»   » ಮಾರ್ಚ್ 30ಕ್ಕೆ ಮೊದಲ ಅನ್ ಕಟ್ ಸಿನಿಮಾ 'ಹೀಗೊಂದು ದಿನ' ತೆರೆಗೆ

ಮಾರ್ಚ್ 30ಕ್ಕೆ ಮೊದಲ ಅನ್ ಕಟ್ ಸಿನಿಮಾ 'ಹೀಗೊಂದು ದಿನ' ತೆರೆಗೆ

Posted By:
Subscribe to Filmibeat Kannada

ಎಲ್ಲ ಅಂದುಕೊಂಡಂತೆ ಆಗಿದ್ದರೇ ವಿಶ್ವ ಮಹಿಳಾ ದಿನದ ವಿಶೇಷವಾಗಿ 'ಹೀಗೊಂದು ದಿನ' ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದ್ರೆ, ವಾಣಿಜ್ಯ ಮಂಡಳಿಯ ಸಲಹೆ ಮೆರಗೆ ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಲಾಗಿತ್ತು. ಇದೀಗ, ಚಿತ್ರವನ್ನ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದ್ದು, ಮಾರ್ಚ್ 30 ರಂದು ತೆರೆಗೆ ಬರ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕನ್ನಡ ಚಿತ್ರರಂಗದಲ್ಲಿ ಮೊದಲ ಅನ್ ಕಟ್ (ಕತ್ತರಿಸಿದ) ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ನಟಿ ಸಿಂಧು ಲೋಕನಾಥ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

'ಹೀಗೊಂದು ದಿನ' ಚಿತ್ರದ ನಾಲ್ಕು ವಿಶೇಷತೆಗಳು

Heegondu Dina to release on march 30th

ಈ ಚಿತ್ರಕ್ಕೆ ವಿಕ್ರಮ್ ಯೋಗಾನಂದ್ ಆಕ್ಷನ್ ಕಟ್ ಹೇಳಿದ್ದು, ವಿಕಾಸ್ ಕಥೆಯನ್ನು ಹೆಣೆದಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಬಂಡವಾಳ ಹೂಡಿದ್ದು, ಅಭಿಲಾಷ್ ಗುಪ್ತಾ ಸಂಗೀತ ಸಂಯೋಜನೆ ಮಾಡಿದ್ದಾರೆ.

'ಹೀಗೊಂದು ದಿನ' ಮುಂದೋಗಿದೆ: 'ಬದುಕೇ ಅಚ್ಚರಿ' ಹಾಡು ಮೋಡಿ ಮಾಡಿದೆ.!

ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆಯುತ್ತಿದೆ. ಸಿಂಧು ಲೋಕನಾಥ್ ಮುಖ್ಯ ಪಾತ್ರ ನಿರ್ವಹಿಸಿದ್ದರೇ, 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ'ಯ ಪ್ರವೀಣ್, ಹಿರಿಯ ನಟಿ ಗಿರಿಜಾ ಲೋಕೇಶ್, ಪದ್ಮಜಾ ರಾವ್, ಗುರುಪ್ರಸಾದ್, ಶೋಭರಾಜ್, ಮಿತ್ರ, ಗಿರಿ, ಬಾಲಾಜಿ ಮನೋಹರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

English summary
Kannada actress sindhu loknath starrer kannada movie Heegondu Dina is ready to release on march 30th. the movie directed by vikram yogananda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X