾರೆ ರಮ್ಯಾ, ಡಿಂಪಲ್ ಕ್ವೀನ್ ರಚಿತಾ ರಾಮ್, ಸಲಗ ನಟಿ ಸಂಜನಾ ಆನಂದ್, ಅಮೃತಾ ಅಯ್ಯಂಗಾರ್, ಕಾಂತಾರ ನಟಿ ಸಪ್ತಮಿ ಗೌಡ, ಸತೀಶ್ ನೀನಾಸಂ, ನಾಗಭೂಷಣ್, ವಾಸುಕಿ ವೈಭವ್, ಪನ್ನಗಾಭರಣ, ಗುಲ್ಟೂ ನಟ ನವೀನ್ ಶಂಕರ್ ಹಾಗೂ ನಿರಂಜನ್ ಭಾಗಿಯಾಗಲಿದ್ದಾರೆ.

  ಇನ್ನು ಕಾರ್ಯಕ್ರಮದ ಕುರಿತಾಗಿ ಈಗಾಗಲೇ ಹಲವು ಸೆಲೆಬ್ರಿಟಿಗಳು ಪೋಸ್ಟ್ ಹಂಚಿಕೊಂಡಿದ್ದು ಸ್ಯಾಂಡಲ್ ವುಡ್ ಕ್ವೀನ್ ಮೋಹಕ ತಾರೆ ರಮ್ಯಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ದಾವಣಗೆರೆಯ ಎಂಬಿಎ ಕಾಲೇಜು ಆವರಣದಲ್ಲಿ ಅಕ್ಟೋಬರ್ 16ರ ಸಂಜೆ 5.30ಕ್ಕೆ ನಡೆಯಲಿರುವ ಹೆಡ್ ಬುಷ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಚಿತ್ರತಂಡದ ಜೊತೆ ನಾನು ಸಹ ಆಗಮಿಸುತ್ತಿದ್ದೇನೆ, ಅಲ್ಲಿಯೇ ನಾವೆಲ್ಲರೂ ಸಿಗೋಣ್ವಾ ಎಂದು ಬರೆದುಕೊಂಡಿದ್ದಾರೆ.

  Read more about: dhananjaya ಧನಂಜಯ
  English summary
  Head Bush movie trailer release date and timings announced . Read on
  Thursday, October 13, 2022, 15:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X